ಕೊರೋನಾ ನಂತರದ ಬೆಳವಣಿಗೆ | ಮನೆ ಮನೆಯಲ್ಲಿ ತಾಳಮದ್ದಳೆ ಸೇವೆ | ಕಲಾಸೇವೆಯಲ್ಲಿ ತೊಡಗಿದ ಹವ್ಯಾಸಿ ಕಲಾವಿದರ ತಂಡ |

October 21, 2020
1:56 PM
ಕೊರೋನಾ ವೈರಸ್‌  ದೇಶದ ಇಡೀ ವರ್ಷದ ಚಟುವಟಿಕೆಯನ್ನು ನಿಲ್ಲಿಸಿಯೇ ಬಿಟ್ಟಿತು. ಇನ್ನು  ಕೇವಲ  2 ತಿಂಗಳಲ್ಲಿ  2020  ಮುಗಿದೇ ಬಿಡುತ್ತದೆ. ಸುಮಾರು 7  ತಿಂಗಳಲ್ಲಿ  ಜನರ ವಿವಿಧ ಆಸಕ್ತಿಗಳೂ ನಿಂತೇ ಹೋಗಿತ್ತು. ಕೊರೋನಾ ಪ್ರಭಾವ ಕಡಿಮೆಯಾದಂತೆಯೇ ಕಡಿಮೆ ಜನರು ಸೇರಲು ಅವಕಾಶ ಸಿಕ್ಕಾಗ ಎಲ್ಲಾ ಹೊಸ ಸಾಧ್ಯತೆಗಳು ತೆರೆದುಕೊಂಡವು. ಅದರಲ್ಲಿ ಕಲಾ ಸೇವೆಯೂ ಒಂದು. ಅಂತಹ ಕಲಾ ಸೇವೆ ಈಗ ಮನೆ ಮನೆ ತಾಳಮದ್ದಳೆ ರೂಪದಲ್ಲಿ  ಆರಂಭವಾಗಿದೆ.

Advertisement
Advertisement
Advertisement
Advertisement

 

Advertisement

ದಕ್ಷಿಣ ಕನ್ನಡ ಜಿಲ್ಲೆಯು ಕಲಾರಾಧನೆಗೆ ಅದರಲ್ಲೂ ಯಕ್ಷಗಾನದ ನೆಲ. ಯಕ್ಷಗಾನ ಈ ಬಾರಿ ಬಹುಪಾಲು ನಿಂತೇ ಹೋಯಿತು, ಕೊರೋನಾ ಈ ಕಲೆಗೂ ಬಾಧೆ ನೀಡಿತು. ತಾಳಮದ್ದಳೆಯೂ ಅದರ ಒಂದು ಭಾಗ. ಕೊರೋನಾ ಇಫೆಕ್ಟ್‌ ಕಡಿಮೆಯಾಗುತ್ತಿದ್ದಂತೆಯೇ ಯಕ್ಷಗಾನಕ್ಕೆ ಅವಕಾಶ ನೀಡಿದರೂ ಹೆಚ್ಚು ಜನರು ಭಾಗವಹಿಸುವಂತಿಲ್ಲ.ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಶ್ರೀಕೃಷ್ಣ ಯಕ್ಷಗಾನ ಹವ್ಯಾಸಿ ಕಲಾ ಬಳಗವು ಕಲಾಸಕ್ತರಿಗಾಗಿ ತಾಳಮದ್ದಳೆಯನ್ನು  ಹಮ್ಮಿಕೊಂಡಿತು. ಅದೂ ಉಚಿತವಾಗಿ. ಕಲಾ ಆಸಕ್ತರ ಮನೆಯಲ್ಲಿ ಉಚಿತವಾಗಿ ಶ್ರೀಕೃಷ್ಣ ಯಕ್ಷಗಾನ ಕಲಾ ಬಳಗದ ತಂಡದ ಸದಸ್ಯರು ತಾಳಮದ್ದಳೆ ನಡೆಸಿ ಕೊಡುತ್ತಿದ್ದಾರೆ. ಈಗಾಗಲೇ ಸುಮಾರು 10 ತಾಳಮದ್ದಳೆ ಉಚಿತವಾಗಿ ನಡೆಸಿದ್ದಾರೆ. ತಂಡದಲ್ಲಿ ಸುಮಾರು 10  ಕಲಾವಿದರು ಇದ್ದಾರೆ.

Advertisement

 

Advertisement

 

ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲಕೃಷ್ಣ ಭಟ್ ದೇವಸ್ಯ, ಗಂಗಾಧರ ಗೌಡ ರುದ್ರಚಾಮುಂಡಿ  , ಪ್ರತೀಕ್‌ ಆಚಾರ್ಯ ಕಂದ್ರಪ್ಪಾಡಿ, ಶಶಾಂಕ್‌ ಎಲಿಮಲೆ ‌

Advertisement

ಚೆಂಡೆ-ಮದ್ದಳೆಯಲ್ಲಿ  ಬಾಲಸುಬ್ರಹ್ಮಣ್ಯ ಭಟ್ ದೇವಸ್ಯ, ವೆಂಕಟೇಶ್‌ ಭಟ್ ದೇವಸ್ಯ,‌ ಲಕ್ಷ್ಮೀಶ ಶಗ್ರಿತ್ತಾಯ,

ಮುಮ್ಮೇಳದಲ್ಲಿ  ಬಾಬು ಗೌಡ ಅಚ್ರಪ್ಪಾಡಿ, ಕುಶಾಲಪ್ಪ ಮಾಸ್ತರ್‌ ಕಂದ್ರಪ್ಪಾಡಿ, ಶಿವಸುಬ್ರಹ್ಮಣ್ಯ ಜೋಯಿಸ ಕರುವಜೆ, ಶಿವಕುಮಾರ ಭಟ್ ಗುತ್ತಿಗಾರು, ಲಕ್ಷ್ಮೀಶ ಗಬ್ಲಡ್ಕ ,‌ ತಾರಾನಾಥ ಅಂಬೆಕಲ್ಲು, ಪಾಲನೇತ್ರ ಮುಂಡೋಡಿ, ರಾಜೇಶ್‌ ,ಮಾವಿನಕಟ್ಟೆ ಮೊದಲಾದವರು ಇದ್ದಾರೆ. ಮನೆ ಮನೆಗಳಲ್ಲಿ ಕಲಾಸೇವೆ ಮಾಡುವ ಈ ತಂಡ ಇದುವರೆಗೂ ಉಚಿತವಾಗಿ ಕಾರ್ಯಕ್ರಮ ನಡೆಸಿಕೊಟ್ಟಿದೆ. ಕಲಾಸೇವೆಯಲ್ಲಿ  ತೊಡಗಿಸಿದೆ.

Advertisement

 

Advertisement

 

ಕೊರೋನಾ ಸಮಯದಲ್ಲಿ  ಹಾಗೂ ಆ ನಂತರ ಕಲಾಸಕ್ತರಿಗೆ ಮನೋರಂಜನೆಯಲ್ಲಿ  ಕೊರತೆಯಾಗಬಾರದು ಎಂದು ಈ ಸೇವೆಯಲ್ಲಿ  ತೊಡಗಿದ್ದೇವೆ ಎಂದು ಹೇಳುತ್ತಾರೆ ಭಾಗವತ ಗೋಪಾಲಕೃಷ್ಣ ದೇವಸ್ಯ,
ಕಲೆ ಎನ್ನುವುದು ಜನರಿಗೆ ಹಾಗೂ ಕಲಾವಿದರಿಗೆ  ಮಾನಸಿಕ ಧೈರ್ಯ ಹಾಗೂ ನೋವು ಮರೆಸುವಲ್ಲಿ ಸಹಾಯಕವಾಗುತ್ತದೆ. ಹೀಗಾಗಿ ಈ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳುತ್ತಾರೆ ಲಕ್ಷ್ಮೀಶ ಗಬ್ಲಡ್ಕ.
ತಾಳಮದ್ದಳೆ ವಿಡಿಯೋ….

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶ್ರೀ ಸಂಗೀತ ಪಾಠಶಾಲೆ | ವಾರ್ಷಿಕೋತ್ಸವ `ಸ್ವರಶ್ರೀ 2025′
February 13, 2025
8:38 PM
by: The Rural Mirror ಸುದ್ದಿಜಾಲ
ಅಡಿಕೆ ಕೃಷಿ ಭವಿಷ್ಯದಲ್ಲಿ ಎದುರಿಸಬೇಕಾಗುವ ಸವಾಲು ಯಾವುದು….? | ಮಿಶ್ರ ಕೃಷಿಯ ಅನಿವಾರ್ಯತೆ ಏಕೆ..? | ಗಮನದಲ್ಲಿರಲಿ ಅಧ್ಯಯನ ವರದಿ ಹೇಳಿರುವ ಅಂಶ |
January 28, 2025
12:51 PM
by: ಮಹೇಶ್ ಪುಚ್ಚಪ್ಪಾಡಿ
ಡಿ.24 : ಕಮಿಲದಲ್ಲಿ ಪಾವಂಜೆ ಮೇಳದಿಂದ ಶ್ರೀದೇವಿ ಮಹಾತ್ಮ್ಯೆ ಯಕ್ಷಗಾನ ಬಯಲಾಟ
December 23, 2024
10:41 AM
by: The Rural Mirror ಸುದ್ದಿಜಾಲ
ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |
November 26, 2024
7:11 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror