#Naturalfarming | ಸಹಜ ಕೃಷಿಯ ದಿಕ್ಕನ್ನೇ ಬದಲಿಸಿದ G-20 ಸಭೆ..? | ಅಂದು ಈಸ್ಟ್ ಇಂಡಿಯಾ ಕಂಪನಿ.. ಇಂದು ಬಹುರಾಷ್ಟ್ರೀಯ ಕಂಪನಿ.. ಮತ್ತೆ ಗುಲಾಮಗಿರಿಯತ್ತ ಭಾರತ…!!

September 25, 2023
11:17 AM
ನಾವು ಮತ್ತೆ ನಮ್ಮ ದೇಶದ ಕೃಷಿಯನ್ನು ಬ್ರೀಟೀಷರ ಕೈಗೆ ಒಪ್ಪಿಸುತ್ತಿದ್ದೇವೋ ಎನ್ನುವ ಅನುಮಾನ ಮೂಡಿದೆ. 

ವಾರಾಣಸಿಯಲ್ಲಿಂದು ಕೃಷಿ ಮುಖ್ಯ ವಿಜ್ಞಾನಿಗಳ ಸಭೆಯ ಆಯೋಜನೆಯೊಂದಿಗೆ ಜಿ -20 ಅಧ್ಯಕ್ಷತೆಯಲ್ಲಿ ಭಾರತವು 100 ನೇ  ಶೃಂಗಸಭೆಯ ಆತಿಥ್ಯವಹಿಸಿ ಪ್ರಮುಖ ಮೈಲಿಗಲ್ಲಿನ ಸಾಧನೆಯ ಸಂಭ್ರಮವನ್ನು ಆಚರಿಸಿತು. ಜಿ 20 ಅಧ್ಯಕ್ಷತೆಯಲ್ಲಿ ಗಣನೀಯ ಚರ್ಚೆಗಳು ಸಮಗ್ರ ಮತ್ತು ಚೇತರಿಕೆಯ ವೃದ್ಧಿ, ಎಸ್.ಡಿ.ಜಿ. ಪ್ರಗತಿ, ಹಸಿರು ಅಭಿವೃದ್ಧಿ ಮತ್ತು ಪರಿಸರಕ್ಕಾಗಿ ಜೀವನಶೈಲಿ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಾಗಿತ್ತು. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಭಾರತದ G20 ಪ್ರೆಸಿಡೆನ್ಸಿ ಥೀಮ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು, G20 ರಾಷ್ಟ್ರಗಳ ನಡುವೆ ಸಹಕಾರವನ್ನು ಹೆಚ್ಚಿಸಲು ಕೃಷಿ ಕಾರ್ಯ ಗುಂಪು ಬಯಸಿದೆ.

Advertisement
Advertisement
Advertisement

ಜಾಗತಿಕ ಆರ್ಥಿಕ ಸ್ಥಿರತೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ಸಾಧಿಸಲು ಕೆಲಸ ಮಾಡಲು ನೀತಿ ಮಟ್ಟದಲ್ಲಿ ಸಂಘಟಿಸಲು ಸದಸ್ಯ ರಾಷ್ಟ್ರಗಳಿಗೆ ಶೃಂಗಸಭೆಯು ಅವಕಾಶವನ್ನು ಒದಗಿಸಿದೆ. ಕೃಷಿಗೆ ಸಂಬಂಧಿಸಿದಂತೆ, ಸದಸ್ಯ ರಾಷ್ಟ್ರಗಳು ಎದುರಿಸುತ್ತಿರುವ ಪ್ರಸ್ತುತ ಸವಾಲುಗಳೆಂದರೆ ಆಹಾರ ಅಭದ್ರತೆ, ಜಾಗತಿಕ ಮೌಲ್ಯ ಸರಪಳಿಯಲ್ಲಿನ ಅಂತರ, ಹವಾಮಾನ ಬದಲಾವಣೆಯಿಂದಾಗಿ ಬೆಳೆ ಉತ್ಪಾದಕತೆ ಮತ್ತು ಉದ್ಯೋಗ. ಸಂಚಿಕೆ ಟಿಪ್ಪಣಿಯ ಮೂಲಕ, ಈ ಸವಾಲುಗಳನ್ನು ಎದುರಿಸುವುದು ಗುರಿಯಾಗಿದೆ.

Advertisement

ಈ ಮಧ್ಯೆ ನಾವು ಮತ್ತೆ ನಮ್ಮ ದೇಶದ ಕೃಷಿಯನ್ನು ಬ್ರೀಟೀಷರ ಕೈಗೆ ಒಪ್ಪಿಸುತ್ತಿದ್ದೇವೋ ಎನ್ನುವ ಅನುಮಾನ ಮೂಡಿದೆ.  ನಿಮಗೆ ಗೊತ್ತಿರಲಿ ಒಂದು ಬಹುರಾಷ್ಟ್ರೀಯ ಕಂಪನಿ ನಮ್ಮ ದೇಶದೊಳಗೆ ಕುಲಾಂತರಿ ಕೃಷಿಯ ಪದ್ದತಿಯನ್ನು ತರುವುದಕ್ಕೆ ರಾತ್ರಿ ಹಗಲು ಬಹಳಷ್ಟು ಶ್ರಮಿಸುತ್ತಿದೆ. ಸಾವಿರಾರು ಕೋಟಿ ಸುರಿಯುತ್ತಿದೆ. ಮೊನ್ನೆ ಮೊನ್ನೆ ತಾನೇ ಇದರ ಬಗ್ಗೆ ನಮ್ಮ ರಾಜ್ಯದಲ್ಲೂ ಹಲವು ಭಾಗಗಳಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿತ್ತು. ಕುಲಾಂತರಿ ಸಾಸಿವೆ ಎಂಬ ವಿಷಕ್ಕೆ.

