ಆಯುಧ ಪೂಜೆಯ ಹಿನ್ನೆಲೆಯಲ್ಲಿ ಹೂವು, ಹಣ್ಣು ಮತ್ತಿತರ ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ ನಡೆದಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಆಯುಧ ಪೂಜೆಯು ಸಡಗರದಿಂದ ನಡೆಯುತ್ತದೆ. ನಗರ ಪ್ರದೇಶಗಳಲ್ಲಿ ಹೂವು ಸೇರಿದಂತೆ ಎಲ್ಲವೂ ದುಬಾರಿಯಾದರೆ ಗ್ರಾಮೀಣ ಭಾಗದಲ್ಲಿ ಸಾಮೂಹಿಕವಾದ ಆಚರಣೆಗಳು ನಡೆಯುತ್ತದೆ.
ಆಯುಧ ಪೂಜೆ ಹಾಗೂ ವಿಜಯದಶಮಿ ಆಚರಣೆ ನಡೆಸಲು ಬೆಂಗಳೂರಿನ ಕೆ ಆರ್ ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ವಿಜಯನಗರ, ಗಾಂಧಿಬಜಾರ್, ಜಯನಗರದಲ್ಲಿ ವ್ಯಾಪಾರ ವಹಿವಾಟು ಬಹಳ ಜೋರಾಗಿದೆ. ಹೂವು, ಹಣ್ಣು, ತರಕಾರಿ, ಬೂದುಗುಂಬಳ, ಬೆಲೆ ಬಹಳ ಹೆಚ್ಚಾಗಿದ್ದು ಜನರು ಅನಿವಾರ್ಯವಾಗಿ ಹೇಳಿದಷ್ಟು ಹಣ ನೀಡಿ ಕೊಂಡುಕೊಳ್ಳುತ್ತಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಹೂವಿನ ದರ ಏರಿಕೆಯಾಗಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವು ಕೆ.ಜಿ.ಗೆ 150-300 ರೂ. ಚೆಂಡುಹೂವು ಕೆಜಿಗೆ 80 ರಿಂದ 120 ರೂ. ಕನಕಾಂಬರ 700 ರೂ. ಕಾಕಡ 700, ಮಲ್ಲಿಗೆ ಮೊಗ್ಗು 600 ರೂ. ಸುಗಂಧರಾಜ ಕೆಜಿ 500 ರೂಪಾಯಿಗೆ ತಲುಪಿದೆ. ಕಡ್ಲೆಪುರಿ ಲೀಟರ್ ಗೆ, 30/40 ರೂಪಾಯಿ , ಬಾಳೆಕಂಬ 100 ರೂಪಾಯಿ, ಮಾವಿನ ತೋರಣ 30 ರೂಪಾಯಿ, ವೀಳ್ಯದೆಲೆ 100 ರೂಪಾಯಿ, ಗರಿಕೆ ಕಟ್ಟು 30 ರುಪಾಯಿಗೆ ವ್ಯಾಪಾರ ನಡೆದಿದೆ.
ಮುಂದಿನ ಎರಡು ಮೂರು ದಿನಗಳಲ್ಲಿ ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ…
ವಿಧಾತ್ರಿ ಎಂ, 6 ನೇ ತರಗತಿ, ರೋಟರಿ ಮಿಡ್ಟೌನ್ ಶಾಲೆ, ಮೈಸೂರು | …
ನೈನಿಕಾ.ಬಿ.ಸಿ , 4ನೇ ತರಗತಿ , ಸೈಂಟ್ ಆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ,…
ನಯೋನಿಕಾ.ಬಿ.ಸಿ., 4 ನೇ ತರಗತಿ, ಸೈಂಟ್ ಆನ್ಸ್ ಶಾಲೆ ಕಡಬ | -…
ನಿಪಾ ವೈರಸ್ ಹರಡುವಿಕೆಯ ವಿರುದ್ಧ ರಾಜ್ಯವು ತನ್ನ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಿದೆ ಎಂದು…
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು…