ಮಂಗಳೂರಿನ ಶ್ರೀ ಸಂಗೀತ ಪಾಠಶಾಲೆಯ ವಾರ್ಷಿಕೋತ್ಸವ ‘ಸ್ವರಶ್ರೀ 2022’ ಭಾನುವಾರ ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಮಾತನಾಡಿ ‘ಸಂಗೀತ ಶಾಸ್ತ್ರವನ್ನು ಕಲಿತರೆ ಸಾಲದು ಪ್ರಯೋಗಾನುಭವ ಬಹಳ ಮುಖ್ಯ. ಸಂಗೀತವೆಂಬುದು ದೈವೀ ವಿದ್ಯೆ. ಗುರುವಿನ ಮೂಲಕ ಮಾತ್ರ ಕಲಿಯಬಹುದಾದ ವಿದ್ಯೆ. ಶಿಷ್ಯನಿಗೆ ಈ ವಿದ್ಯೆ ಎಷ್ಟರ ಮಟ್ಟಿಗೆ ಸಿದ್ಧಿಸಬಹುದೆಂಬುದು ಗುರು-ಶಿಷ್ಯರಿಬ್ಬರಿಗೂ ತಿಳಿದಿರುವುದಿಲ್ಲ. ಶಿಷ್ಯನಿಗೆ ಎಷ್ಟು ಪ್ರಾಪ್ತಿಯಾಗುವುದೋ ಅದು ಭಗವಂತನಿಗೆ ಮಾತ್ರ ತಿಳಿದಿರುತ್ತದೆ. ಸಂಗೀತ ಬರುವುದಲ್ಲ; ಅದು ಒಲಿಯುವುದು. ಸಂಗೀತವೆಂಬುದು ಕೇವಲ ಕಲಿಯುವ ವಿದ್ಯೆಯಲ್ಲ ಬದಲಿಗೆ ಅದು ಒಲಿಯುವ ವಿದ್ಯೆ. ಭಕ್ತಿ, ಶ್ರದ್ಧೆ, ಸಾಧನೆಗಳಿಂದ ಸಂಗೀತ ಸಿದ್ಧಿಸುತ್ತದೆ ಎಂದರು.
ಸಂಸ್ಥೆಯ ಸಂಗೀತ ಶಿಕ್ಷಕಿ ಸಂಧ್ಯಾ ಸತ್ಯನಾರಾಯಣ, ಸತ್ಯನಾರಾಯಣ ಭಟ್ರಕೋಡಿ ಮತ್ತು ವಿಜಯಶ್ರೀ ಈಶ್ವರ ಭಟ್ ಉಪಸ್ಥಿತರಿದ್ದರು. ಉದ್ಘಾಟನೆಯ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ವಯಲಿನ್‍ನಲ್ಲಿ ಧನ್ಯಶ್ರೀ ಮತ್ತು ಕು. ಆತ್ಮಶ್ರೀ ಹಾಗೂ ಮೃದಂಗದಲ್ಲಿ ವಿದ್ವಾನ್ ಶ್ಯಾಮ ಭಟ್ ಅರಂಬೂರು ಮತ್ತು ಮಾಸ್ಟರ್ ವೆಂಕಟ ಯಶಸ್ವಿ ಸಹಕರಿಸಿದರು.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹಲಸಿನ ಕಾಯಿ ದೋಸೆ ಹಿಟ್ಟಿನ ಪಡ್ಡು ಮಾಡುವ ವಿಧಾನ : ದೋಸೆ ಹಿಟ್ಟು,…
19.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಯಾವುದೇ ಬದಲಾವಣೆ ಆಗಬೇಕಾದರೆ ವ್ಯಕ್ತಿಯ ಒಳಗೆ ಬದಲಾವಣೆ ಆರಂಭವಾಗಬೇಕು. ಮನಸ್ಸಿನಲ್ಲಿ ಪಾಸಿಟಿವ್ ಬದಲಾವಣೆಯ…
ಈ ಬಾರಿ ಮುಂಗಾರು ಮಳೆಯಲ್ಲಿ ಸರಾಸರಿ 105% ರಷ್ಟು ಮಳೆಯಾಗುವ ಸಾಧ್ಯತೆ ಇದೆ.…
ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವುದು ಸ್ಥಳೀಯ ಆಡಳಿತಕ್ಕೆ ಎಷ್ಟು ಮುಖ್ಯವೋ ಅಲ್ಲಿಗೆ ಭೇಟಿ…