ಇಂದು ಎಲ್ಲರ ಚಿತ್ತ ಚುಟುಕ ಮಾದರಿಯ ಕ್ರಿಕೆಟ್ ವಿಶ್ವಕಪ್ ಫೈನಲ್ (T20 World Cup Final) ಪಂದ್ಯದತ್ತ. ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ದಕ್ಷಿಣ ಆಫ್ರಿಕಾ (South Africa) ಮತ್ತು ಭಾರತ (India) ತಂಡಗಳು ಫೈನಲ್‌ನಲ್ಲಿ(Final) ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. 11 ವರ್ಷಗಳ ಹಿಂದೆ ಫೈನಲ್‌ನಲ್ಲಿ ಮುಗ್ಗರಿಸಿದ್ದ ಭಾರತ ತಂಡ ಇದೀಗ ಫೈನಲ್ ತಲುಪಿದ್ದು, ಟ್ರೋಫಿ(trophy) ಮುಡಿಗೇರಿಸಿಕೊಳ್ಳುವ ನೀರಿಕ್ಷೆಯಲ್ಲಿದೆ. ಭಾರತದ ಕೋಟ್ಯಂತರ ಅಭಿಮಾನಿಗಳು ‘ಗೆದ್ದು ಬಾ ಟೀಂ ಇಂಡಿಯಾ’ ಎಂದು ಆಶಿಸುತ್ತಿದ್ದಾರೆ.
ತಂಡದ ನಾಯಕ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ರನ್ ಬರವನ್ನ ನೀಗಿಸುತ್ತಿದ್ದಾರೆ. ಎದುರಾಳಿಗಳನ್ನ ಚಂಡಾಡುತ್ತಿರುವ ರೋಹಿತ್, ಇಂದಿನ ಪಂದ್ಯದಲ್ಲೂ ಅಬ್ಬರಿಸುವ ತವಕದಲ್ಲಿದ್ದಾರೆ. ಇತ್ತ, ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಪಾಂಡ್ಯ, ಶಿವಂ ದುಬೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಬೌಲಿಂಗ್ ಜಾದು ಹರಿಣರಿಗೆ ಸವಾಲಾಗಿ ಕಂಡಿದ್ದಾರೆ. ಅರ್ಷದೀಪ್‌ಸಿಂಗ್, ಬೂಮ್ರಾ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ.
ಬರೋಬ್ಬರಿ 37 ವರ್ಷಗಳಿಂದ ಚೋಕರ್ಸ್ ಹಣೆಪಟ್ಟಿ ದಕ್ಷಿಣ ಆಫ್ರಿಕಾ ತಂಡಕ್ಕಿದೆ. ಅದು ಎಷ್ಟೋ ಐಸಿಸಿ ಟೂರ್ನಿಗಳಲ್ಲಿ ಅಂತಿಮ ಸುತ್ತಿನ ವರೆಗೆ ಬಂದು ಮುಗ್ಗರಿಸಿದ್ದೇ ಹೆಚ್ಚು. ಸೆಮಿಸ್‌ನಲ್ಲಿ ಸೋತು ನಿರಾಸೆಗೊಳ್ಳುತ್ತಿತ್ತು. ಕೊನೆಗೂ 37 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಸತತ ಗೆಲುವಿನೊಂದಿಗೆ ಫೈನಲ್‌ಗೇರಿರುವ ಮಾರ್ಕ್ರಮ್ ಪಡೆ, ಈ ಬಾರಿ ಶತಾಯಗತಾಯ ಪ್ರಶಸ್ತಿ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಕ್ವಿಂಟನ್ ಡಿಕಾಕ್, ಕ್ಲಾಸೆನ್, ಸ್ಟಬ್ಸ್, ಹೆಂಡ್ರಿಕ್ಸ್, ಡೆವಿಡ್ ಮಿಲ್ಲರ್‌ರಂತಹ ಆಟಗಾರರು ಪಂದ್ಯದ ಗತಿಯನ್ನೇ ಬದಲಿಸುವ ತಾಕತ್ತನ್ನು ಹೊಂದಿದ್ದಾರೆ. ಕೇಶವ್ ಮಹರಾಜ್, ರಬಡ, ನಾರ್ಟ್ಜೆ, ತಬ್ರೇಜ್ ಶಮ್ಸಿ ತಂಡದ ಟ್ರಂಪ್‌ಕಾರ್ಡ್.
ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…
ನೈಸರ್ಗಿಕ ರಬ್ಬರ್ ಮತ್ತು ಅದರ ಉತ್ಪನ್ನಗಳು ಅರಣ್ಯನಾಶ ಮುಕ್ತ ನಿಯಮಗಳಿಗಾಗಿ ಯುರೋಪಿಯನ್ ಒಕ್ಕೂಟ…
ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.
ಖಾಸಗಿಯವರಿಂದ ಒತ್ತುವರಿಯಾಗಿರುವ ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…
ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…