ದಕ್ಷಿಣ ಕನ್ನಡ ಜಿಲ್ಲೆಯು ಕಲಾರಾಧನೆಗೆ ಅದರಲ್ಲೂ ಯಕ್ಷಗಾನದ ನೆಲ. ಯಕ್ಷಗಾನ ಈ ಬಾರಿ ಬಹುಪಾಲು ನಿಂತೇ ಹೋಯಿತು, ಕೊರೋನಾ ಈ ಕಲೆಗೂ ಬಾಧೆ ನೀಡಿತು. ತಾಳಮದ್ದಳೆಯೂ ಅದರ ಒಂದು ಭಾಗ. ಕೊರೋನಾ ಇಫೆಕ್ಟ್ ಕಡಿಮೆಯಾಗುತ್ತಿದ್ದಂತೆಯೇ ಯಕ್ಷಗಾನಕ್ಕೆ ಅವಕಾಶ ನೀಡಿದರೂ ಹೆಚ್ಚು ಜನರು ಭಾಗವಹಿಸುವಂತಿಲ್ಲ.ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಶ್ರೀಕೃಷ್ಣ ಯಕ್ಷಗಾನ ಹವ್ಯಾಸಿ ಕಲಾ ಬಳಗವು ಕಲಾಸಕ್ತರಿಗಾಗಿ ತಾಳಮದ್ದಳೆಯನ್ನು ಹಮ್ಮಿಕೊಂಡಿತು. ಅದೂ ಉಚಿತವಾಗಿ. ಕಲಾ ಆಸಕ್ತರ ಮನೆಯಲ್ಲಿ ಉಚಿತವಾಗಿ ಶ್ರೀಕೃಷ್ಣ ಯಕ್ಷಗಾನ ಕಲಾ ಬಳಗದ ತಂಡದ ಸದಸ್ಯರು ತಾಳಮದ್ದಳೆ ನಡೆಸಿ ಕೊಡುತ್ತಿದ್ದಾರೆ. ಈಗಾಗಲೇ ಸುಮಾರು 10 ತಾಳಮದ್ದಳೆ ಉಚಿತವಾಗಿ ನಡೆಸಿದ್ದಾರೆ. ತಂಡದಲ್ಲಿ ಸುಮಾರು 10 ಕಲಾವಿದರು ಇದ್ದಾರೆ.
ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲಕೃಷ್ಣ ಭಟ್ ದೇವಸ್ಯ, ಗಂಗಾಧರ ಗೌಡ ರುದ್ರಚಾಮುಂಡಿ , ಪ್ರತೀಕ್ ಆಚಾರ್ಯ ಕಂದ್ರಪ್ಪಾಡಿ, ಶಶಾಂಕ್ ಎಲಿಮಲೆ
ಚೆಂಡೆ-ಮದ್ದಳೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ದೇವಸ್ಯ, ವೆಂಕಟೇಶ್ ಭಟ್ ದೇವಸ್ಯ, ಲಕ್ಷ್ಮೀಶ ಶಗ್ರಿತ್ತಾಯ,
ಮುಮ್ಮೇಳದಲ್ಲಿ ಬಾಬು ಗೌಡ ಅಚ್ರಪ್ಪಾಡಿ, ಕುಶಾಲಪ್ಪ ಮಾಸ್ತರ್ ಕಂದ್ರಪ್ಪಾಡಿ, ಶಿವಸುಬ್ರಹ್ಮಣ್ಯ ಜೋಯಿಸ ಕರುವಜೆ, ಶಿವಕುಮಾರ ಭಟ್ ಗುತ್ತಿಗಾರು, ಲಕ್ಷ್ಮೀಶ ಗಬ್ಲಡ್ಕ , ತಾರಾನಾಥ ಅಂಬೆಕಲ್ಲು, ಪಾಲನೇತ್ರ ಮುಂಡೋಡಿ, ರಾಜೇಶ್ ,ಮಾವಿನಕಟ್ಟೆ ಮೊದಲಾದವರು ಇದ್ದಾರೆ. ಮನೆ ಮನೆಗಳಲ್ಲಿ ಕಲಾಸೇವೆ ಮಾಡುವ ಈ ತಂಡ ಇದುವರೆಗೂ ಉಚಿತವಾಗಿ ಕಾರ್ಯಕ್ರಮ ನಡೆಸಿಕೊಟ್ಟಿದೆ. ಕಲಾಸೇವೆಯಲ್ಲಿ ತೊಡಗಿಸಿದೆ.
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…
ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…
ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…