ಸ್ವರಶ್ರೀ 2022 | ಸಂಗೀತವೆಂಬುದು ಒಲಿಯುವ ವಿದ್ಯೆ – ವಿದ್ವಾನ್ ಕಾಂಚನ ಎ. ಈಶ್ವರ ಭಟ್

Advertisement

ಮಂಗಳೂರಿನ ಶ್ರೀ ಸಂಗೀತ ಪಾಠಶಾಲೆಯ ವಾರ್ಷಿಕೋತ್ಸವ ‘ಸ್ವರಶ್ರೀ 2022’ ಭಾನುವಾರ ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ನಡೆಯಿತು.

Advertisement

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಮಾತನಾಡಿ ‘ಸಂಗೀತ ಶಾಸ್ತ್ರವನ್ನು ಕಲಿತರೆ ಸಾಲದು ಪ್ರಯೋಗಾನುಭವ ಬಹಳ ಮುಖ್ಯ. ಸಂಗೀತವೆಂಬುದು ದೈವೀ ವಿದ್ಯೆ. ಗುರುವಿನ ಮೂಲಕ ಮಾತ್ರ ಕಲಿಯಬಹುದಾದ ವಿದ್ಯೆ. ಶಿಷ್ಯನಿಗೆ ಈ ವಿದ್ಯೆ ಎಷ್ಟರ ಮಟ್ಟಿಗೆ ಸಿದ್ಧಿಸಬಹುದೆಂಬುದು ಗುರು-ಶಿಷ್ಯರಿಬ್ಬರಿಗೂ ತಿಳಿದಿರುವುದಿಲ್ಲ. ಶಿಷ್ಯನಿಗೆ ಎಷ್ಟು ಪ್ರಾಪ್ತಿಯಾಗುವುದೋ ಅದು ಭಗವಂತನಿಗೆ ಮಾತ್ರ ತಿಳಿದಿರುತ್ತದೆ. ಸಂಗೀತ ಬರುವುದಲ್ಲ; ಅದು ಒಲಿಯುವುದು. ಸಂಗೀತವೆಂಬುದು ಕೇವಲ ಕಲಿಯುವ ವಿದ್ಯೆಯಲ್ಲ ಬದಲಿಗೆ ಅದು ಒಲಿಯುವ ವಿದ್ಯೆ. ಭಕ್ತಿ, ಶ್ರದ್ಧೆ, ಸಾಧನೆಗಳಿಂದ ಸಂಗೀತ ಸಿದ್ಧಿಸುತ್ತದೆ ಎಂದರು.

Advertisement
Advertisement
Advertisement

ಸಂಸ್ಥೆಯ ಸಂಗೀತ ಶಿಕ್ಷಕಿ ಸಂಧ್ಯಾ ಸತ್ಯನಾರಾಯಣ, ಸತ್ಯನಾರಾಯಣ ಭಟ್ರಕೋಡಿ ಮತ್ತು  ವಿಜಯಶ್ರೀ ಈಶ್ವರ ಭಟ್ ಉಪಸ್ಥಿತರಿದ್ದರು. ಉದ್ಘಾಟನೆಯ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ವಯಲಿನ್‍ನಲ್ಲಿ  ಧನ್ಯಶ್ರೀ ಮತ್ತು ಕು. ಆತ್ಮಶ್ರೀ ಹಾಗೂ ಮೃದಂಗದಲ್ಲಿ ವಿದ್ವಾನ್ ಶ್ಯಾಮ ಭಟ್ ಅರಂಬೂರು ಮತ್ತು ಮಾಸ್ಟರ್ ವೆಂಕಟ ಯಶಸ್ವಿ ಸಹಕರಿಸಿದರು.

Advertisement
Advertisement
ವಾರ್ಷಿಕೋತ್ಸವದ ಪ್ರಧಾನ ಸಂಗೀತ ಕಛೇರಿಯನ್ನು ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ವಿದ್ವಾನ್ ಮೈಸೂರು ಎನ್ ಶ್ರೀನಾಥ್ ಅವರು ನಡೆಸಿಕೊಟ್ಟರು. ಅವರಿಗೆ ಹಿಮ್ಮೇಳದಲ್ಲಿ ವಯಲಿನ್‍ನಲ್ಲಿ ವಿದ್ವಾನ್ ವೇಣುಗೋಪಾಲ ಶ್ಯಾನುಭೋಗ್, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಮತ್ತು ಡಾ. ಅಕ್ಷಯನಾರಾಯಣ ಕಾಂಚನ ಅವರು ಸಹಕರಿಸಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸ್ವರಶ್ರೀ 2022 | ಸಂಗೀತವೆಂಬುದು ಒಲಿಯುವ ವಿದ್ಯೆ – ವಿದ್ವಾನ್ ಕಾಂಚನ ಎ. ಈಶ್ವರ ಭಟ್"

Leave a comment

Your email address will not be published.


*