Opinion

ಅಯೋಧ್ಯೆಯ ರಾಮನ ವಿಗ್ರಹ ರಾಮನ ವಿಗ್ರಹ ತಯಾರಿಸಲು ಯೋಗ್ಯವಾದ ಕಲ್ಲು ಬಂಡೆ ಸಿಕ್ಕ ಸ್ಥಳದ ಮಹಿಮೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮೈಸೂರು(Mysore) ತಾಲೂಕಿನ ಹಾರೋಹಳ್ಳಿ-ಗುಜ್ಜೇಗೌಡನಪುರ ಇಲ್ಲಿ  ಶ್ರೀ ರವಿ ಎನ್ನುವ ಒಬ್ಬ ರೈತ ಕುಟುಂಬ(farmer family) ವ್ಯವಸಾಯ(agriculture) ಮಾಡಿಕೊಂಡಿತ್ತು, ಅವರದೇ ಜಮೀನಿನ(field) ಮಧ್ಯದಲ್ಲಿ ಬಹಳಷ್ಟು ಹಿಂದಿನಿಂದಲೂ ಒಂದು ಬೃಹತ್ ಗಾತ್ರದ ಬಂಡೆ ಇದ್ದು ಅದು ಈ ರವಿ ಅವರ ವ್ಯವಸಾಯಕ್ಕೆ ಅಡ್ಡಗಾಲಾಗಿ ಪರಿಣಮಿಸಿ ಅವರಿಗೆ ಕೋಪ(Angry), ಬೇಸರ ತರಿಸಿತ್ತು, ಯಾವಾಗಲೂ ರವಿ ಅವರು ಏಕಾದರೋ ಈ ಬಂಡೆ(Rock) ನಮಗೆ ಶಾಪವಾಗಿ ಪರಿಣಮಿಸಿ, ನಮ್ಮ ಜಮೀನಿನಲ್ಲೇ ಠಿಕಾಣಿ ಹೂಡಿ, ನಮ್ಮ ವ್ಯವಸಾಯಕ್ಕೆ ಅನಾನುಕೂಲವಾಗಿದೆ ಎಂದು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದರು.

Advertisement

ಒಮ್ಮೆ ಅವರು, ತಮ್ಮ ಸ್ನೇಹಿತ, ಕಲ್ಲು ತೆಗೆಯುವ ಶ್ರೀನಿವಾಸ್ ಎಂಬುವವರಿಗೆ ಹೇಳಿದರು, ಹೇಗಾದರೂ ಮಾಡಿ ಈ ಬಂಡೆಯನ್ನು ಈ ಜಮೀನಿನ ಮಧ್ಯದಿಂದ ತೆಗೆದು ಹೊರಕ್ಕೆ ಸಾಗಿಸಿಕೊಡು, ನಂತರ ಜಮೀನನ್ನು ಸಮತಟ್ಟು ಮಾಡಿ ಇಲ್ಲಿ ಉಳುಮೆ ಮಾಡಿ, ಏನಾದರೂ ಬೆಳೆ ಬೆಳೆಯುವೆವು, ಎಂದು, ಅವರ ಅಣತಿಯಂತೆ ಶ್ರೀನಿವಾಸ್ ಅವರು ಈ ಬಂಡೆಯನ್ನು ಜಮೀನಿನಿಂದ ತೆಗೆದು ಹೊರಗೆ ಸಾಗಿಸಲು ಕಾರ್ಯಪ್ರವರ್ತರಾದರು, ಹೀಗೆ ಆ ಬಂಡೆ ಅವರೆಣಿಸಿದಂತೆ ಇರದೆ ಮತ್ತಷ್ಟು ಬೃಹತ್ತಾದ ಬಂಡೆಯಾಗಿತ್ತು, ಸರಿ, ಶ್ರೀನಿವಾಸ್ ಅವರು ಜಮೀನಿನ ಉಳುಮೆಗೆ ಎಷ್ಟು ಬೇಕೋ ಅಷ್ಟು ಕಲ್ಲನ್ನು ಮೂರು ಭಾಗಗಳಾಗಿ ಹೊಡೆದು ಹೊರಕ್ಕೆ ತೆಗೆದು ಆ ಜಮೀನಿನ ಪಕ್ಕದಲ್ಲಿ ಇಟ್ಟು ಜಾಗವನ್ನು ಸಮತಟ್ಟು ಮಾಡಿಕೊಟ್ಟರು.

