Opinion

ಕಾಮಾಲೆಯಲ್ಲಿ ಸಹಾಯಕ ಚಿಕಿತ್ಸೆಯಾಗಿ ಈ ಕೆಳಗಿನ ಮನೆಮದ್ದುಗಳನ್ನು ಬಳಸಬಹುದು |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಾಮಾಲೆ(Jaundice) ಒಂದು ರೀತಿಯಲ್ಲಿ ಸಾಮಾನ್ಯ ಕಾಯಿಲೆಯಾಗಿದ್ದರು ಕೆಲವು ಸಂದರ್ಭಗಳಲ್ಲಿ ಮಾರಕವಾಗಬಹುದು. ಕಾಮಾಲೆಯಲ್ಲಿ ವಿವಿಧ ಪ್ರಕಾರಗಳಿವೆ. ಆದರೆ ಇಲ್ಲಿ ನಾವು ಯಾವುದೇ ರೀತಿಯ ಕಾಮಾಲೆಗೆ ಮನೆಮದ್ದುಗಳನ್ನು(Home Remedies) ತಿಳಿಸಿದ್ದೇವೆ. ಕಲುಷಿತ ಆಹಾರ ಸೇವನೆ ಮತ್ತು ಕಲುಷಿತ ನೀರು(contaminated water) ಸೇವನೆಯಿಂದ ಈ ರೋಗ ಬರುತ್ತದೆ. ಹೆಚ್ಚು ಎಣ್ಣೆಯುಕ್ತ ಆಹಾರ ಹಾಗೂ ಹಳಸಿದ ಆಹಾರ(stale food) ಸೇವನೆಯಿಂದ ಈ ರೋಗ ಬರುತ್ತದೆ. ಈ ರೋಗದಲ್ಲಿ, ರೋಗಿಯ ದೇಹದಲ್ಲಿ ರಕ್ತದ ನಷ್ಟವಾಗುತ್ತದೆ.

Advertisement

ದೇಹದಲ್ಲಿ ರಕ್ತದ ರಕ್ತದ ವಿಘಟನೆಯಾಗಿ ಇದರಿಂದ ಉತ್ಪತ್ತಿಯಾಗುವ ಹಳದಿ ಬಣ್ಣದ ಪದಾರ್ಥದಿಂದಾಗಿ ರೋಗಿಯ ಇಡೀ ದೇಹವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಈ ರೋಗದಲ್ಲಿ, ರೋಗಿಯ ಕಣ್ಣುಗಳು ಮತ್ತು ಮೂತ್ರವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ರೋಗದಲ್ಲಿ, ರಕ್ತದಲ್ಲಿ ವಿಷಕಾರಿ ದ್ರವಗಳ ಮಿಶ್ರಣದಿಂದಾಗಿ ಅನೇಕ ರೀತಿಯ ರೋಗಗಳು ಸಂಭವಿಸಬಹುದು. ಇದು ಯಕೃತ್ತಿನ ಊತ ಮತ್ತು ಹಸಿವಿನ ನಷ್ಟವನ್ನು ಉಂಟುಮಾಡುತ್ತದೆ.

ಹಿಂದಿಯಲ್ಲಿ ಪಿಲಿಯಾ ಎಂದು ಕರೆಯಲ್ಪಡುವ ಜಾಂಡೀಸ್ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಕಾಮಾಲೆ ಒಂದು ಸರಳ ಕಾಯಿಲೆಯಂತೆ ತೋರುತ್ತದೆ ಆದರೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಭೀಕರ ರೂಪವನ್ನು ಪಡೆಯಬಹುದು ಮತ್ತು ಮುತ್ತು ರೋಗಿಯು ಸಾವಿಗಿಡಾಗಬಹುದು. ಇಂದು ನಾವು ನಿಮಗೆ ಕಮಲಿಯಲ್ಲಿ ಚಿಕಿತ್ಸೆಯೊಂದಿಗೆ ಬಳಸಬಹುದಾದ ಮನೆ ಮದ್ದುಗಳ ಬಗ್ಗೆ ತಿಳಿಸಲಿದ್ದೇವೆ. ನಿಮ್ಮ ಕಾಮಾಲೆಯನ್ನು ಗುಣಪಡಿಸಲು ಇದು ಸಹಾಯಕವಾಗುತ್ತದೆ.

ಹೆಪಟೈಟಿಸ್ A, B, ಅಥವಾ C ಅಥವಾ ಅಧಿಕ ಬಿಲಿರುಬಿನ್, ESR ನಿಂದ ಉಂಟಾಗುವ ಕಾಮಾಲೆಗೆ ಈ ಮನೆಮದ್ದುಗಳು ಪ್ರಯೋಜನಕಾರಿಯಾಗಿವೆ. ಕಾಮಾಲೆಯನ್ನು ಹೋಗಲಾಡಿಸಲು ಸರಳ ಮನೆಮದ್ದುಗಳು

ಎಳನೀರು : ದಿನಕ್ಕೆ ಕನಿಷ್ಠ 2 ತೆಂಗಿನಕಾಯಿ ನೀರನ್ನು ಕುಡಿಯಿರಿ, ಈ ತೆಂಗಿನಕಾಯಿ ನೀರನ್ನು ತಾಜಾ ಇರುವಾಗಲೇ ಸೇವಿಸಬೇಕು, ಅಂದರೆ ಅದನ್ನು ಒಡೆದ ತಕ್ಷಣ. ಇದನ್ನು 3-5 ದಿನಗಳ ಕಾಲ ಮಾಡಿದ ನಂತರ ನೀವು ಆರೋಗ್ಯವಾಗಿರುತ್ತೀರಿ. ಕೆಲವು ದಿನ ತೆಂಗಿನ ನೀರನ್ನು ಮಾತ್ರ ಮುಂದುವರಿಸಬೇಕು. ಈ ಪರಿಹಾರವು ಅನೇಕ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಸಾಬೀತಾಗಿದೆ. ಪಿತ್ತಜನಕಾಂಗದಲ್ಲಿ ಉಂಟಾಗುವ ಯಾವುದೇ ಕಾಯಿಲೆಗೆ ಹಿಂಜರಿಕೆಯಿಲ್ಲದೆ ಈ ಪ್ರಯೋಗವನ್ನು ಮಾಡಬಹುದು.

ಈರುಳ್ಳಿ: ಜಾಂಡೀಸ್ ಚಿಕಿತ್ಸೆಯಲ್ಲಿ ಈರುಳ್ಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಮೊದಲನೆಯದಾಗಿ, ಈರುಳ್ಳಿಯನ್ನು ಸಿಪ್ಪೆ ಸುಲಿದು ತೆಳುವಾದ ಹೋಳುಗಳಾಗಿ ಕತ್ತರಿಸಿ ಅದರಲ್ಲಿ ನಿಂಬೆ ಹಿಂಡಿ, ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ಕಪ್ಪು ಉಪ್ಪನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸೇವಿಸುವುದರಿಂದ ಕಾಮಾಲೆ ಆದಷ್ಟು ಬೇಗ ಗುಣವಾಗುತ್ತದೆ.

ಕಡಲೆ ಬೇಳೆ: ರಾತ್ರಿ ಮಲಗುವ ಮುನ್ನ ಕಡಲೆಯನ್ನು ನೆನೆಸಿಡಿ. ಬೆಳಿಗ್ಗೆ ಎದ್ದ ಮೇಲೆ ನೆನೆಸಿದ ಬೇಳೆಯನ್ನು ನೀರಿನಿಂದ ಹೊರತೆಗೆದು ಅದರಲ್ಲಿ ಸ್ವಲ್ಪ ಬೆಲ್ಲವನ್ನು ಮಿಶ್ರಣ ಮಾಡಿ ಸೇವಿಸಿ. ಈ ಪರಿಹಾರವನ್ನು ಪ್ರತಿದಿನ ಒಂದರಿಂದ ಎರಡು ವಾರಗಳವರೆಗೆ ಮಾಡುವುದರಿಂದ ಕಾಮಾಲೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಶುಂಠಿ: ಶುಂಠಿಯನ್ನು ಬಳಸಿಕೊಂಡು ಕಾಮಾಲೆಗೆ ಚಿಕಿತ್ಸೆ ನೀಡಬಹುದು. ಇದಕ್ಕೆ 10 ಗ್ರಾಂ ಶುಂಠಿ, 10 ಗ್ರಾಂ ಬೆಲ್ಲ ತೆಗೆದುಕೊಳ್ಳಿ. ಈ ಪದಾರ್ಥಗಳನ್ನು ಬೆರೆಸಿ ಬೆಳಿಗ್ಗೆ ತಣ್ಣೀರಿನ ಜೊತೆಗೆ ಸೇವಿಸುವುದರಿಂದ ಕಾಮಾಲೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ: ಕಾಮಾಲೆಯಲ್ಲಿ ಬೆಳ್ಳುಳ್ಳಿ ಕೂಡ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಕನಿಷ್ಠ 4 ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಸಿಪ್ಪೆ ಸುಲಿದು ನುಣ್ಣಗೆ ರುಬ್ಬಿ 200 ಗ್ರಾಂ ಹಾಲು ಸೇರಿಸಿ. ರೋಗಿಯು ಇದನ್ನು ಪ್ರತಿದಿನ ತಿನ್ನುವುದರಿಂದ ಕಾಮಾಲೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ.

ಹುಣಸೆಹಣ್ಣು: ಹುಣಸೆಹಣ್ಣನ್ನು ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿಡಬೇಕು. ಬೆಳಿಗ್ಗೆ ನೀರಿನಲ್ಲಿ ಹುಣಸೆಹಣ್ಣನ್ನು ಚೆನ್ನಾಗಿ ಹಿಂಡಿ ಮತ್ತು ಈ ನೀರಿನಲ್ಲಿ ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ಕಪ್ಪು ಉಪ್ಪನ್ನು ಬೆರೆಸಿ ಕುಡಿಯಬೇಕು. ಇದನ್ನು ಎರಡು ವಾರಗಳ ಕಾಲ ಕುಡಿಯುವುದರಿಂದ ಜಾಂಡೀಸ್ ಗುಣವಾಗುತ್ತದೆ.

ಜೇನುತುಪ್ಪ ಮತ್ತು ನೆಲ್ಲಿಕಾಯಿ ರಸ: ಒಂದು ಟೀ ಚಮಚ ಜೇನುತುಪ್ಪವನ್ನು 50 ಗ್ರಾಂ ತಾಜಾ ಹಸಿರು ಆಮ್ಲಾ ರಸದೊಂದಿಗೆ ಬೆರೆಸಿ ಮತ್ತು ಪ್ರತಿದಿನ ಬೆಳಿಗ್ಗೆ ಕನಿಷ್ಠ ಮೂರು ವಾರಗಳವರೆಗೆ ಕುಡಿಯುವುದು ಕಾಮಾಲೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Jaundice is a common disease that can be fatal in some cases. There are different types of jaundice. But here we have mentioned home remedies for any type of Jaundice. This disease comes from consumption of contaminated food and contaminated water. This disease comes from eating too much oily food and stale food. In this disease, there is loss of blood in the patient’s body.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

7 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

8 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

17 hours ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

17 hours ago

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |

ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…

20 hours ago

ಹೊಸರುಚಿ| ಗುಜ್ಜೆ ರೋಲ್

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…

20 hours ago