ಮೂರು ದಿನಗಳ ‘ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ 30 ರವರೆಗೆ ಜೆ ಎಸ್ ಬಿ ಪ್ರತಿಷ್ಠಾನ, ಕೊಳ್ಳೇಗಾಲ ಇವರ ವತಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯಲಿದೆ.
ಸಹಜ ಕೃಷಿ ವಿಜ್ಞಾನಿ ಡಾ| ಮಂಜುನಾಥ ಹೆಚ್ ನೇತೃತ್ವದಲ್ಲಿ ನಡೆಯುವ ಈ ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು, ವಿಷಯ ತಜ್ಞರು, ಪರಿಣಿತರು, ಕೃಷಿ ವಿಜ್ಞಾನಿಗಳು ಮತ್ತು ಅನುಭವಿ ಕೃಷಿಕರೊಂದಿಗೆ, ಸುಸ್ಥಿರ ಕೃಷಿಯಲ್ಲಿ ಆಸಕ್ತಿಯುಳ್ಳವರು, ಉತ್ತಮ ಆರೋಗ್ಯ ಮತ್ತು ಜೀವನಕ್ಕಾಗಿ, ಪೌಷ್ಟಿಕ ಆಹಾರ ಮತ್ತು ಒತ್ತಡ ಮುಕ್ತ ಜೀವನ ಬಯಸುವ, ಹೊಸ ತೋಟವನ್ನು ನಿರ್ಮಿಸುವ ಕನಸು ಹೊಂದಿರುವವರು, ಈಗಾಗಲೇ ಕೃಷಿಯಲ್ಲಿ ತೊಡಗಿರುವವರನ್ನು ಮೂರು ದಿನಗಳ ಸಮಗ್ರ, ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರಕ್ಕೆ ಆಹ್ವಾನಿಸಲಾಗಿದೆ.
ಕಾರ್ಯಗಾರದಲ್ಲಿ : ಮಣ್ಣಿನ ಅಧ್ಯಯನ, ಬೆಳೆ ಸಂಯೋಜನೆ, ಗಿಡಗಳಲ್ಲಿ ಪೋಷಕಾಂಶಗಳ ಕೊರತೆಯ ಲಕ್ಷಣಗಳು, ಸೂಕ್ಷ್ಮ ಜೀವಾಣುಗಳ ತಯಾರಿಕೆ, ಉತ್ತಮ ಗೊಬ್ಬರ ತಯಾರಿಕೆ, ತೋಟಗಳ ಅಧ್ಯಯನ ಮತ್ತು ಪ್ರಾತ್ಯಕ್ಷಿಕೆ ಜೊತೆಗೆ ಸಾಕಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.
ಬಿಡುವಿನ ವೇಳೆಯಲ್ಲಿ ಗುಂಪು ಚರ್ಚೆಗಳು, ಪ್ರಾತ್ಯಕ್ಷಿಕೆ, ವಿಚಾರ ವಿನಿಮಯ ಮತ್ತು ಶ್ರಮದಾನ ಇರುತ್ತದೆ. ಮುಂಚಿತವಾಗಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ನೇರ ಭೇಟಿಗೆ ಅವಕಾಶವಿಲ್ಲ. ತರಬೇತಿ ಶುಲ್ಕ : ₹1000/- ಒಬ್ಬರಿಗೆ ವಸತಿ ಸಹಿತ ಕಾರ್ಯಕ್ರಮವಾಗಿದ್ದು, ಸರಳ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ.
ಸ್ಥಳ : ಕೃಷಿಕ ರಾಜೇಶ್ ಅವರ ತೋಟ, ದುಗ್ಗಹಟ್ಟಿ, ಯಳಂದೂರು ತಾಲೂಕು, ಚಾಮರಾಜನಗರ ಜಿಲ್ಲೆ, ಕರ್ನಾಟಕ. ನೋಂದಣಿಗಾಗಿ: ಶಶಿಕುಮಾರ್, ಕೃಷಿಕರು, ಮೊಬೈಲ್ : 9880949689
ಮಾಹಿತಿ: ಪ್ರಶಾಂತ್ ಜಯರಾಮ್, ಕೃಷಿಕರು-ಕೃಷಿ ಸಲಹೆಗಾರರು
ಸಾರ್ವಜನಿಕ ಬದುಕು ಅಂದರೆ ಹತ್ತಾರು ಜನರೊಡನೆ ಕೂಡಿ ಕೆಲಸ ಮಾಡಬೇಕು.ಈ ಹತ್ತಾರು ಜನ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹಾವೇರಿ, ಗದಗ, ವಿಜಯನಗರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ…
ಕೂಲಿ ಕಾರ್ಮಿಕರು ಜೀವನ ನಿರ್ವಹಣೆ ಮಾಡಲು ದೂರದ ನಗರಗಳಿಗೆ ವಲಸೆ ಹೋಗದೆ ಉದ್ಯೋಗ…
ಮುಂದಿನ ಮೂರು ದಿನಗಳ ಕಾಲ ರಾಜ್ಯದ ಕೆಲವೆಡೆ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ…
ಭಾರತದಲ್ಲಿ 1.4 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ ಸುಮಾರು…