ಥೈಲ್ಯಾಂಡಿನಲ್ಲಿ ಅಡಿಕೆ ಬಳಕೆ ಇಳಿಕೆ – ರಾಷ್ಟ್ರವ್ಯಾಪಿ ನಿಯಂತ್ರಣ ನೀತಿ ಇಲ್ಲ | WHO ವೆಬಿನಾರ್‌ನಲ್ಲಿ ಪ್ರೊ. ಅನಕ್

February 6, 2026
9:16 AM

ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಅಪಾಯಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಆಯೋಜಿಸಿದ್ದ ವೆಬಿನಾರ್‌ನಲ್ಲಿ, ಥೈಲ್ಯಾಂಡಿನ ತಜ್ಞರು ಅಡಿಕೆ ಬಳಕೆ ನಿಯಂತ್ರಣದ ಬಗ್ಗೆ ಮಾತನಾಡಿದರು.ಥೈಲ್ಯಾಂಡಿನ ಚಿಯಾಂಗ್ ಮೈ ಮೂಲದ ಪ್ರೊಫೆಸರ್ ಅನಕ್ ಐ ಅಮರೂನ್ ಅವರು ಮಾತನಾಡಿ, “ಉತ್ತರ ಥೈಲ್ಯಾಂಡಿನಲ್ಲಿ ಅಡಿಕೆ ಜಗಿಯುವುದು ಕಡಿಮೆಯಾಗುತ್ತಿದೆ ಎಂಬುದು ಕಂಡುಬಂದರೂ, ರಾಷ್ಟ್ರವ್ಯಾಪಿ ಸಮೀಕ್ಷೆ ಇಲ್ಲದೆ ನಿಖರ ನಿರ್ಧಾರ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಪ್ರೊ. ಅನಕ್ ಅವರ ಪ್ರಕಾರ, ಉತ್ತರ ಥೈಲ್ಯಾಂಡಿನಲ್ಲಿ ಬಾಯಿ ಕ್ಯಾನ್ಸರ್ ಸಂಭವನೀಯತೆಯ ಕುರಿತು ಎರಡು ಅಧ್ಯಯನ ಸರಣಿಗಳು ನಡೆದಿವೆ. ಅಧ್ಯಯನ ಫಲಿತಾಂಶದಲ್ಲಿ , ಬಾಯಿ ಕ್ಯಾನ್ಸರ್ ಪ್ರಮಾಣ ಏರಿಕೆಯಾಗುತ್ತಿರುವುದು ಹಾಗೂ ನಂತರ ಸ್ವಲ್ಪ ಮಟ್ಟಿಗೆ ಸ್ಥಿರಗೊಂಡರೂ, ಇದೀಗ ಮತ್ತೆ ಏರಿಕೆಯಾಗುವ ಸಾಧ್ಯತೆ ಎಂದು ಹೇಳಿದರು.

Advertisement

ಹಿಂದಿನ ಅಧ್ಯಯನಗಳಲ್ಲಿ ಸುಮಾರು 50% ರೋಗಿಗಳು ಅಡಿಕೆ ಜಗಿಯುತ್ತಿದ್ದರು, ಆದರೆ ಇತ್ತೀಚಿನ ಅಧ್ಯಯನದಲ್ಲಿ ಅದು ಕೇವಲ 14%ಕ್ಕೆ ಇಳಿದಿದೆ. ವಿಶೇಷವಾಗಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈಗ ಅಡಿಕೆ ಜಗಿಯುವ ಅಭ್ಯಾಸ ತೊರೆದಿರುವುದು ಕಂಡುಬಂದಿದೆ. ಆದರೂ ದೇಶದ ಬೇರೆ ಭಾಗಗಳಲ್ಲಿ ಪರಿಸ್ಥಿತಿ ಏನೆಂಬುದು ತಿಳಿಯಲು ಇನ್ನೂ ರಾಷ್ಟ್ರೀಯ ಸಮೀಕ್ಷೆ ಅಗತ್ಯವೆಂದು ಅವರು ಹೇಳಿದರು.

ಚಿಯಾಂಗ್ ಮೈನಲ್ಲಿ ತಾನು ವೈದ್ಯನಾಗಿ ಕಾರ್ಯನಿರ್ವಹಿಸುವಾಗ ಇನ್ನೂ ಅಡಿಕೆ ಬಳಕೆಯೊಂದಿಗೆ ಸಂಬಂಧಿಸಿದ ಬಾಯಿ ಕ್ಯಾನ್ಸರ್ ಪ್ರಕರಣಗಳನ್ನು ನೋಡುತ್ತಿದ್ದೇನೆ ಎಂದು ಪ್ರೊ. ಅನಕ್ ತಿಳಿಸಿದ್ದಾರೆ. ಅಡಿಕೆ ಬಳಕೆಯಿಂದ ಹಲ್ಲುಗಳಲ್ಲಿ ಕಪ್ಪು ಕಲೆ ಹಾಗೂ ಬಾಯಿಯ ಒಳಭಾಗದಲ್ಲಿ ಕ್ಯಾನ್ಸರ್ ಉಂಟಾಗುವ ದೃಶ್ಯಗಳನ್ನು ಅವರು ಉದಾಹರಣೆ ಸಹಿತ ಹೇಳಿದರು.

