Advertisement
MIRROR FOCUS

ಅರೇಬಿಕಾ ದರವನ್ನೂ ಹಿಂದಿಕ್ಕಿ ಏರಿದ ರೊಬಸ್ಟಾ ಕಾಫಿ ಬೆಲೆ | ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಬರೆದ ಕರುನಾಡ ಕಾಫಿ |

Share

ಜಾಗತಿಕ(Global) ಕೊರತೆಯ ಕಾರಣದಿಂದಾಗಿ ರೊಬಸ್ಟಾ ಕಾಫಿ(Robasta coffee) ದರವು ಇದೇ ಮೊದಲ ಬಾರಿಗೆ ಅರೇಬಿಕಾ ಕಾಫೀ ದರವನ್ನೂ ಹಿಂದಿಕ್ಕಿ ಸರ್ವಕಾಲಿಕ ಗರಿಷ್ಠ ದರ ದಾಖಲಿಸಿದೆ. ಸೋಮವಾರ ವಯನಾಡ್ ಮಾರುಕಟ್ಟೆಯಲ್ಲಿ ರೋಬಸ್ಟಾ ಕಾಫಿ ಹಣ್ಣುಗಳ ಫಾರ್ಮ್ ಗೇಟ್ ಬೆಲೆ ಪ್ರತಿ ಕಿಲೋಗ್ರಾಂಗೆ ದಾಖಲೆಯ ರೂ.172 ಅನ್ನು ಮುಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೆಜಿಗೆ ರೂ.115 ಇತ್ತು. ಇದೇ ಸಮಯದಲ್ಲಿ ರೋಬಸ್ಟಾ ಪಾರ್ಚ್ ಮೆಂಟ್ ಕಾಫಿ ಬೀಜಗಳ ಸ್ಪಾಟ್ ಬೆಲೆಯು ಕೆಜಿಗೆ ರೂ.315 ಕ್ಕೆ ಸರ್ವಕಾಲಿಕ ಏರಿಕೆ ದಾಖಲಿಸಿದೆ.

Advertisement
Advertisement

2023 ರ ಇದೇ ಅವಧಿಯಲ್ಲಿ ದರ ಕಿಲೋಗೆ 220 ರೂಪಾಯಿಗಳಷ್ಟಿತ್ತು. ಮಾರ್ಚ್ 2022 ರಲ್ಲಿ ಕಚ್ಚಾ ಹಣ್ಣುಗಳು ಮತ್ತು ಪಾರ್ಚ್ ಮೆಂಟ್ ಗೆ ದರ ಕ್ರಮವಾಗಿ ರೂ. 80 ಮತ್ತು ರೂ. 145 ರಷ್ಟಿತ್ತು. ಕೊಡಗಿನ ಮಾರುಕಟ್ಟೆಯಲ್ಲಿ ರೋಬಸ್ಟಾ ಪಾರ್ಚ್ ಮೆಂಟ್ ದರ 50 ಕೆಜಿ ಚೀಲಕ್ಕೆ 14,400 ರಿಂದ 14,700 ರೂಪಾಯಿಗಳಿಗೆ ಏರಿ ಸರ್ವ ಕಾಲಿಕ ದಾಖಲೆ ನಿರ್ಮಿಸಿದೆ. ರೊಬಸ್ಟ್ರಾ ದರ ಯಾವತ್ತೂ ಅರೇಬಿಕಾ ಪಾರ್ಚ್ ಮೆಂಟ್ ದರಕ್ಕಿಂತ ಜಾಸ್ತಿ ಆಗಿದೇ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಚೆಗ್ರಿ ಹಾಗೂ ಪಾರ್ಚ್ ಮೆಂಟ್ ಕಾಫಿ ದರದಲ್ಲಿ ಆರೇಬಿಕಾ ದರವನ್ನೂ ಹಿಂದಿಕ್ಕಿದೆ. ಅರೇಬಿಕಾ ಚೆರಿ ಕಾಫಿ ದರ 50 ಕೆಜಿ ಚೀಲಕ್ಕೆ 8000-8200 ಇದ್ದರೆ ( ಬಿಟರ್ನ್ ಆಧರಿಸಿ ) ರೊಬಸ್ಯಾ ದರ 8600 ರೂಪಾಯಿಗೂ ಹೆಚ್ಚಾಗಿದೆ.

