Advertisement
MIRROR FOCUS

ಹಲಸಿನ ಅರಿವಿನ ಹರಿವಿನ ಪ್ರಸಂಗ ‘ಪನಸೋಪಾಖ್ಯಾನ’ | ಪರಿಸರ ಉಳಿಸುವ ಸಂದೇಶ ಸಾರಿದ ತಾಳಮದ್ದಳೆ |

Share

ಹಲಸಿನ ಬಗ್ಗೆ ದೇಶದಲ್ಲಿ ವಿವಿಧ ಆಂದೋಲನಗಳು ನಡೆಯುತ್ತಿದೆ. ಹಲಸು ಒಂದು ಕೃಷಿಯಾಗಿ, ಉದ್ಯಮವಾಗಿ ಬೆಳೆಸಲು ಅವಕಾಶ ಇದೆ ಎನ್ನುವುದು ಆಂದೋಲನದ ಭಾಗ. ಅದರ ಜೊತೆಗೇ ಇದೀಗ ಹಲಸಿನ ಅರಿವಿನ ಬಗ್ಗೆ ತಾಳಮದ್ದಳೆಯೊಂದು ಗಮನ ಸೆಳೆದಿದೆ. ಪರಿಸರ ಉಳಿಸುವ ಸಂದೇಶವೂ ಇಲ್ಲಿದೆ.

Advertisement
Advertisement

ಈಚೆಗೆ ನಡೆದ ಹಲಸು ಮೇಳದಲ್ಲಿ  ‘ಪನಸೋಪಾಖ್ಯಾನ’ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಪ್ರಸ್ತುತವಾಯಿತು. ಇದು ಕಾಲ್ಪನಿಕ ಕಥಾಭಾಗವನ್ನು ಹೊಂದಿರುವ ಪ್ರಸಂಗ. ಪತ್ರಕರ್ತ , ಕಲಾವಿದ ನಾ.ಕಾರಂತ ಪೆರಾಜೆ ಅವರು ಪರಿಕಲ್ಪನೆಯಲ್ಲಿ ಈ ಕಥೆಯೂ ರೂಪ ಪಡೆದಿದೆ.  ಹಲಸಿನ ಆಂದೋಲನಕ್ಕೆ ಹಾಗೂ ಪರಿಸರ ಉಳಿವಿನ ಕಾಳಜಿಗೆ ಈ ತಾಳಮದ್ದಳೆಯು ಹೆಚ್ಚು ಮಹತ್ವ ಪಡೆದಿದೆ.

ಹಲಸು ಬಗ್ಗೆ ಕೃಷಿ ಪತ್ರಿಕೆಯಾದ ಅಡಿಕೆ ಪತ್ರಿಕೆಯು  2007 ರಿಂದ ಆಂದೋಲನ ರೂಪದಲ್ಲಿ ಕೆಲಸ ಮಾಡುತ್ತಿದೆ.  ಹಲಸಿಗೆ ಮಾನ ಹಾಗೂ ಮೌಲ್ಯವರ್ಧನೆಯ ದೂರದೃಷ್ಟಿಯಿಂದ ‘ಹಲಸು ಆಂದೋಲನ’ ರೂಪುಗೊಂಡಿತು. ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆಯವರು ದೇಶ, ವಿದೇಶಗಳ ಹಲಸಿನ ಕೆಲಸಗಳನ್ನು ಪತ್ರಿಕೆಯ ಮೂಲಕ ನೀಡಿದ್ದರು. ಹಲವು ವಿಚಾರಗೋಷ್ಠಿ,  ಮೌಲ್ಯವರ್ಧನೆಯ ವಿಚಾರಗಳಿಗೆ ಬೆಳಕನ್ನು ನೀಡಿದ್ದರು.ಇದೀಗ ಕಲಾಸ್ಪರ್ಶವನ್ನು ನೀಡುವ ಉದ್ದೇಶದಿಂದ ಕಾಲ್ಪನಿಕ ಕಥೆಯನ್ನು ನಾ. ಕಾರಂತ ಅವರ ಪರಿಕಲ್ಪನೆಯಲ್ಲಿ ಹೆಣೆಯಲಾಗಿದೆ.

