ಭಾರತದಾದ್ಯಂತ ಅನೇಕ ನಗರಗಳು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ಈ ವಾರ ದಾಖಲಿಸಿದೆ. ಬೇಸಿಗೆಯ ಆರಂಭಿಕ ತಾಪಮಾನವು ಬಿಸಿಗಾಳಿಯನ್ನೇ ಸೃಷ್ಟಿಸಿದೆ, ಹೀಟ್ ವೇವ್ ಎಚ್ಚರಿಕೆಗಳನ್ನು ಹವಾಮಾನ ಇಲಾಖೆ ನೀಡಿದೆ. ದೇಶದ 27 ಹವಾಮಾನ ಕೇಂದ್ರಗಳು 43 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸಿದ್ದು, 19 ಸ್ಥಳಗಳಲ್ಲಿ ಶಾಖದ ಅಲೆಗಳನ್ನು ದಾಖಲಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.…..ಮುಂದೆ ಓದಿ….
ದೆಹಲಿಯ ಸಫ್ದರ್ಜಂಗ್‌ನಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ರಾಜಸ್ಥಾನದ ಬಾರ್ಮರ್‌ನಲ್ಲಿ 46.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ದೇಶದ ಅತಿ ಹೆಚ್ಚು ತಾಪಮಾನವಾಗಿದೆ. ಭಾನುವಾರ ಬಾರ್ಮರ್‌ನಲ್ಲಿ 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಇದು ಅತಿ ಹೆಚ್ಚು ತಾಪಮಾನ ಮತ್ತು ಸಾಮಾನ್ಯಕ್ಕಿಂತ ಸುಮಾರು 7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಇಲಾಖೆ ತಿಳಿಸಿದೆ.ಯಾವುದೇ ಪ್ರದೇಶದಲ್ಲಿ 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವಿದ್ದರೆ ಅದನ್ನು ತೀವ್ರ ಶಾಖದ ಅಲೆ ಎಂದು ಹೇಳಲಾಗುತ್ತದೆ. ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು ಒಡಿಶಾ ಸೇರಿದಂತೆ ಉತ್ತರ, ಪೂರ್ವ, ಮಧ್ಯ ಮತ್ತು ಪಶ್ಚಿಮ ಭಾರತದ ಕೆಲವು ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿ ಮುಂದುವರಿಯಲಿದೆ ಎಂದು ಇಲಾಖೆ ಎಚ್ಚರಿಸಿದೆ .
ಉತ್ತರ ಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಒಡಿಶಾದಂತಹ ರಾಜ್ಯಗಳು 10 ರಿಂದ 11 ದಿನಗಳ ಕಾಲ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆರಂಭಿಕ ಶಾಖದ ಅಲೆಯು ಕೃಷಿಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಈ ವರ್ಷವೂ ಸೇರಿದಂತೆ ಸತತ ಮೂರನೇ ವರ್ಷವೂ ದೇಶದ ಗೋಧಿ ಬೆಳೆಗೆತಾಪಮಾನದ ಕಾರಣದಿಂದ ಸಂಕಷ್ಟವಾಗುತ್ತಿದೆ. ಕಳೆದ ವರ್ಷ, ರಾಜಸ್ಥಾನದಲ್ಲಿ 50.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದಾಗ, 40,000 ಕ್ಕೂ ಹೆಚ್ಚು ತಾಪಮಾನದ ಕಾರಣದಿಂದ ರೋಗಗಳು ಹಾಗೂ ವಿವಿಧ ಪ್ರಕರಣಗಳು ದಾಖಲಾಗಿದ್ದವು .ಸರ್ಕಾರಿ ಅಂಕಿಅಂಶಗಳ ಪ್ರಕಾರ, 2024 ರಲ್ಲಿ ಶಾಖದ ಅಲೆಯಿಂದಾಗಿ ಸುಮಾರು 150 ಜನರು ಸಾವನ್ನಪ್ಪಿದರು. ಈ ಬಾರಿ ಎಚ್ಚರಿಕೆಯ ಅಗತ್ಯ ಇದೆ.
ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…
ಹಲಸಿನ ಬೇಳೆ ಸೂಪ್ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…
ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…
ಪ್ರೀತಿ ಎಂದರೆ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದು. ಆದರೆ ಎಲ್ಲರಿಗೂ ಪ್ರೀತಿಯಲ್ಲಿ ಒಂದೇ…
ಕಾಸರಗೋಡು ಮೂಲದ ಸ್ವಾಮೀಜಿಯೊಬ್ಬರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಈಚೆಗೆ ನಡೆದ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದಲ್ಲಿ…
ನಾಲಿಗೆ ಶುದ್ಧವಾಗಿದ್ದರೆ ಮಾತ್ರ ನಮ್ಮ ವ್ಯಕ್ತಿತ್ವವೂ ಶುದ್ಧವಾಗಿರಲು ಸಾಧ್ಯ; ಆದ್ದರಿಂದ ಕಲುಷಿತಗೊಂಡಿರುವ ನಮ್ಮ…