Advertisement

ಪ್ರೊ. ಅನಕ್ ಐ  ಅಮರೂನ್ ಅವರು ಅಡಿಕೆ ನಿಯಂತ್ರಣಕ್ಕೆ ಮೂರು ಹಂತದ ಕ್ರಮಗಳನ್ನು ಸೂಚಿಸಿದರು: ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳು ಕೈಜೋಡಿಸಿ ಬಾಯಿ ಕ್ಯಾನ್ಸರ್ ಅಪಾಯದ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ತಂಬಾಕು ಮತ್ತು ಮದ್ಯದಂತೆ ಅಡಿಕೆಯ ಮೇಲೂ ರಾಷ್ಟ್ರವ್ಯಾಪಿ ನಿಯಮ ಅಥವಾ ನೀತಿ ಇಲ್ಲ. ಹೀಗಾಗಿ ಸರ್ಕಾರ ತಕ್ಷಣ ನೀತಿ ರೂಪಿಸಬೇಕೆಂದು ಅವರು ಹೇಳಿದರು.

ಮ್ಯಾನ್ಮಾರ್, ಕಂಬೋಡಿಯಾ, ಲಾವೋಸ್ ದೇಶಗಳಿಂದ ಬಂದ ಕಾರ್ಮಿಕರಲ್ಲಿ ಇನ್ನೂ ಅಡಿಕೆ ಬಳಕೆ ಮುಂದುವರಿದಿದೆ. ಬಹುತೇಕ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಅಡಿಕೆ ಮಾರಾಟ ನಡೆಯುತ್ತಿರುವುದು ದೊಡ್ಡ ಅನುಷ್ಠಾನ ಸವಾಲಾಗಿದೆ. ಗಡಿ ವ್ಯಾಪಾರ ನಿಯಂತ್ರಣ ಹಾಗೂ ಈ ಸಮುದಾಯಗಳಲ್ಲಿ ಶಿಕ್ಷಣ ಅಗತ್ಯ ಎಂದು ಅವರು ಹೇಳಿದರು.

Advertisement

ದಂತವೈದ್ಯರು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಅಡಿಕೆ ಬಳಕೆದಾರರನ್ನು ಗುರುತಿಸಿ, ಅವರಿಗೆ Oral Submucous Fibrosis, ಪ್ರಾರಂಭಿಕ ಹಂತದ ಬಾಯಿ ಕ್ಯಾನ್ಸರ್ ತಪಾಸಣೆ ನಡೆಸಿ ತಕ್ಷಣ ಮಾಡಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಬಾಯಿ ಕ್ಯಾನ್ಸರ್ ಗುಣಮುಖರಾದವರೂ ಸಹ ಅಡಿಕೆ, ಧೂಮಪಾನ, ಮದ್ಯ ಸೇವನೆ ಸಂಪೂರ್ಣವಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ಕ್ಯಾನ್ಸರ್ ಮರುಕಳಿಸುವ ಹಾಗೂ ಎರಡನೇ ಗಡ್ಡೆ ಉಂಟಾಗುವ ಅಪಾಯ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು.

Advertisement

ಒಟ್ಟಾರೆ, ಥೈಲ್ಯಾಂಡಿನಲ್ಲಿ ಅಡಿಕೆ ಬಳಕೆ ಕಡಿಮೆಯಾಗುತ್ತಿರುವ ಸೂಚನೆಗಳಿದ್ದರೂ, ಗಡಿ ವ್ಯಾಪಾರ, ಕಾನೂನು ಕೊರತೆ ಹಾಗೂ ಜನಜಾಗೃತಿ ಅಭಾವದಿಂದ ಸಮಸ್ಯೆ ಇನ್ನೂ ಮುಂದುವರಿದಿದೆ ಎಂದು  ಅಭಿಪ್ರಾಯಪಟ್ಟರು.

ಇದನ್ನೂ ಓದಿ…

Advertisement

ಹಲಸಿಗೆ ಯೂರೋಪ್‌ ಮಾರುಕಟ್ಟೆ ಬಾಗಿಲು | ಭಾರತೀಯ ರೈತರಿಗೆ ಅವಕಾಶ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಮತ್ತಷ್ಟು ಚುರುಕು – ಕರಾವಳಿ ಕರ್ನಾಟಕದಲ್ಲಿ ಜೂನ್ 26 ರವರೆಗೆ ಭಾರೀ ಮಳೆ ಎಚ್ಚರಿಕೆ
June 23, 2026
10:13 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ – ಸರ್ಕಾರಕ್ಕೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಒತ್ತಾಯ
June 23, 2026
8:11 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-06-2026 | ಕರ್ನಾಟಕದಲ್ಲಿ ಜೂನ್ 25 ರಿಂದ ಮುಂಗಾರು ಚುರುಕು? ಕರಾವಳಿ-ಮಲೆನಾಡಿನಲ್ಲಿ ಮಳೆ ಹೆಚ್ಚಳದ ನಿರೀಕ್ಷೆ
June 23, 2026
1:51 PM
by: ದ ರೂರಲ್ ಮಿರರ್.ಕಾಂ
ಕೀಟನಾಶಕಗಳ ಅತಿಯಾದ ಬಳಕೆ ನಿಯಂತ್ರಣಕ್ಕೆ ನೈಸರ್ಗಿಕ ಕೃಷಿಯೇ ಮದ್ದು
June 23, 2026
7:37 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror