ಶಾಲೆಯ ತಾತ್ಕಾಲಿಕ ಪೆಂಡಾಲ್ ಕುಸಿದು 40ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ…!

Advertisement
Advertisement

ಶಾಲಾ ವಿಜ್ಞಾನ ಮೇಳ ಕಾರ್ಯಕ್ರಮ ನಡೆಯುತ್ತಿದ್ದಾಗ ಪೆಂಡಾಲ್ ಕುಸಿದು ಬಿದ್ದ ಪರಿಣಾಮ 40ಕ್ಕೂ ಅಧಿಕ ವಿದ್ಯಾರ್ಥಿಗಳು  ಗಾಯಗೊಂಡ ಘಟನೆ ಕಾಸರಗೋಡು ಜಿಲ್ಲೆ ಉಪ್ಪಳ ಸಮೀಪದ ಬೇಕೂರು ಸರ್ಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಆವರಣದಲ್ಲಿ ನಡೆದಿದೆ.

Advertisement

ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಶಾಲಾ ವಿಜ್ಞಾನ ಮೇಳ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೂರು ದಿನಗಳ ಕಾಲ ಬೇಕೂರು ಸರಕಾರಿ ಹಯಾರ್ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನ ಮೇಳ ಆಯೋಜಿಸಲಾಗಿದ್ದು, ಎರಡನೇ ದಿನವಾದ ಇಂದು ಈ ಅವಘಡ ನಡೆದಿದೆ.

Advertisement
Advertisement

ಈ ಕಾರ್ಯಕ್ರಮಕ್ಕಾಗಿ ತಾತ್ಕಾಲಿಕವಾಗಿ ಶೀಟ್‌ ಹೊದಿಸಿ ಹಾಕಿದ್ದ ಪೆಂಡಾಲ್‌ ಮಧ್ಯಾಹ್ನ ಸಂಪೂರ್ಣವಾಗಿ ಕುಸಿದು ಬಿದ್ದು ಈ ಅನಾಹುತ ಸಂಭವಿಸಿದೆ.

Advertisement
Advertisement
ಈ ಸಂದರ್ಭದಲ್ಲಿ 200 ಕ್ಕೂ ಅಧಿಕ ವಿದ್ಯಾರ್ಥಿಗಳು ಚಪ್ಪರದಡಿಯಲ್ಲಿದ್ದರು. ಸಂಘಟಕರು ಕೂಡಲೇ ತುರ್ತು ರಕ್ಷಣಾ ಕಾರ್ಯ ಮತ್ತು ಪರಿಹಾರ ಕಾರ್ಯಾಚರಣೆಗೆ ತೊಡಗಿದ್ದರಲ್ಲದೆ, ಸ್ಥಳೀಯಾಡಳಿತದ ನೆರವನ್ನೂ ಪಡೆದಿದ್ದರು. ಅಲ್ಲಿದ್ದವರೇ ಶೀಟ್‌ಗಳನ್ನು ಸರಿಸಿ, ಅಡಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.

ಈ ಘಟನೆಯಲ್ಲಿ 43 ಮಕ್ಕಳು ಹಾಗೂ ನಾಲ್ವರು ಶಿಕ್ಷಕರು ಗಾಯಗೊಂಡಿದ್ದಾರೆ. ಅವರನ್ನು ಕಾಸರಗೋಡು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.

Advertisement

 

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಶಾಲೆಯ ತಾತ್ಕಾಲಿಕ ಪೆಂಡಾಲ್ ಕುಸಿದು 40ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ…!"

Leave a comment

Your email address will not be published.


*