ಗುಜರಾತ್ ನ ಮುಂದ್ರಾ ಬಂದರಿನ ಮೂಲಕ ಅಕ್ರಮವಾಗಿ ಅಡಿಕೆ ಕಳ್ಳಸಾಗಾಣಿಕೆ ಮಾಡುವ ಪ್ರಯತ್ನಕ್ಕೆ ಮತ್ತೆ ತಡೆಯಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಸುಮಾರು 1.15 ಕೋಟಿ ರೂಪಾಯಿ ಮೌಲ್ಯದ ಸುಮಾರು 27.81 ಮೆಟ್ರಿಕ್ ಟನ್ ಅಡಿಕೆಯನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಾಳದ ಮಾದರಿಯ ವಸ್ತುವನ್ನು ಆಮದು ಎಂದು ನಮೂದಿಸಿ ಅಡಿಕೆ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು.
ಆಮದು ಸರಕನ್ನು ಸುಳ್ಳು ಮಾಹಿತಿಯಾಗಿ ನಮೂದು ಮಾಡಲಾಗಿತ್ತು.ಡಮಾರ್ ಎಂದು ಹೇಳಿಕೊಂಡು ಇಂಡೋನೇಷ್ಯಾದಿಂದ ರಾಳ ಮಾದರಿಯ ಅಪರೂಪದ ವಸ್ತುವಿನ ಹೆಸರನ್ನು ನಮೂದಿಸಿ ಆಮದು ಮಾಡಲಾಗುತ್ತಿತ್ತು. ಇದು ಅಪರೂಪದ ವಸ್ತುವಾಗಿದ್ದು ಭಾರತಕ್ಕೆ ನಿಯಮಿತವಾಗಿ ಆಮದು ಮಾಡಿಕೊಳ್ಳುವುದಿಲ್ಲ. ಹೀಗಾಗಿ ಇಂಡೋನೇಷ್ಯಾದಿಂದ ಕಂಟೈನರ್‌ಗಳಲ್ಲಿ ಮುಂದ್ರಾ ಬಂದರಿಗೆ ಬಂದಿರುವ ವಸ್ತುಗಳಲ್ಲಿ ಅಡಿಕೆ ಇರುವ ಬಗ್ಗೆ ಗುಪ್ತಚರ ಮಾಹಿತಿಯ ಮೇರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 27.81 ಮೆ.ಟನ್ ಅಡಿಕೆ ಪತ್ತೆಯಾಗಿದೆ.
ಅಡಿಕೆ ಆಮದು ಸುಂಕ ಶೇ.110 ಇರುವುದರಿಂದ ವಿದೇಶಿ ಅಡಿಕೆಯನು ಆಮದು ಮಾಡಲು ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಇದುವರೆಗೆ ಡ್ರೈ ಪ್ರುಟ್ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆ ಮಾಡುತ್ತಿದ್ದರೆ ಈಗ ರಾಳದ ಮಾದರಿಯನ್ನು ಉಲ್ಲೇಖಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ, ಅಕ್ರಮ ಆಮದನ್ನು ತಡೆಯುವ ನಿರಂತರ ಪ್ರಯತ್ನಗಳ ಪರಿಣಾಮವಾಗಿ ರೂ.10.38 ಕೋಟಿ ಸುಂಕದ ಮೌಲ್ಯವನ್ನು ಹೊಂದಿರುವ 172.39 ಮೆಟ್ರಿಕ್ ಟನ್‌ಗಳಷ್ಟು ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಪ್ರಕಟಣೆ ತಿಳಿಸಿದೆ.
At Mundra Port, Customs Department seized 27.81 metric tonnes of arecanut. The consignment goods were misrepresented, and an investigation is ongoing.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…