ಇನ್ನೊಂದು ಕಂಪನಿ,ಇದರ ಬಗ್ಗೆ ಅಂತಹ ಪರಿಚಯ ಬೇಕಿಲ್ಲ ಎಂದುಕೊಳ್ಳುತ್ತೇನೆ.. ಈ ಕಂಪನಿಯ ಉಸ್ತುವಾರಿ ಮಹತ್ತರ ಕನಸು ಏನೆಂದರೆ, ಇಡೀ ವಿಶ್ವಕ್ಕೆ ಆಹಾರ ಈತ ಒದಗಿಸಬೇಕಂತೆ. ಅದೂ ಕುಲಾಂತರಿ ಬೆಳೆಯ ಮುಖಾಂತರ. ಇನ್ನೊಂದು ಅರ್ಥದಲ್ಲಿ ಇವನು ವಿಶ್ವದ ಆಹಾರವನ್ನು ತನ್ನ ಹಿಡಿತಕ್ಕೆ ತಗೆದುಕೊಳ್ಳಲು ಬಯಸುವ ಮಹಾನುಭಾವ.

Advertisement

ಈಗ..,G-20 ಸಭೆಯ ಅಂತಿಮದಲ್ಲಿ ನಮ್ಮ ಕೃಷಿಯ ಕಳಶವೆಂದು ಬಿಂಬಿಸುವ ಭಾರತೀಯ ಕೃಷಿ ಸಂಶೋಧನ ಕೇಂದ್ರ ಈಗ ಇವುಗಳ ಜೊತೆಗೆ ಮೈತ್ರಿ ಮಾಡಿಕೊಂಡಿದೆ.

ಒಪ್ಪಂದ  ಹೀಗೆ ಹೇಳುತ್ತದೆ : ಸಹಜ ಕೃಷಿಯ ಸುಸ್ಥಿರತೆಗೆ, ವ್ಯಾಪ್ತಿ ದೊಡ್ಡದಾಗಿಸುವುದಕ್ಕೆ, ಎಲ್ಲವನ್ನೂ ಒಳಗೊಳ್ಳಿಸುವುದಕ್ಕೆ, ಸಂಪನ್ಮೂಲಗಳ ಅಭಿವೃದ್ಧಿಗೆ, ರೈತರ ಸಬಲೀಕರಣಕ್ಕೆ, ಅಪೌಷ್ಠಿಕತೆಯ ಭದ್ರತೆಗೆ ಹೀಗೆ ಹಲವು ರೂಪಕಗಳನ್ನು ಕೊಟ್ಟು ಒಟ್ಟಿನಲ್ಲಿ ಸಹಜ ಕೃಷಿ ಎಂಬ ಬೌದ್ಧಿಕ ವಿಚಾರವನ್ನು ವಿಷ ಜಂತುಗಳ ಪಾಲಾಗಿಸಲು ನಮ್ಮ ರಾಜಕೀಯ ಪಕ್ಷಗಳು, ಸಂಶೋಧನಾ ಕೇಂದ್ರಗಳು ಹಾಗೂ ಇನ್ನಿತರೇ ಅಂಗ ಸಂಸ್ಥೆಗಳು ಸಾಲು ಸಾಲಾಗಿ ಶಿರ ಬಾಗಿ ಅವರು ಬಿಸಾಕುವ ಎಂಜಲು ಕಾಸಿಗೆ ನಾಯಿಗಳಂತೆ ನಮ್ಮ ದೇಶದ ಕೃಷಿಯನ್ನು ಅಡವಿಡುತ್ತಿರುವುದು ಶೋಚನೀಯ ಸಂಗತಿ.

Advertisement

ಭಾರತದ ಕೃಷಿ ವ್ಯವಸ್ಥೆಯನ್ನು ವಿದೇಶಿ ಕಂಪನಿಗಳ ಹಾವಳಿಯಿಂದ ಮುಂದಾಗಬಹುದಾದ ಅನಾನುಕೂಲಗಳ ಬಗ್ಗೆ ರೈತರಿಗೆ ಜಾಗ್ರತೆ ಮೂಡಿಸುವ ಮೂಲಕ ಡಾಕ್ಟರ್ ಮಂಜುನಾಥ ಅವರು ಚಾಮರಾಜನಗರ ಜಿಲ್ಲೆಯ ರೈತರು ಜೊತೆಗೂಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror