ತೆಂಗುಬೆಳೆಗಾರರು(coconut farmer) ಕೊಬ್ಬರಿಗೆ ಬೆಳೆ ಕುಸಿತದಿಂದ ಹೈರಾಣಾಗಿದ್ದರು. ಇತ್ತೀಚೆಗೆ ತೆಂಗು ಬೆಳೆಗಾರರ ಸಂಕಷ್ಟದ ಬಗ್ಗೆ ಗಮನಸೆಳೆಯಲು ಪ್ರಧಾನಿ ನರೇಂದ್ರ ಮೋದಿಯವರನ್ನ(PM Modi) ಭೇಟಿಯಾಗಿ ಜೆಡಿಎಸ್(JDS) ನಿಯೋಗ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿದ ಮೋದಿ ಸರ್ಕಾರ ಕೊಬ್ಬರಿ ಬೆಲೆ(Copra Rate) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ(Central Cabinet) ತೀರ್ಮಾನ ಮಾಡಲಾಗಿದ್ದು, ಕ್ವಿಂಟಾಲ್ ಕೊಬ್ಬರಿಗೆ 300 ರೂಪಾಯಿ, ಉಂಡೆ ಕೊಬ್ಬರಿಗೆ ಎಂಎಸ್‌ಪಿ ದರ 250 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತಂತೆ ವಿಧಾನಸಭೆಯಲ್ಲೂ ಸಾಕಷ್ಟು ಬಾರಿ ಚರ್ಚೆ ನಡೆದಿತ್ತು.ಅದರಂತೆ ಕೇಂದ್ರ ಸರ್ಕಾರ, ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 300 ರೂಪಾಯಿ ಏರಿಕೆ ಮಾಡಿದೆ. ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸ್ವಾಗತಿಸಿದ್ದು, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ. ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ತೀರ್ಮಾನ ಮಾಡಿದ್ದು, ಕ್ವಿಂಟಾಲ್ ಕೊಬ್ಬರಿಗೆ 300 ರೂಪಾಯಿ, ಉಂಡೆ ಕೊಬ್ಬರಿಗೆ ಎಂಎಸ್‌ಪಿ ದರ 250 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಎಂಎಸ್‌ಪಿ ಹೆಚ್ಚಳದಿಂದ ತೆಂಗು ಬೆಳೆಗಾರರಿಗೆ ಉತ್ತಮ ಆದಾಯವನ್ನು ಲಭಿಸುತ್ತದೆ. ಅಲ್ಲದೇ ದೇಶೀಯವಾಗಿ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಉತ್ತೇಜಿಸುತ್ತದೆ ಎಂದು ಕೇಂದ್ರ ತಿಳಿಸಿದೆ.
ಕೇಂದ್ರ ಸಚಿವ ಸಂಪುಟದಲ್ಲಿ 2024ರಲ್ಲಿ ಪ್ರತಿ ಕ್ವಿಂಟಲ್‌ಗೆ ₹11,160 ಮತ್ತು ಚೆಂಡು ಕೊಬ್ಬರಿಗೆ ₹12,000 ಕ್ಕೆ ಎಮ್‌ಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಯನ್ನು ನಿಗದಿಪಡಿಸಿದೆ. ಹೊಸ MSP ದರ ಹಿಂದಿನ ವರ್ಷಕ್ಕಿಂತ ಮಿಲ್ಲಿಂಗ್ ಕೊಬ್ಬರಿಗೆ ಪ್ರತಿ ಕ್ವಿಂಟಲ್‌ಗೆ ₹300 ಮತ್ತು ಚೆಂಡು ಕೊಬ್ಬರಿಗೆ ₹250 ಹೆಚ್ಚಳ ಆಗಿದೆ.
– ಅಂತರ್ಜಾಲ ಮಾಹಿತಿ