ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ತಂಡವು 53 ಲಾರಿಗಳಿಂದ 10,855 ಚೀಲಗಳ ಕಳ್ಳಸಾಗಾಣಿಕೆಯ ಅಡಿಕೆಯನ್ನು ವಶಕ್ಕೆ ಪಡೆದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 74.52 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯಾದ್ಯಂತ ನಾಲ್ಕು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಈ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.
ಇದು ಈ ವರ್ಷದ ಅತಿ ದೊಡ್ಡ ಅಕ್ರಮ ಸಾಗಾಟದ ತಡೆಯಾಗಿದ್ದು, ತನಿಖೆ ನಡೆಯುತ್ತಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ನರುಮ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 23 ಕೋಟಿ ಮೌಲ್ಯದ 3,400 ಚೀಲ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ರೈಫಲ್ಸ್ ವಿಭಾಗವು ಹೇಳಿಕೆ ನೀಡಿದೆ. ಆ ಬಳಿಕ ಸೀತಾ ಗ್ರಾಮದಲ್ಲಿ ಅಂದಾಜು 20,400 ಕೆಜಿ ತೂಕದ 1.76 ಕೋಟಿ ಮೌಲ್ಯದ 255 ಚೀಲಗಳನ್ನು ಜಪ್ತಿ ಮಾಡಲಾಗಿದೆ. ಆರ್‌ಆರ್‌ಸಿ ಗ್ರಾಮದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ 400 ಚೀಲಗಳು, ಒಟ್ಟು 32,000 ಕೆಜಿ ಮತ್ತು ಲಾಮ್‌ಲಾಂಗ್ ಖುನೂ ಎಂಬಲ್ಲಿ 5,44,000 ಕೆಜಿ ತೂಕದ 6,800 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಂದಾಜು ಮೌಲ್ಯ 47 ಕೋಟಿ ರೂಪಾಯಿಗಳಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. (Source:UNI )
ನವೆಂಬರ್ 18 ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಜಿಕೆವಿಕೆ ಆವರಣದಲ್ಲಿ ಇಂದಿನಿಂದ ನ.17ರ ವರೆಗೆ ಕೃಷಿ…
ಜೈವಿಕ ಇಂಧನ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಇಂಧನ ಸುಸ್ಥಿರತೆ ಮತ್ತು…
ಜೀವನಶೈಲಿ ಬದಲಾವಣೆ ಮೂಲಕ ಮಧುಮೇಹ ನಿಯಂತ್ರಿಸಬಹುದು ಎಂದು ಸಿಮ್ಸ್ ನಿರ್ದೇಶಕ ಡಾ. ವಿರುಪಾಕ್ಷಪ್ಪ…
ಬ್ಯಾಟರಿ ಚಾಲಿತ ವಾಹನಗಳು, ಹಸಿರು ಶಕ್ತಿ ಮತ್ತು ಪರಿಸರ ಸ್ನೇಹಿ ಸಾರಿಗೆಯ ಆಯ್ಕೆಯಾಗಿವೆ…
ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀದಿ ಅವಧಿಯನ್ನು ಡಿಸೆಂಬರ್ 18 ರವರೆಗೆ ವಿಸ್ತರಣೆ ಮಾಡಲಾಗಿದೆ…