ಕೇಂದ್ರ ಸರ್ಕಾರವು(Central Govt) ದಕ್ಷಿಣ ರಾಜ್ಯಗಳಿಗೆ(South states) ಹಣ ಬಿಡುಗಡೆ(Money release)ಮಾಡದಿರುವ ಧೋರಣೆಯನ್ನು ಮುಂದುವರಿಸಿದರೆ ದೇಶದ ದಕ್ಷಿಣ ರಾಜ್ಯಗಳು ಪ್ರತ್ಯೇಕ ದೇಶದ(Separate country) ಬೇಡಿಕೆಯನ್ನು ಎತ್ತುತ್ತವೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರು ಹೇಳಿಕೆಯೊಂದನ್ನು ನೀಡಿ ವಿವಾದಕ್ಕೆ(Controversy) ಕಾರಣರಾಗಿದ್ದರು. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಮಲೆನಾಡಿನ ಜನರು ಅನೇಕ ವರ್ಷಗಳಿಂದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಹಾಗಿದ್ದರೂ ಏಕೆ ಮಾತನಾಡಿಲ್ಲ ಎಂದು ನಾಗರೀಕರೊಬ್ಬರು ಖಡಕ್ ಪ್ರಶ್ನೆಗಳನ್ನು ಇದೇ ಸಂಸದರ ಮುಂದಿಟ್ಟಿದ್ದಾರೆ.
ಮಲೆನಾಡು ಹಾಗೂ ಶೃಂಗೇರಿ ಪ್ರದೇಶವನ್ನು ಕೇಂದ್ರವಾಗಿರಿಸಿ ಬರೆದ ಪ್ರಶ್ನೆಗಳು ಇದಾಗಿತ್ತು. ಇಡೀ ಮಲೆನಾಡು ಹಲವು ವರ್ಷಗಳಿಂದ ಸಮಸ್ಯೆಗಳಿಂದ ಬಳಲುತ್ತಿದೆ. ರಸ್ತೆ, ನೀರು, ವಿದ್ಯುತ್, ಮೂಲಭೂತ ಸೌಲಭ್ಯಗಳಿಂದ ಬಳಲುತ್ತಿದೆ. ಈಚೆಗೆ ಕಸ್ತೂರಿ ರಂಗನ್ ವರದಿಯ ತೂಗುಗತ್ತಿಯೂ ಇದೆ. ಇದೆಲ್ಲದರ ಬಗ್ಗೆ ಕಾಂಗ್ರೆಸ್ ಸರ್ಕಾರವು ಏನು ಮಾಡಿದೆ? ಇದರ ಬಗ್ಗೆಯೂ ಮಾತನಾಡಿ ಎಂದು ನಾಗರಿಕರ ಪ್ರಶ್ನೆಯಾಗಿತ್ತು.ಅವರ ಪ್ರಶ್ನೆ ಹೀಗಿದೆ…
1.ಶೃಂಗೇರಿ ಕ್ಷೇತ್ರದ 57,000 ಮನೆಗಳಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಕೊಡುತ್ತೇವೆಂದು ಹೇಳಿ ವಾರ್ಷಿಕ ಸರಾಸರಿ ಬಳಕೆ ಆಧಾರದಡಿ ಎಂಬ ಷರತ್ತು ಹೊರಡಿಸಿ ಕೇವಲ 40, 50 ಯೂನಿಟ್ ಉಚಿತ ವಿದ್ಯುತ್ ಮಾತ್ರ ನೀಡುತ್ತಾ, ಲೋಡ್ ಶೇಡ್ಡಿಂಗ್ ಮಾಡುತ್ತಾ, ಕೃಷಿ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೇ ಪ್ರತಿ ಯೂನಿಟ್ ವಿದ್ಯುತ್‌ಗೆ 4.70 ರೂಪಾಯಿಂದ 7 ರೂಪಾಯಿಗೆ ಏರಿಕೆ ಮಾಡಿರುವ ಅನ್ಯಾಯಕ್ಕೆ “ಪ್ರತ್ಯೇಕ” ಬೇಡಿಕೆ ಇಡುತ್ತೀರಾ?
2.ಶಕ್ತಿ ಯೋಜನೆ ಶೃಂಗೇರಿ ಕ್ಷೇತ್ರದಲ್ಲಿ ನಿಶಕ್ತಿಯಾಗಿದೆ. KSRTC ಬಸ್ ಗಳ ಓಡಾಟ ಸಂಖ್ಯೆ ಕಡಿಮೆಯಾಗಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಶಂಕುಸ್ಥಾಪನೆಗೊಂಡಿದ್ದ KSRTC ಬಸ್ ಡಿಪೋ ಕಾಮಗಾರಿ ಸ್ಥಗಿತಗೊಂಡಿರುವ ಅನ್ಯಾಯಕ್ಕೆ “ಪ್ರತ್ಯೇಕ” ಬೇಡಿಕೆ ಇಡುತ್ತೀರಾ?
3). ಹಿಂದಿನ ಸರ್ಕಾರ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗಗಳ ಕುರಿತ ಸಂಶೋಧನೆಗೆ ₹ 10 ಕೋಟಿ ಅನುದಾನ ಘೋಷಿಸಿತ್ತು. ಈಗಿನ ಸರ್ಕಾರವು ಬಜೆಟ್‌ನಲ್ಲಿ ಪ್ರಕಟಿಸಿರದ ಅನ್ಯಾಯಕ್ಕೆ “ಪ್ರತ್ಯೇಕ” ಬೇಡಿಕೆ ಇಡುತ್ತೀರಾ?
4.ಶೃಂಗೇರಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹಿಂದೆ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಆದರೆ ಅದನ್ನ ಕೈ ಬಿಟ್ಟ ಈಗಿನ ಸರಕಾರದ ಅನ್ಯಾಯದ ವಿರುದ್ಧ “ಪ್ರತ್ಯೇಕ” ಬೇಡಿಕೆ ಇಡುತ್ತೀರಾ?
5.ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ವಿರೋಧಿಸಿದ ಹಿಂದಿನ ಸರಕಾರ “Physical Survey” ಗೆ ಆದೇಶ ನೀಡಿದ್ದರು, ಕಸ್ತೂರಿ ರಂಗನ್ ವರದಿ ಜಾರಿ ಮಾಡುತ್ತೇವೆ ಎಂದ ಈಗಿನ ಅರಣ್ಯ ಸಚಿವರ ಹೇಳಿಕೆಯನ್ನ ಖಂಡಿಸಿ “ಪ್ರತ್ಯೇಕ” ಬೇಡಿಕೆ ಇಡುತ್ತೀರಾ?
6. 2017 ರಲ್ಲಿ ಪ್ರಾರಂಭವಾದ ನರಸಿಂಹರಾಜಪುರ ಹಾಗೂ ಬಾಳೆಹೊನ್ನೂರ್ ಸೇತುವೆ ಕಾಮಗಾರಿಗಳು, ಇನ್ನೂ ಮುಗಿಯದೆ ಸ್ಥಗಿತಗೊಂಡಿರುವ ಅನ್ಯಾಯಕ್ಕೆ “ಪ್ರತ್ಯೇಕ” ಬೇಡಿಕೆ ಇಡುತ್ತೀರಾ?
7.ಹಿಂದಿನ ಸರ್ಕಾರ ಕ್ಷೇತ್ರವಾರು ಮೀಸಲಿಟ್ಟಿದ್ದ ಅನುದಾನದ ಕಾಮಗಾರಿಗಳು ಮಾತ್ರ ಶೃಂಗೇರಿ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ ಹೊರತು ಅಧಿಕಾರಕ್ಕೆ ಬಂದು 8 ತಿಂಗಳು ಕಳೆದರು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಘೋಷಣೆ ಮಾಡದ ಅನ್ಯಾಯಕ್ಕೆ “ಪ್ರತ್ಯೇಕ” ಬೇಡಿಕೆ ಇಡುತ್ತೀರಾ?
8.ಮೂವತ್ತು ವರ್ಷಗಳಿಂದ ಕಾಫಿ ಬೆಳೆಯುತ್ತಿರುವವರಿಗೆ ಒತ್ತುವರಿ ಜಮೀನು ಲೀಸ್‌ಗೆ ನೀಡುವ ಕಾಯ್ದೆ ಜಾರಿಗೊಳಿಸಲಾಗಿತ್ತು. ಆದರೆ, ಈಗಿನ ಸರ್ಕಾರ ಇದನ್ನು ಜಾರಿ ಮಾಡಿರದ ಅನ್ಯಾಯಕ್ಕೆ “ಪ್ರತ್ಯೇಕ” ಬೇಡಿಕೆ ಇಡುತ್ತೀರಾ?
9.ರೈತರ ಒತ್ತುವರಿ ತೆರುವುಗೊಳಿಸುತ್ತಿರುವ ಹಾಗೂ ನಿರಂತರ ಆನೆ ದಾಳಿಯಾಗುತ್ತಿದ್ದರು ಕ್ರಮವಹಿಸಿದ ಅರಣ್ಯ ಸಚಿವರ ನಡೆಯನ್ನ ಖಂಡಿಸಿ ಅವರು ಮಾಡಿದ ಅನ್ಯಾಯಕ್ಕೆ “ಪ್ರತ್ಯೇಕ” ಬೇಡಿಕೆ ಇಡುತ್ತೀರಾ?
ಹೀಗೇ ಹಲವು ಪ್ರಶ್ನೆಗಳು ಇವೆ. ಆದರೆ ಯಾವುದಕ್ಕೂ ಪ್ರತ್ಯೇಕ ರಾಜ್ಯ, ದೇಶದ ಘೋಷಣೆ ಅಲ್ಲ. ನಿಜವಾಗಿಯೂ ಆಗಬೇಕಾದ ಕೆಲಸಗಳ ಬಗ್ಗೆ ಧ್ವನಿ ಎತ್ತಬೇಕಿರುವುದು ಎಂಬುದು ನಾಗರಿಕರ ಅಭಿಪ್ರಾಯವಾಗಿದೆ. ದೇಶ ವಿಭಜನೆ, ರಾಷ್ಟ್ರ ವಿರೋಧಿ ಭಾವನೆಗಳಲ್ಲ, ಗ್ರಾಮೀಣ ಭಾರತವನ್ನು ಕಟ್ಟುವ ಕೆಲಸವಾಗಲಿ ಎಂಬುದು ಆಶಯವಾಗಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…