ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ನಂತರ ತರಕಾರಿ ಸರದಿ | ಶತಕ ಬಾರಿಸಿದ ಟೊಮ್ಯಾಟೋ, ಬೀನ್ಸ್ ದ್ವಿಶತಕ, ಬೆಳ್ಳುಳ್ಳಿ ತ್ರಿಶತಕ..! |

June 21, 2024
1:10 PM

ಕಳೆದ ಕೆಲವು ದಿನಗಳಿಂದ ಬೆಲೆ ಏರಿಕೆಯ(Price Hike) ಪರ್ವ ಆರಂಭವಾಗಿದೆ. ಪೆಟ್ರೋಲ್(Petrol), ಡಿಸೇಲ್(Descale) ಬಳಿಕ ರಾಜ್ಯದ ಜನತೆಗೆ ಈಗ ದಿನನಿತ್ಯ ಬಳಕೆಯ ತರಕಾರಿಗಳ ಬೆಲೆ ದಿಢೀರನೆ (Vegetable Price Hike) ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಟೊಮ್ಯಾಟೋ(Tomato) ರೇಟ್ ಶತಕ ದಾಟಿದ್ರೆ, ಬೀನ್ಸ್(Beans) ಬೆಲೆ ಇನ್ನೂರು ರೂಪಾಯಿ ದಾಟಿದೆ. ಕಳೆದ ವಾರಕ್ಕಿಂತ ಈ ವಾರ ಬಹುತೇಕ ತರಕಾರಿ(Vegetable) ದರ ದುಪ್ಪಟ್ಟು, ಮೂರು ಪಟ್ಟು ಜಾಸ್ತಿಯಾಗಿದೆ. 

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ ಬೆನ್ನಲ್ಲೇ ನಗರದ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಟೊಮ್ಯಾಟೋ ನೂರರ ಗಡಿ ದಾಟಿದ್ರೆ, ಬೀನ್ಸ್ ಇನ್ನೂರು ಹಾಗೂ ಬೆಳ್ಳುಳ್ಳಿ ಮುನ್ನೂರು ರೂಪಾಯಿ ದಾಟಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆ, ಮಲ್ಲೇಶ್ವರ, ಗಾಂಧಿ ಬಜಾರ್, ಹೆಬ್ಬಾಳ ಮಾರುಕಟ್ಟೆ ಸೇರಿದಂತೆ ಎಲ್ಲಾ ಕಡೆಗಳಲ್ಲೂ ತರಕಾರಿ ಬಲು ತುಟ್ಟಿಯಾಗಿದೆ. ಇದರಿಂದ ಜನ ಸಾಮಾನ್ಯರು ಹೈರಾಣಾಗಿದ್ದಾರೆ.

ರಾಜ್ಯದಲ್ಲಿ ಕುಸಿತ ಕಂಡ ಟೊಮ್ಯಾಟೊ ಇಳುವರಿ : ರಾಜ್ಯದಲ್ಲಿ ಟೊಮ್ಯಾಟೋ ಉತ್ಪಾದನೆ ಕುಸಿತ ಕಂಡ ಹಿನ್ನೆಲೆ ಬೆಲೆ ಏರಿಕೆಯಾಗಿದೆ ಅನ್ನೋದು ವರ್ತಕರ ಮಾತು. ಮಂಡ್ಯ, ಕೋಲಾರ, ಕನಕಪುರ, ಕಡೂರು, ಮದ್ದೂರು ಕಡೆಗಳಲ್ಲಿ ಟೊಮ್ಯಾಟೋ ಇಳುವರಿ ಕುಸಿತವಾಗಿದೆ. ಸದ್ಯ ಮಹಾರಾಷ್ಟ್ರದಿಂದ ಆಮದಾಗುವ ಟೊಮ್ಯಾಟೋ ನೆಚ್ಚಿಕೊಂಡಿವೆ ಬೆಂಗಳೂರಿನ ಮಾರುಕಟ್ಟೆಗಳು. ಟೊಮ್ಯಾಟೋ ಜೊತೆಗೆ ಬೀನ್ಸ್, ಬೆಳ್ಳುಳ್ಳಿ ಸೇರಿದಂತೆ ಇತರೆ ತರಕಾರಿ ದರವೂ ತುಟ್ಟಿಯಾಗಿದೆ. ಮುಂದಿನ ಒಂದು ತಿಂಗಳ‌ ಕಾಲ ದರ ಇದೇ ರೀತಿ ಏರಿಕೆಯಾಗಲಿದೆ ಎನ್ನುವುದು ಮಾರುಕಟ್ಟೆ ವರದಿ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ
October 13, 2026
10:15 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror