ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ದಕ್ಷಿಣ ಕನ್ನಡ ಸ್ವಾತಂತ್ರ್ಯ ಹೋರಾಟಗಾರರು ಈ ವಿಚಾರದಲ್ಲಿ ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಪಾಂಚಜನ್ಯ ಸ್ಟುಡಿಯೋದಲ್ಲಿ ನಡೆಯಿತು.
ಸ್ಪರ್ಧಾ ಕಾರ್ಯಕ್ರಮವನ್ನು ತೀರ್ಪುಗಾರರಾದ ಪರಿಕ್ಷಾಂಗ ಕುಲಸಚಿವರಾದ ಡಾ. ಎಚ್.ಜಿ. ಶ್ರೀಧರ್ ಉದ್ಘಾಟಿಸಿದರು. ಸಭಾ ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ನಿವೃತ್ತ ಯೋಧರ ಸಂಘದ ಅಧ್ಯಕ್ಷರಾದ ನಾರಾಯಣ ಭಟ್ ವಹಿಸಿದ್ದರು. ವೇದಿಕೆಯಲ್ಲಿ ತೀರ್ಪುಗಾರರಾದ ಶಂಕರಿ ಶರ್ಮ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಡಾ. ರವಿಪ್ರಕಾಶ್ ಕಜೆ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ಉಪಸ್ಥಿತರಿದ್ದರು.
ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಸ್ವಾಗತಿಸಿ, ಸದಸ್ಯೆ ಶಾಲಿನಿ ಆತ್ಮಭೂಷಣ್ ವಂದಿಸಿದರು.
ಕಾರ್ಯಕ್ರಮವನ್ನು ಪಾಂಚಜನ್ಯ ನಿಲಯ ಸಂಯೋಜಕಿ ತೇಜಸ್ವಿನಿ ರಾಜೇಶ್ ನಿರೂಪಿಸಿದರು. ತಾಂತ್ರಿಕ ಸಲಹೆಗಾರ ಪ್ರಶಾಂತ್ ಸಹಕರಿಸಿದರು.
ಸ್ಪರ್ಧಾ ವಿಜೇತರು : ಪಿಯುಸಿ ವಿಭಾಗದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ವಿದ್ಯಾಲಕ್ಷ್ಮೀ(ಪ್ರಥಮ), ಮೋಕ್ಷಿತಾ(ದ್ವಿತೀಯ), ಶೋಭಿತಾ(ತೃತೀಯ) ಬಹುಮಾನ ಪಡೆದಿರುತ್ತಾರೆ.
ಪದವಿ-ಸ್ನಾತಕೋತ್ತರ ಪದವಿ-ವೃತ್ತಿಪರ ವಿಭಾಗದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಧನ್ಯಶ್ರೀ (ಪ್ರಥಮ), ನೆಹರೂನಗರ ವಿವೇಕಾನಂದ ಸ್ವಾಯತ್ತ ಪದವಿ ಕಾಲೇಜಿನ ವಿದ್ಯಾರ್ಥಿನಿ ಚೈತನ್ಯ(ದ್ವಿತೀಯ), ಅವನಿ ಕೆ.(ತೃತೀಯ) ಮತ್ತು ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಸುಲಕ್ಷಣಾ ಶರ್ಮ (ಪ್ರೋತ್ಸಾಹಕ) ಬಹುಮಾನವನ್ನು ಪಡೆದುಕೊಂಡಿರುತ್ತಾರೆ.
ಮೈಸೂರಿನಲ್ಲಿ ಕಾರ್ಯಾಚರಿಸುತ್ತಿರುವ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕಾ ಕಂಪನಿ "ಬ್ರಿವೆರಾ"ದಲ್ಲಿ ಉದ್ಯೋಗಾವಕಾಶಗಳು ಇವೆ. ಐಟಿಐ,…
ಕೊಂಕಣ, ಗೋವಾ, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಚಂಡೀಗಢ, ಬಿಹಾರ ಸೇರಿದಂತೆ ಹಲವು ರಾಜ್ಯಗಳ…
ರಾತ್ರಿ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಮೂವರು ಹೊಟ್ಟೆ ನೋವಿನಿಂದ ಸಾವನಪ್ಪಿದ …
ಇಂದು ವಿಶ್ವ ಮಾವು ದಿನಾಚರಣೆ. ಪ್ರತೀ ವರ್ಷ ಜುಲೈ 22 ರಂದು ಮಾವಿನಹಣ್ಣಿನ…
ಪ್ರತಿಯೊಂದು ಜನನ ಮರಣದ ನೋಂದಣಿ ಕಡ್ಡಾಯವಾಗಿದ್ದು, ಘಟನೆ ಸಂಭವಿಸಿದ 21 ದಿನಗಳೊಳಗೆ ನಗರ/…
ಈ ಗಿಡದ ಸಸ್ಯ ಶಾಸ್ತ್ರೀಯ ಹೆಸರು Andrographis Paniculata. ಕಿರಾತಕಡ್ಡಿಗೆ ನೆಲಬೇವು ಎಂಬ…