ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ ಬಿದ್ದು, ಆ ಚಂಡನ್ನು ಎತ್ತಲು ಹೋದಾಗ, ಕಳ್ಳಿಯ ಹಾಲು ಸಿಡಿದು ತನ್ನ ಎಡಗಣ್ಣನ್ನು ಪೂರ್ತಿಯಾಗಿ ಕಳೆದುಕೊಂಡ. ಹಲವಾರು ಜನ ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಲಿಲ್ಲ. ಆ ವೈದ್ಯರೆಲ್ಲ ನಿನಗೆ ಮತ್ತೆ ಆ ಕಣ್ಣಿನ ದೃಷ್ಟಿ ಬರುವುದಿಲ್ಲ ಎಂದು ಕೈ ಚೆಲ್ಲಿದರು.
ಇದಾದ 25-30 ವರ್ಷಗಳ ನಂತರ ಧಾರವಾಡದ ನಮ್ಮ ಚೈತನ್ಯ ವಿಕಾಸ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದಲ್ಲಿ ಹಾಕಲಾಗುವ ಕಣ್ಣಿನ ನಾಟಿ ಔಷಧದ ವಿಷಯ ತಿಳಿದು ಪ್ರತಿ ತಿಂಗಳಿಗೊಮ್ಮೆ ಕಣ್ಣಿನ ಔಷಧಿ ಹಾಕಿಸಿಕೊಳ್ಳತೊಡಗಿದ. ಎರಡು ವರ್ಷಗಳ ನಂತರ ಸ್ವಲ್ಪ ಸುಧಾರಣೆ ಕಂಡು ಬಂದಿದೆ ಎಂದು ನನಗೆ ತಿಳಿಸಿದ. ನೀವು ಈ ಔಷಧಿಯನ್ನು ಹೆಚ್ಚು ಸಲ ಹಾಕಿದಲ್ಲಿ ನನಗೆ ಬೇಗ ಕಣ್ಣು ಬರಬಹುದು ಎಂದು ಆತನೇ ಸಲಹೆ ನೀಡಿದ. ಹೌದು, ಪ್ರತಿದಿನ ತಪ್ಪದೇ ಹಾಕಿಸಬೇಕು ಎಂದಾಗ, ಆಯಿತು, ನಾನು ಪ್ರತಿದಿನ ಬರುತ್ತೇನೆ ಅಂದ. ಅದರಂತೆ ಪ್ರತಿದಿನ ಕಣ್ಣಿನ ಔಷಧಿ ಸತತವಾಗಿ ಹಾಕಿಸಿಕೊಂಡರು.
ನಂತರ ಕಣ್ಣು ಸ್ವಲ್ಪ ಸ್ವಲ್ಪವಾಗಿ ಸುಧಾರಿಸುತ್ತಾ ಹೋಯಿತು. 2 ತಿಂಗಳ ನಂತರ ವಾರದಲ್ಲಿ ಎರಡು ಬಾರಿ ಹನಿ ಹಾಕಿಸಿ ಕೊಳ್ಳಲು ತಿಳಿಸಿದೆ. ಒಟ್ಟು 3 ವರ್ಷಗಳ ನಂತರ, ಈಗ ಆತನಿಗೆ ಎಡಗಣ್ಣು ಸ್ಪಷ್ಟವಾಗಿ ಕಾಣಿಸುತ್ತದೆ. ಓದಲು, ಬರೆಯಲು, ರಾತ್ರಿ ಕೂಡ ವಾಹನ ಚಲಾಯಿಸಲು ಯಾವುದೇ ಸಮಸ್ಯೆ ಆಗುತ್ತಿಲ್ಲ. ಕಣ್ಣು ವಾಪಸು ಬಂದುದು ಅವರ ಖುಷಿಯಾದರೆ, ಅವರಿಗಿಂತ ಅವರಿಗೆ ದೃಷ್ಟಿ ಕೊಡಿಸಿದ ನನಗೂ ಅತ್ಯಂತ ಖುಷಿ.
ನಾನು ವೈದ್ಯನಲ್ಲ. ಕಣ್ಣಿನ ತಜ್ಞನಂತೂ ಅಲ್ಲವೇ ಅಲ್ಲ. ಮನೆಯಲ್ಲಿ ಸ್ವತಃ ಆಯುರ್ವೇದ ವೈದ್ಯರಾದ ನನ್ನ ತಂದೆ, ನಾಟಿ ವೈದ್ಯರಾದ ಮಾವ-ಅಜ್ಜ ಅವರು ಪಾಲಿಸುತ್ತಿದ್ದ ಚಿಕಿತ್ಸಾ ವಿಧಾನಗಳು ಅವರೊಂದಿಗೆ ಮುಗಿಯಬೇಕೆ? ಇಲ್ಲ. ಜನರಿಗೆ ತಲುಪಿಸಲೇಬೇಕು ಎಂಬ ಹಠದಿಂದ ಅವರ ಕಣ್ಣಿನ ಚಿಕಿತ್ಸೆಗಳನ್ನು ಪ್ರಾರಂಭಿಕವಾಗಿ ಶಿವಾನಂದ ಸುರಕೋಡ ಅವರ ಮೇಲೆ ಉಪಯೋಗಿಸಿದೆ. ಈ ಚಿಕಿತ್ಸೆಗಳು ಮನೆತನದಲ್ಲಿ ರೂಢಿಗತವಾಗಿದ್ದರೂ, ಮತ್ತೊಮ್ಮೆ ಪರೀಕ್ಷಿಸಲು, ಅವುಗಳ ದುಷ್ಪರಿಣಾಮಗಳನ್ನು ಅರಿಯಲು ನನ್ನ ಕಣ್ಣುಗಳನ್ನೇ ಪ್ರಯೋಗಕ್ಕೆ ಒಳಪಡಿಸಿದ್ದೆ. ಅದು ಯಾವುದೇ ಕೆಟ್ಟ ಪರಿಣಾಮ ಕಣ್ಣಿನ ಮೇಲೆ ಬೀರುವುದಿಲ್ಲ ಎಂಬುದು ಖಚಿತಪಡಿಸಿಕೊಂಡು ಈ ನಾಟಿ ಕಣ್ಣಿನ ಹನಿಯ ಚಿಕಿತ್ಸೆಯನ್ನು ಶಿವಾನಂದನ ಮೇಲೆ ಪ್ರಯೋಗಿಸಿದೆ. ಮೊದಲ ಪ್ರಯತ್ನದಲ್ಲೇ ಅದ್ಭುತ ಯಶಸ್ಸು ದೊರೆಯಿತು. ದೇವರ ದಯೆ.
