Advertisement
MIRROR FOCUS

ತೈವಾನ್‌ನಲ್ಲಿ “ಸಿಹಿ ಅಡಿಕೆ” – “ಅಡಿಕೆ ಕ್ಯಾಂಡಿ” ಈಗ ಚರ್ಚೆ : ಮಕ್ಕಳಿಗೆ ನಿಷೇಧ ಬೇಡಿಕೆ ಹೆಚ್ಚಳ

Share

ತೈವಾನ್‌ನಲ್ಲಿ ಅಡಿಕೆ ಮೌಲ್ಯವರ್ಧನೆ ವಿವಿಧ ಮಾದರಿಯಲ್ಲಿ ನಡೆಯುತ್ತಿತ್ತು. ಇದೀಗ  ಸಿಹಿ ಮತ್ತು ವಿವಿಧ ಫ್ಲೇವರ್‌ಗಳಲ್ಲಿ ತಯಾರಾಗುತ್ತಿರುವ ಅಡಿಕೆ ಉತ್ಪನ್ನಗಳು  ಚರ್ಚೆಗೆ ಕಾರಣವಾಗಿದೆ. ಈ ಉತ್ಪನ್ನಗಳು ಯುವಕರನ್ನು ಆಕರ್ಷಿಸುತ್ತಿದ್ದು, ಮಕ್ಕಳಿಗೆ ಸಂಪೂರ್ಣ ನಿಷೇಧ ತರಬೇಕು ಎಂದು ಸರ್ಕಾರವನ್ನು ಕೆಲ ಸಂಘಟನೆಗಳು ಒತ್ತಾಯಿಸಿದೆ.

ಮಾರುಕಟ್ಟೆಗಳು ಮತ್ತು ಆನ್‌ಲೈನ್‌ ವೇದಿಕೆಗಳಲ್ಲಿ ಬೆರಿ, ಕಾಫಿ ಹಾಗೂ ಹಣ್ಣಿನ ರುಚಿಯ ಅಡಿಕೆ ಕ್ಯಾಂಡಿಗಳು ಹೆಚ್ಚಾಗಿ ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಯುವಜನರಲ್ಲಿ ಅಡಿಕೆ ಬಳಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ವಿಶ್ವ ಮಟ್ಟದ ಸಂಶೋಧನೆಗಳು ಅಡಿಕೆ ಚಪ್ಪರಿಸುವುದು ಮೌಖಿಕ ಕ್ಯಾನ್ಸರ್‌, ಗಂಟಲು ಕ್ಯಾನ್ಸರ್‌ ಹಾಗೂ ಆಹಾರನಾಳದ ಕ್ಯಾನ್ಸರ್‌ಗಳಿಗೆ ಸಂಬಂಧ ಹೊಂದಿರುವುದನ್ನು ಸೂಚಿಸುತ್ತಿವೆ. ಆದ್ದರಿಂದ ಈ ರೀತಿಯ ಆಕರ್ಷಕ ಉತ್ಪನ್ನಗಳ ಮೇಲೆ ನಿಯಂತ್ರಣ ಅಗತ್ಯ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಅಡಿಕೆ ಹಾನಿಕಾರಕ ಎಂಬ ಕಾನೂನು ಮಸೂದೆ ಇನ್ನೂ ಜಾರಿಗೆ ಬರದಿರುವುದರಿಂದ ಹೊಸ ಉತ್ಪನ್ನಗಳ ಮಾರಾಟಕ್ಕೆ ಸಂಪೂರ್ಣ ನಿಯಂತ್ರಣ ಇಲ್ಲ. ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

ಜಾಗತಿಕ ಮಟ್ಟದಲ್ಲಿ ಅಡಿಕೆ ಬಳಕೆಯ ಕುರಿತು ಆರೋಗ್ಯ ಚರ್ಚೆಗಳು ಹೆಚ್ಚುತ್ತಿರುವುದು ಭಾರತ ಸೇರಿದಂತೆ ಅಡಿಕೆ ಉತ್ಪಾದಕ ಪ್ರದೇಶಗಳಿಗೆ ದೀರ್ಘಕಾಲಿಕವಾಗಿ ಮಾರುಕಟ್ಟೆ ಹಾಗೂ ಬ್ರ್ಯಾಂಡ್‌ ಇಮೇಜ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಡಿಕೆಯ ಮೌಲ್ಯವರ್ಧನೆ ಉತ್ಪನ್ನಗಳ ಅಭಿವೃದ್ಧಿಯ ಜೊತೆಗೆ ಆರೋಗ್ಯ ಜಾಗೃತಿ ಮತ್ತು ನಿಯಂತ್ರಣ ಕ್ರಮಗಳ ಕಡೆಗೂ ಗಮನ ಬೇಕಿದೆ. ಹೀಗಾಗಿ ಅಡಿಕೆ ಮೌಲ್ಯವರ್ಧನೆಯೂ ಈಗ ವೇಗ ಪಡೆಯುತ್ತಿಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Flavoured and sweetened betel nut products in Taiwan have sparked a health debate, with anti-cancer groups demanding a ban for minors. The issue highlights growing global concerns over betel nut consumption and possible long-term impacts on markets and regulations in producing regions.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ

ಅರಬ್ಬಿ ಸಮುದ್ರದ ಕಡೆಯಿಂದ ಬೀಸುವ ಗಾಳಿಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುನ್ಸೂಚನೆಯಲ್ಲಿದ್ದಷ್ಟು…

13 hours ago

ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…

1 day ago

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ

ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…

2 days ago

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

3 days ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

3 days ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

3 days ago