Advertisement
MIRROR FOCUS

ಕೇಂದ್ರ ಸರ್ಕಾರದಿಂದ ತೆಂಗು ಬೆಳೆಗಾರರಿಗೆ ಸಿಹಿಸುದ್ದಿ | ​ಕೊಬ್ಬರಿ ಬೆಲೆ ಹೆಚ್ಚಳ | ಜೆಡಿಎಸ್ ನಿಯೋಗ ಮನವಿಗೆ ಅಸ್ತು ಎಂದ ಮೋದಿ |

Share

ತೆಂಗುಬೆಳೆಗಾರರು(coconut farmer) ಕೊಬ್ಬರಿಗೆ ಬೆಳೆ ಕುಸಿತದಿಂದ ಹೈರಾಣಾಗಿದ್ದರು. ಇತ್ತೀಚೆಗೆ ತೆಂಗು ಬೆಳೆಗಾರರ ಸಂಕಷ್ಟದ ಬಗ್ಗೆ ಗಮನಸೆಳೆಯಲು  ಪ್ರಧಾನಿ ನರೇಂದ್ರ ಮೋದಿಯವರನ್ನ(PM Modi) ಭೇಟಿಯಾಗಿ ಜೆಡಿಎಸ್(JDS) ನಿಯೋಗ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿದ ಮೋದಿ ಸರ್ಕಾರ ಕೊಬ್ಬರಿ ಬೆಲೆ(Copra Rate) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ(Central Cabinet) ತೀರ್ಮಾನ ಮಾಡಲಾಗಿದ್ದು, ಕ್ವಿಂಟಾಲ್‌ ಕೊಬ್ಬರಿಗೆ 300 ರೂಪಾಯಿ, ಉಂಡೆ ಕೊಬ್ಬರಿಗೆ ಎಂಎಸ್‌ಪಿ ದರ 250 ರೂಪಾಯಿ ಹೆಚ್ಚಳ ಮಾಡಲಾಗಿದೆ.

Advertisement
Advertisement

ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತಂತೆ ವಿಧಾನಸಭೆಯಲ್ಲೂ ಸಾಕಷ್ಟು ಬಾರಿ ಚರ್ಚೆ ನಡೆದಿತ್ತು.ಅದರಂತೆ ಕೇಂದ್ರ ಸರ್ಕಾರ, ಪ್ರತಿ ಕ್ವಿಂಟಾಲ್‌ ಕೊಬ್ಬರಿಗೆ 300 ರೂಪಾಯಿ ಏರಿಕೆ ಮಾಡಿದೆ. ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಸ್ವಾಗತಿಸಿದ್ದು, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ. ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ತೀರ್ಮಾನ ಮಾಡಿದ್ದು, ಕ್ವಿಂಟಾಲ್‌ ಕೊಬ್ಬರಿಗೆ 300 ರೂಪಾಯಿ, ಉಂಡೆ ಕೊಬ್ಬರಿಗೆ ಎಂಎಸ್‌ಪಿ ದರ 250 ರೂಪಾಯಿ ಹೆಚ್ಚಳ ಮಾಡಲಾಗಿದೆ.

Advertisement

ಎಂಎಸ್​​ಪಿ ಹೆಚ್ಚಳದಿಂದ ತೆಂಗು ಬೆಳೆಗಾರರಿಗೆ ಉತ್ತಮ ಆದಾಯವನ್ನು ಲಭಿಸುತ್ತದೆ. ಅಲ್ಲದೇ ದೇಶೀಯವಾಗಿ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಉತ್ತೇಜಿಸುತ್ತದೆ ಎಂದು ಕೇಂದ್ರ ತಿಳಿಸಿದೆ.

ಕೇಂದ್ರ ಸಚಿವ ಸಂಪುಟದಲ್ಲಿ 2024ರಲ್ಲಿ ಪ್ರತಿ ಕ್ವಿಂಟಲ್‌ಗೆ ₹11,160 ಮತ್ತು ಚೆಂಡು ಕೊಬ್ಬರಿಗೆ ₹12,000 ಕ್ಕೆ ಎಮ್‌ಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಯನ್ನು ನಿಗದಿಪಡಿಸಿದೆ. ಹೊಸ MSP ದರ ಹಿಂದಿನ ವರ್ಷಕ್ಕಿಂತ ಮಿಲ್ಲಿಂಗ್ ಕೊಬ್ಬರಿಗೆ ಪ್ರತಿ ಕ್ವಿಂಟಲ್‌ಗೆ ₹300 ಮತ್ತು ಚೆಂಡು ಕೊಬ್ಬರಿಗೆ ₹250 ಹೆಚ್ಚಳ ಆಗಿದೆ.

Advertisement
ಪ್ರಸಕ್ತ ಹಂಗಾಮಿನಲ್ಲಿ ಸುಮಾರು 90,000 ರೈತರಿಂದ ಸರ್ಕಾರ ₹1,493 ಕೋಟಿ ವೆಚ್ಚದಲ್ಲಿ ದಾಖಲೆ ಪ್ರಮಾಣದ ಕೊಬ್ಬರಿಯನ್ನು (1.33 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಅಥವಾ ಹಿಂದಿನ ಹಂಗಾಮಿಗಿಂತ 227% ಹೆಚ್ಚು) ಸಂಗ್ರಹಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಿಲ್ಲಿಂಗ್ ಕೊಬ್ಬರಿನಿಂದ ಎಣ್ಣೆ ತೆಗೆಯಲು ಬಳಸಲಾಗುತ್ತದೆ. ಆದರೆ ಚೆಂಡು/ಖಾದ್ಯ ಕೊಬ್ಬರಿಯನ್ನು ಆಹಾರ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಲೆನಾಡ ಗಿಡ್ಡ ಗೋತಳಿಗಳನ್ನು ಉಳಿಸಿ ಸಂವರ್ಧಿಸಬೇಕು ಏಕೆ..?

ಮಲೆನಾಡಗಿಡ್ಡ ಹಸುಗಳು ಬಹಳ ಮಹತ್ವದ ಅಂಶಗಳನ್ನು ಹೊಂದಿವೆ. ಅಂತಹ ವಿಶೇಷತೆಗಳ ಕಾರಣದಿಂದಲೇ ಈ…

3 hours ago

Karnataka Weather | 15-05-2024 | ಸದ್ಯ ಮಳೆ ಇದೆ | ಮೇ.21 ರಿಂದ ಮಳೆ ತೀವ್ರತೆ ಕಡಿಮೆ | ಅವಧಿಗೆ ಮುಂಗಾರು ಪ್ರಾರಂಭವಾದೀತೇ..?

ಈಗಿನ ಪ್ರಕಾರ ಮೇ 21 ರಿಂದ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದೆ. ಮುಂಗಾರು…

6 hours ago

ಶಂಕರರ ಆಕ್ರೋಶಕ್ಕೆ ಹೊರಹೊಮ್ಮಿದ ಭಜಗೋವಿಂದಂ

ಸನಾತನ ಭಾರತದ ಆಧ್ಯಾತ್ಮಕ ಸಾಧನೆಯ ಪುನರುತ್ಥಾನದ ಅಧ್ವರ್ಯುಗಳಲ್ಲಿ ಶಂಕರಾಚಾರ್ಯರು ಮೊದಲಿಗರು. ಹಾಗಾಗಿಯೇ ಅವರು…

6 hours ago

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

20 hours ago

ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.

21 hours ago