ಕಾಲ್ಪನಿಕ ಪ್ರಸಂಗಗಳು  ಹೊಸತಲ್ಲ. ಘೋರ ಮಾರಕ, ಅಕ್ಷರ ಕ್ರಾಂತಿ, ಜಪಾನ್ ಕೃಷಿ ಪದ್ಧತಿ, ಹಸಿರು ಕ್ರಾಂತಿ, ಕುಟುಂಬ ಯೋಜನೆ, ಪಾನ ನಿಷೇಧ.. ಮೊದಲಾದ ಪ್ರಸಂಗಗಳ ಆಟ, ಕೂಟಗಳು ನಡೆದಿವೆ. ಜನಸ್ವೀಕೃತಿ ಪಡೆದಿವೆ. ಇಂತಹ ಪ್ರಸಂಗಗಳು ಆಯಾ ಸಂದರ್ಭದ ಸಂಭ್ರಮವನ್ನು ಹೊಂದಿಕೊಂಡು ಒಂದೋ ಎರಡೋ ಪ್ರದರ್ಶನ ಕಾಣುತ್ತವೆಯಷ್ಟೇ. ಯಕ್ಷಗಾನ ಚೌಕಟ್ಟಿನಲ್ಲಿ ಪನಸೋಪಾಖ್ಯಾನ ತಾಳಮದ್ದಳೆಯನ್ನು ಪ್ರಸ್ತುತಪಡಿಸಿದ್ದೇವೆ. ಎಲ್ಲಾ ಕಲಾವಿದರು ನನ್ನ ಆಶಯವನ್ನು ಅರ್ಥ ಮಾಡಿಕೊಂಡಿದ್ದಾರೆ. ಜರುಗಿದ ತಾಳಮದ್ದಳೆಗೆ ಸೇರಿದ ಪ್ರೌಢ ಪ್ರೇಕ್ಷಕರು ಮೆಚ್ಚಿದ್ದಾರೆ.

ಒಂದಷ್ಟು ಬಿಡಿಬಿಡಿಯಾದ ಕಥೆಗಳು ಮನಸ್ಸಿನಲ್ಲಿದ್ದುವು. ಅವನ್ನೆಲ್ಲಾ ಜೋಡಿಸಿದರೆ ಪ್ರಸಂಗ ದೀರ್ಘವಾಗುವ ಭಯವಿತ್ತು. ಹಿರಿಯ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ಟರನ್ನು ಭೇಟಿಯಾಗಿ ಸಮಾಲೋಚಿಸಿದೆ. ಅವರೂ ಕೆಲವು ದೃಶ್ಯವನ್ನು ಸಂಯೋಜಿಸಲು ನೆರವಾದರು. ಇಡೀ ಕಥೆಯು ಹಲಸಿನ ಬಳಕೆ, ಮೌಲ್ಯವರ್ಧನೆಯ ಸುತ್ತವೇ ಇರಬೇಕೆನ್ನುವುದು ಆಶಯವಾಗಿತ್ತು. ಕಾಲ್ಪನಿಕ ಎಂದಾಕ್ಷಣ ಹಗುರ ಮಾತುಗಳು, ತಮಾಷೆಯ ಅತಿರೇಕಗಳು ಕಣ್ಮುಂದೆ ಹಾದು ಹೋಗುತ್ತವೆ. ಈ ಪ್ರಸಂಗದಲ್ಲಿ ಇವೆಲ್ಲಾ ಬರಕೂಡದೆನ್ನುವ ಎಚ್ಚರವಿತ್ತು. ನನ್ನೊಂದಿಗೆ ಕಟೀಲು ಮೇಳದ ಭಾಗವತ  ರಮೇಶ ಭಟ್ ಪುತ್ತೂರು ಹೆಗೆಲೆಣೆಯಾಗಿದ್ದರು ಎನ್ನುತ್ತಾರೆ ನಾ.ಕಾರಂತ ಪೆರಾಜೆಯವರು.