Advertisement

ಮಾರುಕಟ್ಟೆ ತಜ್ಞರ ಪ್ರಕಾರ ಜಾಗತಿಕ ಬೇಡಿಕೆಯಲ್ಲಿ ಗಣನೀಯ ಏರಿಕೆ, ವಿಶ್ವದ ಅಗ್ರಗಣ್ಯ ಕಾಫಿ ರಫ್ತುದಾರ ಬ್ರೆಜಿಲ್, ಇಂಡೋನೇಷ್ಯಾ ಮತ್ತು ವಿಯಟ್ನಾಂ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಾಶವಾಗಿರುವುದೇ ದರ ಏರಿಕೆಗೆ ಕಾರಣವಾಗಿದೆ. ಈ ಸಾಲಿನಲ್ಲಿ ಕಳಪೆ ಇಳುವರಿ ಹೊರತಾಗಿಯೂ, ದೇಶದ ಕಾಫಿ ಉತ್ಪಾದನೆಯು 3.54 ಲಕ್ಷ ಟನ್‌ಗಳಿಗೆ ತಲುಪುವ ನಿರೀಕ್ಷೆಯಿದೆ, ಇದು ಕಳೆದ ವರ್ಷದ ಉತ್ಪಾದನೆ 3.52 ಲಕ್ಷ ಟನ್‌ಗಳಿಗಿಂತ ಸ್ವಲ್ಪ ಹೆಚ್ಚಳವಾಗಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದರು. ಕಾಫಿ ದರದ ಸರ್ವಕಾಲಿಕ ದಾಖಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಮಾಜಿ ಸದಸ್ಯ ಡಾ ಸಣ್ಣುವಂಡ ಕಾವೇರಪ್ಪ ಅವರು ರೋಬಸ್ಟಾ ಕಾಫಿ ದರವು ಮತ್ತಷ್ಟು ಏರಿಕೆ ದಾಖಲಿಸಲಿದೆ ಎಂದರು. ವಿಯಟ್ನಾಂ ಹಾಗೂ ಇಂಡೋನೇಷ್ಯಾ ರಾಷ್ಟ್ರಗಳಲ್ಲಿ ಕಾಫಿ ಬೆಳೆ ನಾಶ ಆಗಿರುವುದರಿಂದ ಅಲ್ಲದೆ ಗುಣಮಟ್ಟದಲ್ಲಿ ಭಾರತೀಯ ಕಾಫಿ ಇತರ ದೇಶಗಳಿಗಿಂತ ಮೇಲ್ಮಟ್ಟದಾಗಿರುವುದರಿಂದ ಪ್ರೀಮಿಯಂ ಬೆಲೆಗೆ ಮಾರಾಟವಾಗುತ್ತಿದೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಬರಾಜಿನ ಕೊರತೆಯಿಂದಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಸಹಜವಾಗೇ ದರ ಹೆಚ್ಚಳವಾಗಿದೆ ಎಂದರು.

ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕವು 71% ನಷ್ಟು ಭಾಗವನ್ನು ಹೊಂದಿದೆ, ನಂತರ ಕೇರಳ (21%), ಮತ್ತು ತಮಿಳುನಾಡು (5%) ಇವೆ. ಆಂಧ್ರ ಪ್ರದೇಶ, ಅಸ್ಕಾಂ ನಲ್ಲಿ ಕಾಫಿ ಬೆಳೆಯಲಾಗುತ್ತದಾದರೂ ಉತ್ಪಾದನೆ ತೀರಾ ಕಡಿಮೆ ಇದೆ. ಭಾರತದಿಂದ ರಫ್ತಾಗುವ ಶೇಕಡಾ 70 ರಷ್ಟು ಕಾಫಿ ಮುಖ್ಯವಾಗಿ ಇಟಲಿ, ಬೆಲ್ಸಿಯಂ, ಜರ್ಮನಿ ಮತ್ತು ರಷ್ಯಾ ಗೆ ಹೋಗುತ್ತಿದೆ. ಸಾಮಾನ್ಯವಾಗಿ ಕಾಫಿ ಬೆಳೆಯುವ ದೇಶಗಳು ತಮ್ಮ ಎಲ್ಲಾ ಕಾಫಿಯನ್ನು ಮಾರಾಟ ಮಾಡುವುದಿಲ್ಲ. ಮಾರುಕಟ್ಟೆ ಬೆಲೆ ಸ್ಥಿರತೆಗಾಗಿ ಬಫರ್ ಸ್ಟಾಕ್ (Buffer stock) ಇಟ್ಟುಕೊಂಡಿರುತ್ತವೆ. ಆದರೆ ಈ ಬಾರಿ ಎಲ್ಲಾ ಬಫರ್ ಸ್ಟಾಕ್ ನ್ಯೂ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದರಿಂದ ಬಫರ್ ಸ್ಟಾಕ್ ಕೂಡ ಇಲ್ಲದಾಗಿದ್ದು ಇದೂ ಕೂಡ ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಹೆಚ್ಚಳಕ್ಕೆ ಕಾರಣ ಆಗಲಿದೆ.