ರವಿ ಅವರು ಶ್ರೀನಿವಾಸ್ ಅವರಿಗೆ ಒಮ್ಮೆ ಹೇಳಿದ್ದರು, ಈ ಬಂಡೆ ಯಾರಿಗಾದರೂ ಶಿಲೆ ಕೆತ್ತುವವರಿಗೆ ಕೊಟ್ಟುಬಿಡಿ, ಎಂದಿದ್ದರಂತೆ, ಅದರಂತೆ ಶ್ರೀನಿವಾಸ್ ಅವರು ತಮ್ಮ ಸ್ನೇಹಿತರಾದ ಅಯೋಧ್ಯೆಯಲ್ಲಿ ಕಲ್ಲಿನಲ್ಲಿ ಶಿಲೆ ಕೆತ್ತುವ ಶ್ರೀ ಮಾನಯ್ಯ ಬಡಿಗಾರ್ ಎಂಬುವವರಿಗೆ ಹೇಳಿದ್ದರು, ಅದರಂತೆ ಒಮ್ಮೆ ಮಾನಯ್ಯ ಬಡಿಗಾರ್ ಅವರು ತಮ್ಮ ತಂಡದೊಂದಿಗೆ ಒಮ್ಮೆ ರವಿ ಅವರ ಜಮೀನು……ಮೈಸೂರು/ಹೆಗ್ಗಡದೇವನಕೋಟೆ ತಾಲೂಕಿನ ಹಾರೋಹಳ್ಳಿ -ಗುಜ್ಜೇಗೌಡನಪುರಕ್ಕೆ ಬಂದು ಆ ಬಂಡೆಯನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು, ಈ ಶಿಲೆ , ವಿಗ್ರಹಗಳನ್ನು ಕೆತ್ತಲು ತುಂಬಾ ಪ್ರಾಶಸ್ತ್ಯ ವಾದ ಕೃಷ್ಣ ಶಿಲೆ ಅಥವಾ ಕಪ್ಪು ಶಿಲೆ…….ಇದು ಎಂದು ಉದ್ಗಾರ ತೆಗೆದು, ತುಂಬಾ ಖುಷಿಪಟ್ಟ ಅವರು ಹಾಗೂ ಅವರ ತಂಡ, ಒಮ್ಮೆ ಈ ಬಂಡೆಯ ಒಂದು ತುಣುಕನ್ನು ಹೇಗಾದರೂ ಮಾಡಿ ವೈಜ್ಞಾನಿಕವಾಗಿ ಪರಿಶೀಲನೆ ಒಳಪಡಿಸಲು ತೀರ್ಮಾನಿಸಿ, ಅದರಂತೆ ಇದರ ಒಂದು ತುಣುಕನ್ನು ಕೋಲಾರದಲ್ಲಿ ಇರುವ ಸರ್ಕಾರಿ ಸ್ವಾಮ್ಯದ IIRMD ಅಂದರೆ Indian Institute of Rock Management Dept. ಗೆ ಕಳುಹಿಸಿಕೊಟ್ಟು, ಅದರ mica ಗುಣ, ಅಂದರೆ…..ಈ ಬಂಡೆಯನ್ನು ವಿಗ್ರಹವನ್ನು ಆಗಿ ಪರಿವರ್ತಿಸಿದ ನಂತರ ಈ ವಿಗ್ರಹ ಯಾವುದೇ ಹವಾಮಾನಕ್ಕೆ ಹಾಗೂ ಈ ವಿಗ್ರಹದ ಮೇಲೆ ಅಭಿಷೇಕ ಮಾಡುವ ನಾನಾ ರೀತಿಯ ವಸ್ತುಗಳು, ರಾಸಾಯನಿಕ ವಸ್ತುಗಳಿಂದ ಯಾವ ರೀತಿ ಬದಲಾವಣೆ ಆಗುವುದು, ಎಂಬುದಾಗಿ ಕಂಡುಹಿಡಿಯುವಂತೆ ಕೇಳಿಕೊಂಡರು ಅವರ ಕೋರಿಕೆಯಂತೆ ಆ IIRMD ಯವರು ನೀಡಿದ ವರದಿಯಂತೆ ಈ ಬಂಡೆಯಲ್ಲಿ ವಿಗ್ರಹಗಳನ್ನು ತಯಾರು ಮಾಡಲು ತುಂಬಾ ಯೋಗ್ಯವಾಗಿದೆ ಎಂಬ ವರದಿ ಬಂದಿತು, ಅದರಂತೆ ಖುಷಿಯಿಂದ ಈ ಬಂಡೆಗಳನ್ನು ಕೂಡಲೇ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿರುವ ಭಾರತದ ಪವಿತ್ರ ಹಿಂದೂಗಳ ನೂರಾರು ವರ್ಷಗಳ ಕನಸಿನ ಮಾತಾದ ಶ್ರೀರಾಮ ಮಂದಿರದ ಶ್ರೀರಾಮಲಲ್ಲಾನ, ಸೀತಾಮಾತೆಯ ವಿಗ್ರಹವನ್ನು ತಯಾರು ಮಾಡಲು ಕೊಂಡೊಯ್ದರು.

