ಗುಜ್ಜೆ ಪಲಾವ್ ಗೆ ಬೇಕಾಗುವ ಸಾಮಗ್ರಿಗಳು : ಗುಜ್ಜೆ 3/4 ಕಪ್, ಅಕ್ಕಿ 2 ಲೋಟ (ಬಾಸುಮತಿ), ಈರುಳ್ಳಿ 1 ತೆಳ್ಳಗೆ ಕಟ್ ಮಾಡಿ, ನೆನೆ ಹಾಕಿದ ಬಟಾಣಿ
ಚಕ್ಕೆ ಚಿಕ್ಕ ತುಂಡು ,ಲವಂಗ 2 , ಏಲಕ್ಕಿ ಸ್ವಲ್ಪ, ಮೊಗ್ಗು, ಆಲ್ ಸ್ಪೈಸಸ್ ಎಲೆ 1 , ಸಾ ಜೀರಿಗೆ, ಗರಂ ಮಸಾಲ 1/2 ಚಮಚ, ಕಿಚನ್ ಕಿಂಗ್ ಮಸಾಲ 1 ಚಮಚ, ಜೀರಿಗೆ ಪುಡಿ 1/2 ಚಮಚ, ಕೊತ್ತಂಬರಿ ಪುಡಿ 1/2 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ತುಪ್ಪ 2 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಕುಕ್ಕರ್ ಗೆ , ತುಪ್ಪ, ಚಕ್ಕೆ, ಲವಂಗ ಏಲಕ್ಕಿ, ಮೊಗ್ಗು, ಆಲ್ ಸ್ಪೀಸಸ್ ಎಲೆ, ಸಾ ಜೀರಿಗೆ ಹಾಕಿ, ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಅಕ್ಕಿ , ಗುಜ್ಜೆ, ಬಟಾಣಿ, ಗರಂ ಮಸಾಲ, ಕಿಚನ್ ಕಿಂಗ್ ಮಸಾಲ, ಜೀರಿಗೆ ಪುಡಿ ಕೊತ್ತಂಬರಿ ಪುಡಿ , ಕೊತ್ತಂಬರಿ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು, ನೀರು,ಹಾಕಿ ಮಿಕ್ಸ್ ಮಾಡಿ . 3 ಸೀಟಿ ಕೂಗಿಸಿ. ಬಿಸಿ ಬಿಸಿಯಾದ ಗುಜ್ಜೆ ಪಲಾವ್ ರೆಡಿ. ನಿಮಗೆ ಇಷ್ಟವಾದ ರಾಯತ ಜೊತೆ ಸವಿಯಿರಿ.