ಒತ್ತಡವಿಲ್ಲದ ಕೆಲಸವಿಲ್ಲ. ಒಂದಲ್ಲ ಒಂದು ಒತ್ತಡದಲ್ಲೇ ಕೆಲಸ ನಿರ್ವಹಿಸಬೇಕಾಗುತ್ತದೆ. ಹಾಗಾಂತ ಒತ್ತಡ ಕಡಿಮೆ ಮಾಡಲು ಕೆಲಸದ ಸಮಯದಲ್ಲಿ ಯಾವ ಪರ್ಯಾಯಕ್ಕೂ ಮೊರೆ ಹೋಗಲು ಆಗುವುದಿಲ್ಲ. ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಒತ್ತಡವನ್ನು ಕಡಿಮೆ ಮಾಡಲು, ರಿಫ್ರೆಶ್ ಮೂಡ್ನಲ್ಲಿರಲು ಮತ್ತು ತಮ್ಮ ಕೆಲಸದ ಮೇಲೆ ಗಮನ ನೀಡಲು ವೈ-ಬ್ರೇಕ್ ಯೋಗ ಅಟ್ ಆಫೀಸ್ ಚೇರ್ ನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ. ಕೇಂದ್ರ ಸಿಬ್ಬಂದಿ ಸಚಿವಾಲಯವು ಹೊರಡಿಸಿರುವ ಆದೇಶದಂತೆ ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳು/ಇಲಾಖೆಗಳು ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ಈ ಹೊಸ ಯೋಗ ಪ್ರೋಟೋಕಾಲ್ನ್ನು ಅಳವಡಿಸಿಕೊಳ್ಳಲು ಮತ್ತು ಇದರ ಬಗ್ಗೆ ಜಾಗೃತಿ ಮೂಡಿಸುವಂತೆ ಮಾಡಲು ಆದೇಶ ನೀಡಿದೆ.
ವೈ-ಬ್ರೇಕ್ ಅಟ್ ವರ್ಕ್ಪ್ಲೇಸ್ನ್ನು ಆಯುಷ್ ಸಚಿವಾಲಯವು ಪರಿಚಯಿಸಿದೆ, ಇದು ಕೆಲಸದ ಸ್ಥಳದಲ್ಲಿ ಒತ್ತಡ, ರಿಫ್ರೆಶ್ ಮೂಡ್ ಮತ್ತು ಕೆಲಸದ ಕಡೆ ಹೆಚ್ಚು ಗಮನ ನೀಡಲು ಅವಕಾಶ ಮಾಡುತ್ತದೆ ಎಂದು ಹೇಳಿದೆ. ಇದರಿಂದ ಉದ್ಯೋಗಿಗಳ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮವನ್ನು ಉಂಟು ಮಾಡುತ್ತದೆ. ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಮತ್ತು ಸಚಿವಾಲಯದ ಸಿಬ್ಬಂದಿಗಳಿಗೆ ಒತ್ತಡ ಕೆಲಸದ ನಡುವೆ ಯೋಗಾಭ್ಯಾಸ ಮಾಡಲು ಸಾಧ್ಯವಾಗದ ಕಾರಣ ಆಯುಷ್ ಈ ಹೊಸ ವೈಶಿಷ್ಟ್ಯಗಳನ್ನು ಪರಿಚಯಸಿದೆ.
ಇದು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳುವ ಸಮಯದಲ್ಲಿ ಇದನ್ನು ಮಾಡಬಹುದು. ಇದು ಕೆಲವು ಸರಳ ಯೋಗ ಅಭ್ಯಾಸಗಳನ್ನು ಒಳಗೊಂಡಿದೆ, ಇದರಲ್ಲಿ ‘ಆಸನಗಳು’ (ಭಂಗಿಗಳು), ‘ಪ್ರಾಣಾಯಾಮ’ (ಉಸಿರಾಟದ ತಂತ್ರಗಳು) ಮತ್ತು ‘ಧ್ಯಾನ’ ಗಳನ್ನು ಒಳಗೊಂಡಿದೆ. ಇದನ್ನು ಪ್ರಖ್ಯಾತ ತಜ್ಞರು ಅಭಿವೃದ್ಧಿಪಡಿಸಲಾಗಿದೆ. ಈ ಬಗ್ಗೆ ಆಯುಷ್ ಸಚಿವಾಲಯದ ವೆಬ್‌ಸೈಟ್‌ನಲ್ಲಿ ವಿವರಗಳನ್ನು ನೀಡಲಾಗಿದೆ.
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…