ನಂತರ ಮತ್ತಷ್ಟು ದಿನಗಳು ಕಳೆದು ಮತ್ತೆ ಬಂದ ಮಾನಯ್ಯ ಬಡಿಗಾರ್ ಅವರ ತಂಡ, ಉಳಿದ ಬಂಡೆಗಳನ್ನೂ ತೆಗೆದುಕೊಂಡು ಹೊರಟರು, ಇವುಗಳು ಲಕ್ಷ್ಮಣ, ಭರತ …..ಇವರ ಮೂರ್ತಿಗಳನ್ನು ತಯಾರು ಮಾಡಲು.

ಹೀಗೆ ಅಯೋಧ್ಯೆಗೆ ಹೊರಟ, ಮೈಸೂರು/ಹೆಗ್ಗಡದೇವನಕೋಟೆ ತಾಲೂಕಿನ ಹಾರೋಹಳ್ಳಿ-ಗುಜ್ಜೇಗೌಡನಪುರದ ಶ್ರೀ ರವಿ ಅವರ ಜಮೀನಿನಲ್ಲಿ ಅನಾಥವಾಗಿ ಬಿದ್ದು, ಜಮೀನಿನ ಮಾಲೀಕರ ಕೋಪಕ್ಕೆ ಗುರಿಯಾಗಿ, ಉಳುಮೆಗೆ ಅಡ್ಡಿಪಡಿಸುತ್ತಾ, ಸಹಸ್ರಾರು ವರ್ಷಗಳಿಂದಲೂ ಅನಾಥವಾಗಿ ಬಿದ್ದಿದ್ದ ಕೃಷ್ಣ ಶಿಲೆ ಅಥವಾ ಕಪ್ಪು ಬಣ್ಣದ ಶಿಲೆಗಳಲ್ಲಿ ಶ್ರೀ ರಾಮನ, ಸೀತಾಮಾತೆಯ, ಲಕ್ಷ್ಮಣ, ಭರತ, ಶತೃಜ್ಞ ಇವರ ದೈವೀಶಕ್ತಿ ಅಡಗಿತ್ತು ಎಂಬುದು ಯಾರಿಗೂ ಊಹಿಸಲೂ ಅಸಾಧ್ಯವಾಗಿತ್ತು, ಇಂದು, ಇಡೀ ವಿಶ್ವವೇ, ಭಾರತ ದೇಶದ ಕಡೆ ನೋಡುತ್ತಿರುವ , ಹಿಂದೂಗಳ ನೂರಾರು ವರ್ಷಗಳ ಕನಸು ನನಸಾಗುವ, ಸರಯೂ ನದಿಯ ತಟದಲ್ಲಿರುವ ಭವ್ಯ ಅಯೋಧ್ಯೆಯ ಶ್ರೀ ರಾಮ ಮಂದಿರದ ಮುಖ್ಯ ಪೂಜಾ ವಿಗ್ರಹಗಳಾಗಿ ಪ್ರತಿಷ್ಠಪನೆಗೊಳ್ಳುತ್ತಿರುವ ಈ ಕಲ್ಲುಬಂಡೆಗಳಿಗೆ ಇದು ಜೀವ ಬಂದಿದೆ, ದೈವೀಕಳೆ ಬಂದಿದೆ.

ಒಂದು ಆಶ್ಚರ್ಯಕರ ಸಂಗತಿ ಎಂದರೆ…….ಈ ಬಂಡೆಗಳಲ್ಲಿ ಶ್ರೀರಾಮನ ಮುಖ್ಯ ವಿಗ್ರಹ ಕೆತ್ತಿರುವ ಶಿಲ್ಪಿಯು ಕೂಡ ನಮ್ಮ ಮೈಸೂರಿನ ಹೆಮ್ಮೆಯ  ಅರುಣ್ ಯೋಗಿ…….ಅವರೇ ಕೆತ್ತಿರುವ ಶ್ರೀ ರಾಮಲಲ್ಲಾನ ವಿಗ್ರಹ ಅಯೋಧ್ಯೆಯಲ್ಲಿ ಪ್ರತಿಷ್ಠಪನೆಗೊಳ್ಳುತ್ತಿರುವುದು ಕರ್ನಾಟಕದ ಪ್ರತಿಯೊಬ್ಬ ಹಿಂದೂಗಳು ಹೆಮ್ಮೆ ಪಡುವಂತಹ ವಿಚಾರವಾಗಿದೆ.

