ಕಿಚ್ಚ ಸುದೀಪ್ ನಟನೆ, ಮ್ಯಾನರಿಸಮ್, ಡೈಲಾಗ್ ಡೆಲಿವರಿಗೆ ಫಿದಾ ಆಗದವರೇ ಇಲ್ಲ. ಅಷ್ಟು ಮಾತ್ರವಲ್ಲ. ಅವರ ಪ್ರತಿಯೊಂದು ಸಿನಿಮಾ ಬಂದಾಗಲು ಅದಕ್ಕೆ ತಕ್ಕಂತೆ ವಿಶಿಷ್ಟ ಹೇರ್ ಸ್ಟೈಲ್ ಮಾಡಿಕೊಂಡಿರುತ್ತಾರೆ. ಇದರಿಂದ ಶಾಲಾ ಕಾಲೇಜ್ ಯುವಕರಂತು ಫುಲ್ ಫಿದಾ ಆಗಿರುತ್ತಾರೆ. ಅವರಂತೆ ನಂತರ ಅದೇ ಟ್ರೆಂಡ್ ಆಗಿ ಬಿಡುತ್ತೆ. ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರ ಬಂದ ಮೇಲಂತೂ ಅವರ ಹೆಬ್ಬುಲಿ ಹೇರ್ ಸ್ಟೈಲ್ ಫುಲ್ ಫೇಮಸ್ ಆಗಿತ್ತು. ಈಗ ಈ ಹೇರ್ ಸ್ಟೈಲ್ ಗೆ ರಬಕವಿಬನಹಟ್ಟಿ ಮುಖ್ಯ ಶಿಕ್ಷಕರು ಬೇಸತ್ತು ಹೋಗಿದ್ದಾರೆ.
ನಮ್ಮ ಶಾಲೆಯ ಗಂಡುಮಕ್ಕಳು ಹೆಬ್ಬುಲಿಯಂತಹ ಹೇರ್ ಕಟಿಂಗ್ ಮಾಡಿಸಿಕೊಂಡು ಬರುತ್ತಿದ್ದಾರೆ. ಇದರಿಂದ ಕಲಿಕೆಗೆ ಆಸಕ್ತಿ ತೋರಿಸುತ್ತಿಲ್ಲ. ಆದ್ದರಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ ವಿನಂತಿಸುತ್ತೇನೆ. -ಕುಲಹಳ್ಳಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ
ಹೀಗಂತ ವಿದ್ಯಾರ್ಥಿಗಳ “ಹೆಬ್ಬುಲಿ” ಕಟಿಂಗ್ ಸೇರಿದಂತೆ ವಿಚಿತ್ರ ಹೇರ್ ಸ್ಟೈಲ್ ಗೆ ಬೇಸತ್ತ ಮುಖ್ಯ ಶಿಕ್ಷಕರೊಬ್ಬರು ಅಂತಹ ಕಟಿಂಗ್ ಮಾಡದಂತೆ ಸಲೂನ್ ಮಾಲೀಕರಿಗೆ ಪತ್ರ ಬರೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಕುಲಹಳ್ಳಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವಾಜಿ ನಾಯಕ ಎಂಬ ಮುಖ್ಯ ಶಿಕ್ಷಕರು ಹೀಗೆ ಕುಲಹಳ್ಳಿ ಗ್ರಾಮದ ಸಲೂನ್ ಅಂಗಡಿಗಳಿಗೆ ಪತ್ರ ಬರೆದಿದ್ದಾರೆ.
ನಮ್ಮ ಶಾಲೆಯ ಗಂಡುಮಕ್ಕಳು ಹೆಬ್ಬುಲಿಯಂತಹ ಹೇರ್ ಕಟಿಂಗ್ ಮಾಡಿಸಿಕೊಂಡು ಬರುತ್ತಿದ್ದಾರೆ. ತಲೆಯ ಒಂದು ಬದಿ ಕೂದಲು ಬಿಟ್ಟು, ಇನ್ನೊಂದು ಬದಿ ಕೂದಲು ಉಳಿಸಿಕೊಂಡು ಕಟಿಂಗ್ ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಕಲಿಕೆಗೆ ಆಸಕ್ತಿ ತೋರಿಸುತ್ತಿಲ್ಲ. ಶೈಕ್ಷಣಿಕ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿಲ್ಲ. ಆದ್ದರಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ ವಿನಂತಿಸುತ್ತೇನೆ. ಒಂದು ವೇಳೆ ವಿದ್ಯಾರ್ಥಿಗಳು “ಹೆಬ್ಬುಲಿ” ಹೇರ್ ಕಟಿಂಗ್ ಮಾಡಲು ಒತ್ತಾಯ ಮಾಡಿದರೆ… ಅಂತಹ ವಿದ್ಯಾರ್ಥಿಗಳ ಹೆಸರನ್ನು ನನಗೆ ಅಥವಾ ಪಾಲಕರ ಗಮನಕ್ಕೆ ತನ್ನಿ ಎಂದು ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಮುಖ್ಯ ಶಿಕ್ಷಕ ಉಲ್ಲೇಖಿಸಿದ್ದಾರೆ.
ಹಿಂದೆ ಒಂದು ಕಾಲ ಇತ್ತು. ಅಲ್ಲಿ ಮಕ್ಕಳಿಗೆ ಕ್ರಾಪ್ ಕಟ್ ಮಾತ್ರ. ಅವಕಾಶ. ಅ ದಕ್ಕೆ ಒಂದಷ್ಟು ಎಣ್ಣೆ ಹಾಕಿ ಸೈಡ್ ಕ್ರಾಪ್ ಹಾಕಿ ಬಾಚಿದ್ರೆ ಥೇಟ್ ಮನ್ಮಥ ಲುಕ್. ಆದ್ರೆ ಈಗ ಹಾಗಲ್ಲ. ತರಹೇವಾರಿ ಹೇರ್ ಸ್ಟೈಲ್ ಗಳು, ದಿನಕ್ಕೊಂದು ಬರುವ ಸಿನಿಮಾಗಳಲ್ಲಿ ಹೀರೋಗಳು ಮಾಡಿದ ಹೇರ್ ಸ್ಟೈಲೇ ಈಗಿನ ಮಕ್ಕಳಿಗೆ ಬೇಕು. ಅದು ಶಿಸ್ತು ಅಲ್ಲ, ಶಾಲೆಗೆ, ಕಾಲೇಜಿಗೆ ಹೀಗೆ ಹೋಗಬಾರದು ಎಂದರೆ ಕೇಳುವವರಾರು ಅಲ್ವಾ..?
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…