Advertisement

ಕಾಫಿ ದರ ಏರಿಕೆಯಿಂದಾಗಿ ಮುಂದಿನ ತಿಂಗಳುಗಳಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕಾಫಿ ಶಾಪ್‌ಗಳಲ್ಲಿ ಬೆಲೆಗಳು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಬಳಕೆದಾರರಿಗೂ ಹೊರೆ ಆಗಬಹುದು ಇದರಿಂದ ಅನಿವಾರ್ಯವಾಗಿ ಬಳಕೆದಾರರು ಟೀ ಸೇವನೆಗೆ ಒಲವು ತೋರಬಹುದು. ಅಲ್ಲದೆ ಇದೇ ರೀತಿ ಮುಂದಿನ 2-3 ವರ್ಷ ರೊಬಸ್ಟಾ ದರ ಏರುಮುಖ ಆಗಿದ್ದರೆ ಅರೇಬಿಕಾ ಬೆಳೆಗಾರರು ಸಹಜವಾಗಿಯೇ ರೊಬಸ್ಟ್ರಾ ಬೆಳೆ ಬೆಳೆಯಲು ಮುಂದಾಗಬಹುದು. ಏಕೆಂದರೆ ಅರೇಬಿಕಾ ತೋಟದ ನಿರ್ವಹಣೆಯ ಶೇಕಡಾ 50 ರಷ್ಟು ವೆಚ್ಚದಲ್ಲಿ ರೊಬಸ್ಟಾ ಕಾಫಿ ಬೆಳೆಯಬಹುದಲ್ಲದೆ ಇದಕ್ಕೆ ಬೋರರ್ ಕಾಟ ವಿರಳ. ಮುಂದಿನ ದಿನಗಳಲ್ಲಿ ಈ ದರವು ಮತ್ತಷ್ಟು ಏರಿಕೆ ದಾಖಲಿಸಲಿದ್ದು ಅಲ್ಪ ಕುಸಿತ ದಾಖಲಿಸಿದರೂ ದರ ಸ್ಥಿರತೆ ಕಾಯ್ದುಕೊಳ್ಳಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ಬರಹ :
ಕೋವರ್ ಕೊಲ್ಲಿ ಇಂದ್ರೇಶ್

Due to the global shortage, the price of Robusta coffee has for the first time surpassed the price of Arabica coffee to record an all-time high. The farm gate price of robusta coffee fruits touched a record Rs.172 per kilogram in the Wayanad market on Monday. It was Rs.115 per kg during the same period last year. At the same time, the spot price of robusta parchment coffee beans recorded an all-time high of Rs.315 per kg.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ನೋಂದಣಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, 1300 ವಲಸೆ ಕಾರ್ಮಿಕರು…

15 mins ago

ತೇಗದ ಮರ ಕಡಿಯುವ ವಯೋಮಿತಿ ನಿರ್ಧರಿಸುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ನಿರ್ದೇಶನ

ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ಬೆಳೆಸಿರುವ ತೇಗದ ಮರವನ್ನು ಎಷ್ಟು ವರ್ಷಕ್ಕೆ ಕತ್ತರಿಸಬೇಕು ಎಂಬ…

27 mins ago

ಪಡಿತರ ಆಹಾರ ಧಾನ್ಯ ಮಾರಾಟ ಮಾಡಿದರೆ ಪಡಿತರ ಚೀಟಿದಾರರ ವಿರುದ್ಧ ಕಾನೂನು ಕ್ರಮ |

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ವಿತರಿಸುವ ಆಹಾರ ಧಾನ್ಯಗಳನ್ನು ಹಣದ ಆಮಿಷಕ್ಕೆ ಒಳಾಗಾಗಿ…

30 mins ago

ಅಡಿಕೆ ಆಮದು ನೀತಿಯಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟ | ಪಕ್ಷಾತೀತ ಹೋರಾಟ ಅಗತ್ಯ – ಶಾಸಕ ಅಶೋಕ್‌ ಕುಮಾರ್‌ ರೈ |

ಅಡಿಕೆ ಆಮದು ನಿಲ್ಲಿಸುವ ಬಗ್ಗೆ ತಕ್ಷಣವೇ ಪಕ್ಷಾತೀತವಾದ ಹೋರಾಟ ಅಗತ್ಯ ಇದೆ ಎಂದು…

5 hours ago

ಭಾರತದಲ್ಲಿ ಕೃಷಿ ಇಳುವರಿ ಏರಿಕೆಯಾಗುತ್ತಿಲ್ಲ..? | ಕೃಷಿ ವಿಜ್ಞಾನಿಗಳು ಪರಿಶೀಲಿಸಬೇಕು |

ನಮ್ಮ ದೇಶ ಹಾಗೂ ರಾಜ್ಯದ ಕೃಷಿ ಇಳುವರಿ ಇತರೇ ದೇಶಗಳಿಗೆ ಹೋಲಿಸಿದರೆ ನಿಗದಿತ…

6 hours ago

ನಂದಿನಿ ತುಪ್ಪಕ್ಕೆ ಟಿಟಿಡಿಯಿಂದ ಬೇಡಿಕೆ | 2000 ಟನ್‌ ತುಪ್ಪಕ್ಕೆ ಬೇಡಿಕೆ |

ಕಳೆ 15 ದಿನಗಳಲ್ಲಿ 350 ಟನ್ ನಂದಿನಿ ತುಪ್ಪವನ್ನು ತಿರುಪತಿಗೆ ಕಳುಹಿಸಲಾಗಿದೆ ಎಂದು …

6 hours ago