Advertisement
ಸುದ್ದಿಗಳು

ಏಷ್ಯಾ ರಬ್ಬರ್ ಬೆಲೆ ಕುಸಿತ – ರಬ್ಬರ್‌ ಇಳುವರಿ ಹಾಗೂ ಸರಬರಾಜು ಭೀತಿ ಕಡಿಮೆಯಾದ ಕಾರಣ ಮಾರುಕಟ್ಟೆ ಕುಸಿತ..!

Share

ಏಷ್ಯಾದ ಪ್ರಮುಖ ವಹಿವಾಟು ಕೇಂದ್ರಗಳಾದ ಜಪಾನ್‌, ಚೀನಾ ಮತ್ತು ಸಿಂಗಾಪುರದಲ್ಲಿ ರಬ್ಬರ್ ಭವಿಷ್ಯ ವಹಿವಾಟು ಬೆಲೆಗಳು ಇತ್ತೀಚೆಗೆ ಕುಸಿದಿವೆ. ಏಪ್ರಿಲ್–ಮೇ ತಿಂಗಳು ಅಧಿಕ ಇಳುವರಿ ಅವಧಿ ಸಮೀಪಿಸುತ್ತಿರುವುದರಿಂದ ಸರಬರಾಜು ಹೆಚ್ಚುವ ನಿರೀಕ್ಷೆ ಮೂಡಿದ್ದು, ಹಿಂದಿನ ಸರಬರಾಜು ಕೊರತೆಯ ಆತಂಕ ಕಡಿಮೆಯಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

ಜಪಾನ್‌ನಲ್ಲಿ ರಬ್ಬರ್ ಫ್ಯೂಚರ್ಸ್‌ ಮೂರನೇ ದಿನವೂ ಇಳಿಕೆ ಕಂಡಿದ್ದು, ಚೀನಾದಲ್ಲಿ ಟ್ಯಾಪಿಂಗ್‌ ಚಟುವಟಿಕೆಗಳು ಪುನರಾರಂಭವಾಗುವ ಸಾಧ್ಯತೆ ಹಾಗೂ ಇಳುವರಿ ಹೆಚ್ಚುವ ನಿರೀಕ್ಷೆ ಬೆಲೆಯ ಮೇಲೆ ಒತ್ತಡ ತಂದಿದೆ. ಇದೇ ವೇಳೆ ಜಪಾನ್‌ನ ಕೆಲವು ಹೂಡಿಕೆದಾರರ ಕೆಲವು ನಿರ್ಧಾರಗಳು ಕೂಡಾ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ರಬ್ಬರ್ ಬೆಲೆಯು ಸಾಮಾನ್ಯವಾಗಿ ಮೂರು ಪ್ರಮುಖ ಅಂಶಗಳ ಮೇಲೆ ಅವಲಂಬಿತವಾಗಿದೆ — ಇಳುವರಿ ಸಮಯ, ವಾಹನ ಉದ್ಯಮದ ಬೇಡಿಕೆ ಮತ್ತು ಇಂಧನ ಬೆಲೆಗಳು. ನೈಸರ್ಗಿಕ ರಬ್ಬರ್‌ಗೆ ಸರಬರಾಜು ಮುಖ್ಯವಾಗಿದ್ದರೆ, ಸಿಂಥೆಟಿಕ್‌ ರಬ್ಬರ್‌ ಬೆಲೆಯಲ್ಲಿ ಕ್ರೂಡ್‌ ಆಯಿಲ್‌ ಪ್ರಮುಖ ಪ್ರಭಾವ ಬೀರುತ್ತದೆ.

ಟೈಯರ್ ಉದ್ಯಮವು ರಬ್ಬರ್‌ಗೆ ದೊಡ್ಡ ಮಾರುಕಟ್ಟೆಯಾಗಿರುವುದರಿಂದ, ಜಾಗತಿಕ ವಾಹನ ಉತ್ಪಾದನೆ ಮತ್ತು ಮಾರಾಟದ ದಿಕ್ಕು ದೀರ್ಘಕಾಲಿಕ ಬೇಡಿಕೆಯನ್ನು ನಿರ್ಧರಿಸುತ್ತದೆ. ಕೆಲ ಏಷ್ಯನ್‌ ವಾಹನ ತಯಾರಕರ ವಿಸ್ತರಣೆ ಯೋಜನೆಗಳು ಮಧ್ಯಮ ಅವಧಿಯಲ್ಲಿ ಬೇಡಿಕೆಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇನ್ನೊಂದೆಡೆ, ಬಲವಾದ ಡಾಲರ್‌, ಇಂಧನ ಬೆಲೆ ಬದಲಾವಣೆ ಹಾಗೂ ಇಳುವರಿ ಚಕ್ರಗಳ ಪರಿಣಾಮವಾಗಿ ರಬ್ಬರ್ ಬೆಲೆಗಳು ಜಾಗತಿಕವಾಗಿ ಅಸ್ಥಿರತೆ ತೋರಿಸುತ್ತಿವೆ ಎಂದು ಮಾರುಕಟ್ಟೆ ವರದಿಗಳು ಸೂಚಿಸುತ್ತವೆ

Asian rubber prices declined as supply concerns eased ahead of the peak harvesting season in April–May. Market sentiment was also influenced by profit-taking, oil price movements, and expectations around global automobile demand, which remains a key driver of rubber consumption.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಬರಗಾಲದಲ್ಲೂ ಬೆಳೆ ಉಳಿಸಿದ ಸಾವಯವ ಕೃಷಿ – ಸಾವಯವ ಕೃಷಿ ಅಬ್ಬರಿಸಿ ಬರುವುದಿಲ್ಲ- ಮುಗ್ಗರಿಸಿ ಬೀಳುವುದಿಲ್ಲ..!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಸಾವಯವ ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಾಳ…

1 hour ago

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ, ಹೊರನಾಡು, ಕಟೀಲು ಮತ್ತು ಕೊಲ್ಲೂರು ಸೇರಿದಂತೆ…

22 hours ago

ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಧರಣಿಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು…

22 hours ago

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

2 days ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

2 days ago

ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

ಎಲ್‌ನಿನೋ ವಿದ್ಯಮಾನವು ಡಿಸೆಂಬರ್‌ನಲ್ಲಿ ಗರಿಷ್ಠ ತೀವ್ರತೆ ತಲುಪುವ ಸಾಧ್ಯತೆಯಿದ್ದು, 2027ರ ಫೆಬ್ರವರಿವರೆಗೆ ಮುಂದುವರಿಯಬಹುದು…

2 days ago