#Karnataka | ನೂತನ ಸರ್ಕಾರದ ಮೊದಲ ಪೂರ್ಣ ಅಧಿವೇಶನ ಆರಂಭ | ಗ್ಯಾರಂಟಿಗಳ ವಿರುದ್ಧ ತೊಡೆ ತಟ್ಟಲಿರುವ ವಿರೋಧ ಪಕ್ಷಗಳು

July 3, 2023
12:11 PM

ಇಂದಿನಿಂದ ವಿಧಾನಸಭೆ ಬಜೆಟ್​ ಅಧಿವೇಶನ #BudgetSession ಆರಂಭಗೊಳ್ಳಲಿದೆ. ಹಣಕಾಸು ಸಚಿವರೂ ಆದ ಸಿಎಂ ಸಿದ್ದರಾಮಯ್ಯ #Siddaramaiah ಹೊಸ ಸರ್ಕಾರದ ಮೊದಲ ಪರಿಪೂರ್ಣ ಬಜೆಟ್ ಮಂಡಿಸಲಿದ್ದಾರೆ. ವಿಪಕ್ಷಗಳೂ ಸರ್ಕಾರವನ್ನು ಕಟ್ಟಿಹಾಕಲು ಅಸ್ತ್ರ ತಯಾರು ಮಾಡಿಕೊಂಡಿವೆ. ಹೊಸ ಸರ್ಕಾರದ ಮೊದಲ ಸಂಪೂರ್ಣ ಅಧಿವೇಶನ ಇಂದಿನಿಂದ ಶುರುವಾಗುತ್ತಿದೆ. ಬರೀ ಅಧಿವೇಶನ ಅಲ್ಲ, ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಹೊಸ ಸರ್ಕಾರದ ಮೊದಲ ಪರಿಪೂರ್ಣ ಬಜೆಟ್ ಮಂಡಿಸಲಿದ್ದಾರೆ.

16ನೇ ವಿಧಾನಸಭೆಯ ಮೊದಲ ಅಧಿವೇಶನ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದೆ. ಮೊಟ್ಟ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ತಾವರ್​ಚಂದ್​ ಗೆಹ್ಲೋಟ್​​ ಭಾಷಣ ಮಾಡುತ್ತಾರೆ. ಆಮೇಲೆ ನೂತನ ಶಾಸಕರಿಗೆ ಅಭಿನಂದನೆ, ಅಗಲಿದ ಗಣ್ಯರಿಗೆ ಸಂತಾಪ ಸೂಚನೆ. ಆಮೇಲೆ ಸಣ್ಣಪುಟ್ಟ ಚರ್ಚೆ ಮುಗಿಸಿ ಕಲಾಪ ಅಂತ್ಯವಾಗಲಿದೆ.

ಇಂದಿನಿಂದ ಜುಲೈ 14ರವರೆಗೆ ಕಲಾಪ ನಡೆಯಲಿದ್ದು, 2 ದಿನ ರಜೆ, 8 ದಿನ ಅಧಿವೇಶನ ನಡೆಯಲಿದೆ. ಸಿದ್ದರಾಮಯ್ಯ ಸರ್ಕಾರವನ್ನ ಕಟ್ಟಿಹಾಕುವ ಗಂಡುಗಲಿ ಯಾರು ಎಂದು ಇನ್ನೂ ನಿರ್ಧಾರ ಆಗಿಲ್ಲ. ಸರ್ಕಾರವನ್ನ ಕಟ್ಟಿ ಹಾಕಲು ಜೆಡಿಎಸ್​, ಬಿಜೆಪಿ ಕೂಡ ಸರ್ವಸನ್ನದ್ಧವಾಗುತ್ತಿದೆ. ಜೆಡಿಎಸ್​​ ಅಂತೂ ಒಂದು ಹೆಜ್ಜೆ ಮುಂದಿಟ್ಟಿದ್ದು ಬೆಂಗಳೂರಿನ ಜೆ.ಪಿ ಭವನದಲ್ಲಿ ಶಾಸಕರ ಜೊತೆ ಸಭೆಯನ್ನೂ ನಡೆಸಿದ್ದಾರೆ.

ಇತ್ತ, ಸಿದ್ದರಾಮಯ್ಯ ಜುಲೈ 7ಕ್ಕೆ ಅಂದರೆ ಶುಕ್ರವಾರ ಬಜೆಟ್​ ಮಂಡಿಸುತ್ತಾರೆ. ಆದರೆ ಬಜೆಟ್​​ ಲೆಕ್ಕಾಚಾರ ಅಷ್ಟು ಸುಲಭವಲ್ಲ. ಏಕೆಂದರೆ ಸಿದ್ದು ಸರ್ಕಾರಕ್ಕೆ ಸವಾಲುಗಳು ಸಾಕಷ್ಟಿವೆ. 16ನೇ ವಿಧಾನಸಭೆ ಅಧಿವೇಶನದಲ್ಲಿ ಸಿದ್ದರಾಮಯ್ಯ ಮಂಡಿಸ್ತಿರುವ 14ನೇ ಬಜೆಟ್ ಇದಾಗಿದ್ದು, ಮೊದಲು ಕೊಟ್ಟಿರುವ ಐದು ಗ್ಯಾರಂಟಿಗಳನ್ನ ಅನುಷ್ಠಾನಕ್ಕೆ ತರ್ಬೇಕಾದ ಅನಿವಾರ್ಯತೆ ಇದೆ.

ಪ್ರಣಾಳಿಕೆಯಲ್ಲಿ ಕೊಟ್ಟಿರುವ ನೂರಾರು ಘೋಷಣೆಗಳನ್ನೂ ಈಡೇರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಮಳೆ ಕೊರತೆಯಿಂದ ಬಿತ್ತನೆ ಇಲ್ಲದೇ ರೈತರು ಕಂಗಾಲಾಗಿದ್ದರೆ, ಬರದ ಭಯ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಒಟ್ಟಾರೆ ರೈತರ ಕಷ್ಟಕ್ಕೆ ಸ್ಪಂಧಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ನಡುವೆ ಬೆಲೆ ಏರಿಸಿದರೆ ಉದ್ಯಮಿಗಳು, ಜನ ತಿರುಗಿಬೀಳುವ ಭಯ ಹಾಗಾಗಿ ಸರಿದೂಗಿಸಬೇಕಾದ ಜವಾಬ್ದಾರಿ ಸಿಎಂ ಅವರ ಹೆಗಲ ಮೇಲಿದೆ.
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ
January 10, 2026
10:35 PM
by: ರೂರಲ್‌ ಮಿರರ್ ಸುದ್ದಿಜಾಲ
ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..
January 10, 2026
10:33 PM
by: ರೂರಲ್‌ ಮಿರರ್ ಸುದ್ದಿಜಾಲ
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ | 2026 ಮಾರ್ಚ್ ವರೆಗೆ ಅವಕಾಶ
January 10, 2026
10:30 PM
by: ರೂರಲ್‌ ಮಿರರ್ ಸುದ್ದಿಜಾಲ
ಸ್ವಾವಲಂಬಿ ಸಾರಥಿ ಯೋಜನೆ | ಆಟೋ ಗೂಡ್ಸ್ ವಾಹನ ಖರೀದಿಗೆ ರೂ.4 ಲಕ್ಷ ಸಹಾಯಧನ
January 10, 2026
10:28 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror