ಯಾರಲ್ಲಿ ಹೆಚ್ಚು ಆತ್ಮವಿಶ್ವಾಸ ಇರುತ್ತದೆಯೋ ಅವರಲ್ಲಿ ದೃಢ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮನೋಭಾವ ಇರುತ್ತದೆ.ಅಂತವರು ತಮ್ಮ ಗುರಿಗಳನ್ನು ಬೇಗ ಮುಟ್ಟುತ್ತಾರೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ. ಬಿ. ಅರ್ತಿಕಜೆ ಹೇಳಿದರು.
ಅವರು ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳು ಅವರ ಮನೆಗೆ ತೆರಳಿ ಸಂದರ್ಶಿಸಿ ವಿಶೇಷ ಸಂವಾದ ನಡೆಸಿದರು. ತಮ್ಮ ಯೋಚನೆಗೆ ತಕ್ಕಂತೆ, ಬುದ್ದಿವಂತಿಕೆಗೆ ಅನುಗುಣವಾಗಿ ಕೆಲಸವನ್ನು ಹಿಡಿಯುವಲ್ಲಿ ಕಾರ್ಯನಿರತರಾಗುವುದು ಉತ್ತಮ. ಹಾಗೆಯೇ ದೊಡ್ಡವರಾದ ನಂತರ ತಮಗೆ ಬೇಕಾದ ವಸ್ತುಗಳನ್ನು ತಾವೇ ನಿರ್ಧರಿಸಿ ಸರಿಯಾದ ದಾರಿಯಲ್ಲಿ ಹೋಗುವುದು ಪ್ರತಿಯೊಬ್ಬನ ಕರ್ತವ್ಯ. ಅಲ್ಲದೆ ಶಿಕ್ಷಣದಲ್ಲಿ ಸಂಸ್ಕಾರವನ್ನು ಕಲಿತುಕೊಂಡು ಮನುಷ್ಯತ್ವವನ್ನು ಬೆಳೆಸುವುದು. ಈ ಮೂಲಕ ಸುಪ್ತ ಪ್ರತಿಭೆಯನ್ನು ಪ್ರಕಾಶಿಸಬೇಕು ಎಂದು ಹೇಳಿದರು.
ಸಂವಾದವನ್ನು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಾದ ವಸುದೇವ ತಿಲಕ್, ದಿಶಾ, ವರ್ಷ,ವೈಷ್ಣವಿ ಶೆಟ್ಟಿ ಮತ್ತು ದೇವಯಾನಿ ನಡೆಸಿದರು. ಉಪನ್ಯಾಸಕಿಯರಾದ ಸಾಯಿಸುಧಾ ಮತ್ತು ಕವಿತಾ ಸಂವಾದದಲ್ಲಿ ಭಾಗಿಯಾಗಿದ್ದರು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…