ಕಥೆಯಲ್ಲಿ ಒಟ್ಟು ಐದು ಸನ್ನಿವೇಶಗಳು ಬರುತ್ತವೆ. ಭೂಲೋಕದ ಬಡತನವನ್ನು ನೀಗಿಸಲು ನಾರದ ಮಹರ್ಷಿಗೆ ಬ್ರಹ್ಮದೇವನು ಪನಸ ಬೀಜವನ್ನು ಅನುಗ್ರಹಿಸುತ್ತಾನೆ. ನಾರದನು ಸಿದ್ಧಾರ್ಥನಾಗಿ ಭುವಿಗೆ ಇಳಿದು ಆನಂದವರ್ಮ ಎನ್ನುವ ರಾಜನಿಗೆ ಬೀಜವನ್ನು ನೀಡಿ, ‘ಇದು ಬಡತನವನ್ನು ದೂರ ಮಾಡುವ ಫಲ. ಅಭಿವೃದ್ಧಿ ಪಡಿಸು’ ಎನ್ನುತ್ತಾನೆ. ಪನಸ ವೃಕ್ಷಗಳು ಬೆಳೆಯುತ್ತವೆ. ಬಡವರ ಹೊಟ್ಟೆ ತಂಪಾಗುತ್ತವೆ. ಮತ್ತೊಂದೆಡೆ ಚೂತ ಹಾಗೂ ಪನಸ ಫಲಗಳು ತಂತಮ್ಮ ಗುಣಧರ್ಮಗಳನ್ನು ಪ್ರಕಟಪಡಿಸುವ ಸನ್ನಿವೇಶ. ಕೊನೆಗೆ ಹಲಸಿನ ಮರಗಳು ಮರಕಳ್ಳರ ಗರಗಸಕ್ಕೆ ಆಹುತಿಯಾಗುತ್ತವೆ. ರಾಜನಿಗೂ ಕಳ್ಳರಿಗೂ ಯುದ್ಧ ಸಮನಿಸಿ ಕಳ್ಳರು ಪಲಾಯನ ಮಾಡುತ್ತಾರೆ. ಕೊನೆಗೆ ಪ್ರಭುರಕ್ಷಿತ ಹಲಸಿನ ಮರಗಳುಳ್ಳ ಅರಣ್ಯಕ್ಕೆ ‘ರಕ್ಷಿತಾರಣ್ಯ’ ಎನ್ನುವ ನಾಮಕರಣ. ಹಲಸಿನ ಬಳಕೆಯ ಕುರಿತಾದ ಪ್ರಸ್ತುತಿ.. ಹೀಗೆ ಕಥಾ ಹಂದರ.

ಕುಂಬಳೆಯ ಹಿರಿಯ ಪ್ರಸಂಗಕರ್ತ  ಶೇಡಿಗುಮ್ಮೆ ವಾಸುದೇವ ಭಟ್ಟರು ಪದ್ಯಗಳನ್ನು ರಚಿಸಿದ್ದಾರೆ. ಒಟ್ಟು ನೂರ ಹನ್ನೊಂದು ಪದ್ಯಗಳಲ್ಲಿ ಕಥೆಯನ್ನು ಜೋಡಿಸಿದ್ದಾರೆ. ಇವರು ಇಪ್ಪತ್ತಕ್ಕೂ ಮಿಕ್ಕಿ ಪ್ರಸಂಗಗಳ ರಚಯಿತರು. ಪನಸೋಪಾಖ್ಯಾನದಂತೆ ‘ಸ್ವಾತಂತ್ರ್ಯ ಸಂಗ್ರಾಮ, ಅಕ್ಷರಾಂಬಿಕಾ ವಿಜಯ, ಕಾರ್ಗಿಲ್ ವಿಜಯ, ಅಪ್ಪಿಕೋ ಚಳುವಳಿ’ ಪ್ರಸಂಗಗಳನ್ನು ರಚಿಸಿದ್ದಾರೆ. ಪನಸೋಪಾಖ್ಯಾನದ ಮೊದಲ ಪ್ರಯೋಗದಲ್ಲಿ ವಾಸುವೇವ ಭಟ್ಟರು ಉಪಸ್ಥಿತರಿದ್ದು ಕಲಾವಿದರನ್ನು ಪ್ರೋತ್ಸಾಹಿಸಿದ್ದರು.

ಪೌರಾಣಿಕ ಕಥೆಗಳ ಪ್ರಸ್ತುತಿಗೆ ನಿಶ್ಚಿತವಾದ ಮಾರ್ಗಗಳಿವೆ. ವಾದ, ಪ್ರತಿವಾದಗಳಿಗೆ ಅವಕಾಶಗಳಿವೆ. ಆದರೆ ಒಂದು ಉದ್ದೇಶವನ್ನು ಇಟ್ಟುಕೊಂಡು ರಚಿತವಾದ ಪ್ರಸಂಗಗಳ ಪ್ರಸ್ತುತಿಗೆ ಸಮಕಾಲೀನ ವಿದ್ಯಮಾನಗಳ ಜ್ಞಾನ ಬೇಕಾಗುತ್ತದೆ. ಕೇವಲ ಪುರಾಣ ಜ್ಞಾನ ಮಾತ್ರ ಸಾಕಾಗದು. ಪುರಾಣ ಪ್ರಸಂಗಗಳ ಅರ್ಥದಾರಿಗಳಿಗೆ ಅಷ್ಟು ಬೇಗನೆ ಪುರಾಣ ಲೋಕದಿಂದ ಕಳಚಿಕೊಂಡು ಸಾಮಾಜಿಕದೆಡೆಗೆ ಬರಲೂ ಕಷ್ಟ. ಆದರೆ ಮೊದಲ ಪ್ರಯೋಗದಲ್ಲಿ ಎಲ್ಲಾ ಕಲಾವಿದರು ಯಕ್ಷಗಾನದ ಚೌಕಟ್ಟಿನ ಬಿಗಿಯೊಳಗೆ ಅರ್ಥಗಳನ್ನು ಪ್ರಸ್ತುತ ಪಡಿಸಿದ್ದಾರೆ. ಕೇವಲ ಒಂದು ಪ್ರಯೋಗದಿಂದ ಏನನ್ನೂ ಹೇಳಲಾಗದು. ಮೂರ್ನಾಲ್ಕು ಪ್ರಯೋಗಗಳಾದಾಗ ಅರ್ಥಗಾರಿಕೆಯನ್ನು ‘ಕ್ರಿಸ್ಪ್’ ಆಗಿ ಪ್ರಸ್ತುತಪಡಿಸಬಹುದು ಎನ್ನುವುದು ಕಲಾವಿದರ ಆಶಯ.

ಮೊದಲ ಪ್ರಸ್ತುತಿಯು ಸುಮಾರು ಮೂರುಮುಕ್ಕಾಲು ಗಂಟೆಯಷ್ಟು ಲಂಬಿತವಾಗಿದೆ. ಇದನ್ನು ಎರಡು, ಎರಡೂವರೆ ಗಂಟೆಗೆ ಹೊಂದುವಂತೆ ಹೃಸ್ವಗೊಳಿಸಬೇಕು. ಕಾಲೇಜು, ಅರಣ್ಯ ಇಲಾಖೆ, ಕೃಷಿ ಇಲಾಖೆ, ಹಲಸು ಮೇಳ, ಆಹಾರ ಮೇಳ.. ಮೊದಲಾದ ಕಲಾಪಗಳಲ್ಲಿ ಪ್ರದರ್ಶನ ಕಾಣಬೇಕು. ಯಾಕೆಂದರೆ ಕಲಾಮಾಧ್ಯಮ ಮೂಲಕ ಕೃಷಿ ಉತ್ಪನ್ನವೊಂದು ಹಲವು ಬಗೆ ತಾಳುವ ಅಂದಕ್ಕೆ ತಾಳಮದ್ದಳೆಯನ್ನು ಕೇಳಬೇಕು. ಮನಸ್ಸು ಮಾಡಿದರೆ ಇಲಾಖೆಗಳಿಗೆ, ಸಂಸ್ಥೆಗಳಿಗೆ ಕಷ್ಟವಾಗದು.ಪರಿಸರ ಕಾಳಜಿಯ ದೃಷ್ಟಿಯಿಂದ ಅರಣ್ಯ ಇಲಾಖೆಗಳೂ ಈ ಬಗ್ಗೆ ಯೋಚಿಸಬಹುದಾಗಿದೆ.

Numerous initiatives are currently underway in the country concerning the commercialization of jackfruit. A significant aspect of these initiatives is the potential to cultivate jackfruit as both an agricultural and industrial enterprise. In addition, there has been a noticeable campaign aimed at raising awareness about the benefits and uses of jackfruit. This movement is also intertwined with an environmental conservation message, emphasizing the importance of sustainable practices.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ

ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು…

2 hours ago

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

1 day ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

1 day ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

1 day ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

1 day ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

1 day ago