ಎಲ್ಲಿಯ ಉತ್ತರ ಪ್ರದೇಶ, ಎಲ್ಲಿಯ ಅಯೋಧ್ಯೆ, ಎಲ್ಲಿಯ ರಾಮ ಮಂದಿರ, ಎಲ್ಲಿಯ ಶ್ರೀರಾಮ.. ಮತ್ತೆ ಎಲ್ಲಿಯ ಮೈಸೂರು,
ಹಾರೋಹಳ್ಳಿ -ಗುಜ್ಜೇಗೌಡನಪುರ, ಎಲ್ಲಿಯ ಅನಾಥ ಬಂಡೆಗಲ್ಲುಗಳು, ಎಲ್ಲವೂ ವಿಧಿಯ ಲಿಖಿತ,

ಒಂದು ಸುಸಮಯ, ಸುಲಗ್ನ ಕೂಡಿಬಂದರೆ…….ಕಲ್ಲೂ ಕೂಡ ಕರಗುತ್ತದೆ ಎಂಬ ನಾಣ್ಣುಡಿಯಂತೆ ಎಲ್ಲವೂ ಸರಾಗವಾಗಿ ದಾರಿ ಸುಗಮವಾಗುವುದು ಎಂಬುದಕ್ಕೆ ಹಾರೋಹಳ್ಳಿ -ಗುಜ್ಜೇಗೌಡನಪುರದ ರವಿ ಅವರ ಜಮೀನಿನ, ಕಲ್ಲು ಬಂಡೆಗಳ ಕಥೆಯೇ ಉದಾಹರಣೆ, ಇನ್ನು ಸಾವಿರ ವರುಷಗಳು ಉರುಳಿದರೂ ಈ ಕಥಾಗಾಥೆ ಜನಮನದಲ್ಲಿ ದಂತಕಥೆಗಳಾಗಿ ನಲಿದಾಡುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ, ಬರಡು ಭೂಮಿ ಆಗಿದ್ದ, ಒಂದು ಹುಲ್ಲಿನ ಕಣವೂ ಬೆಳೆಯಲು ಯೋಗ್ಯವಾಗಿರದ ಭೂಮಿ, ಬಂಡೆ ಇಂದು ಈ ಪವಿತ್ರ ಸ್ಥಳ ಪೂಜನೀಯವಾಗಿ, ಸಕಲ ಆಸ್ತಿಕರೂ ಇಲ್ಲಿ ಬಂದು ಪೂಜೆ ಮಾಡುತ್ತಾ, ಈ ಸ್ಥಳವನ್ನು ಒಂದು ಪವಿತ್ರ ಯಾತ್ರಾಸ್ಥಳವನ್ನಾಗಿಸಿದ್ದಾರೆ.

ಬರಹ :
ರಾಜೇಂದ್ರ ಕುಮಾರ್ ಗುಬ್ಬಿ.
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಸ್ತೆ ಸರಕು ಸಾಗಾಣೆಯಲ್ಲೂ ತೀವ್ರ ಏರಿಕೆ  |  ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ

ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶಾದ್ಯಂತ 1 ಸಾವಿರದ 600 ಚಾಲಕ ತರಬೇತಿ ಕೇಂದ್ರಗಳನ್ನು…

1 hour ago

ಹವಾಮಾನ ವರದಿ | 04-04-2025 | ಇಂದು ಕೆಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಎ.7 ರಿಂದ ಮಳೆ ಕಡಿಮೆಯಾಗುವ ಲಕ್ಷಣ |

ಇಂದು ಕೆಲವು ಕಡೆ ಗುಡುಗು ಸಹಿತ ಮಳೆಯ ಲಕ್ಷಣವಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ…

2 hours ago

ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ

ಕೃಷಿಕ ಯಶಸ್ವಿಯಾಗಬೇಕಾದರೆ , ಕೃಷಿ ಬೆಳೆಯಬೇಕಾದರೆ,ಉಳಿಯಬೇಕಾದರೆ ತಿಂಗಳಿಗೆ ಒಂದಷ್ಟು ಆದಾಯ ಸಿಗಲೇಬೇಕು. ಮುಖ್ಯ…

8 hours ago

ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧಕ್ಕೆ ಮನವಿ

ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದೆಂದು ಸಂಸತ್ ಸದಸ್ಯ ತೇಜಸ್ವಿ…

8 hours ago

ಪಂಚಗ್ರಹಿ ಯೋಗ ಎಂದರೇನು..? | ಈ ಯೋಗವು ಮಹತ್ವದ್ದಾಗಿದೆ ಏಕೆ.. ?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

8 hours ago

ಕೃಷಿ ಸಖಿಯರ ಪ್ರಥಮ ಪ್ರಗತಿ ಪರಿಶೀಲನಾ ಸಭೆ | ವಿವಿಧ ತರಕಾರಿ ಬೀಜಗಳ ವಿತರಣೆ | ತರಕಾರಿ ಬೆಳೆಸುವ ವಿಧಾನಗಳ ಬಗ್ಗೆ ಮಾಹಿತಿ |

ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ…

15 hours ago