ಈ ಕಣ್ಣಿನ ಹನಿ ಚಿಕಿತ್ಸೆಯನ್ನು ಧಾರವಾಡದಲ್ಲಿ ಪ್ರತಿ ಗುರುವಾರ, ಮತ್ತು ಇತ್ತೀಚೆಗೆ ಗಂಗಾವತಿ ಮತ್ತು ಗುಲ್ಬರ್ಗಗಳಲ್ಲಿ ಕೂಡ ಪ್ರಾರಂಭಿಸಲಾಗಿದೆ. ಎರಡು ಕಣ್ಣು ಕಾಣಿಸದವರು ಕೂಡ ದೂರದಲ್ಲಿ ಬಲ್ಬ್ ಬೆಳಕು ನಮಗೀಗ ಕಾಣಿಸುತ್ತಿದೆ ಎನ್ನುತ್ತಿದ್ದಾರೆ. ಪೂರ್ತಿ ಕಣ್ಣು ಕಾಣಿಸುವ ತನಕ ಈ ಹನಿಯನ್ನು ಹಾಕಿಸುವುದನ್ನು ಬಿಡಬೇಡಿ ಎಂದು ಅವರಿಗೆ ನಾನು ಸಲಹೆ ನೀಡಿದ್ದೇನೆ.
ಸಾಕಷ್ಟು ಜನರಿಗೆ ಕೆಲವೇ ಸಲ ಹಾಕಿಸಿದಾಗ ತಲೆನೋವು/ಅರೆ ತಲೆನೋವು ಮಾಯವಾಗಿದೆ. ಕಣ್ಣು ಕೆಂಪಗಾಗಿರುವುದು, ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ದುರ್ಮಾಂಸ ಬೆಳೆದಿರುವುದು, ಪ್ರಾರಂಭಿಕ ಹಂತದ ಕಣ್ಣಿನ ಪೊರೆ, ಮೂಗಿನ ಸಮಸ್ಯೆಗಳು, ಜೊತೆಗೆ ಮುಟ್ಟಿನ ಸಮಸ್ಯೆಗಳು ಪರಿಹಾರವಾದ ಸಾಕಷ್ಟು ಉದಾಹರಣೆಗಳಿವೆ.
ಅಷ್ಟೇ ಅಲ್ಲ. ಇದು ಕಾಮಣಿ, ಪಿತ್ತ ಜನಕಾಂಗ (ಲಿವರ್) ಮತ್ತು ಹೊಟ್ಟೆಯ ಸಮಸ್ಯೆಗಳಿಗೂ ಅನುಕೂಲ. ಆರು ವರ್ಷದ ಮಕ್ಕಳಿಂದ ಹಿಡಿದು ನಮ್ಮ ಉಸಿರು ಇರುವವರೆಗೂ ಹಾಕಿಸಬಹುದು.
ಕಣ್ಣಿಗೆ ಪ್ರತಿದಿನ ಧೂಳು ಬೀಳುವ ಕಾರಣ ಮುಖ್ಯವಾಗಿ ಕಣ್ಣಿನ ಕಾಯಿಲೆಗಳು ಬರುತ್ತವೆ. ಅವುಗಳನ್ನು ತಡೆಯಲು ಈ ರೀತಿಯ ಚಿಕಿತ್ಸೆಗಳು ಅತಿ ಅವಶ್ಯಕ. ಅವುಗಳನ್ನು ಪಾಲಿಸಿಯೇ ನಮ್ಮ ಹಿರಿಯರಿಗೆ ನೂರು ವರ್ಷವಾದರೂ ಕಣ್ಣು ಕಾಣಿಸುತ್ತಿದ್ದವು.
ಪ್ರತಿ ತಿಂಗಳಿಗೊಮ್ಮೆ ತಪ್ಪದೇ ಹಾಕಿಸಿದಲ್ಲಿ ಕಣ್ಣು ಸ್ವಚ್ಛವಾಗಿ, ಮೇಲೆ ತಿಳಿಸಿದ ಕಾಯಿಲೆಗಳು ಸುಲಭವಾಗಿ ಅಂಟಿಕೊಳ್ಳುವುದಿಲ್ಲ. ಇದು ನಮ್ಮ ಹಿರಿಯರ ಕೊಡುಗೆ. ಆಯುರ್ವೇದ ಮತ್ತು ನಾಟಿ ಚಿಕಿತ್ಸೆಗಳು ನಮ್ಮ ದೇಶದ ಹೆಮ್ಮೆ.ಅವುಗಳನ್ನು ಪಾಲಿಸಿ-ಉಳಿಸಿ- ಬೆಳೆಸುವ ನಿಟ್ಟಿನಲ್ಲಿ ಇದು ಒಂದು ನನ್ನ ಸಣ್ಣ ಪ್ರಯತ್ನ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…