ಇಡೀ ಊರಿಗೆ ಊರೇ ಖಾಲಿ ಖಾಲಿಯಾಗಿದೆ. ಊರಿಡೀ ಹುಡಿಕಿದ್ರೂ ಕಾನ ಸಿಗೋಗು ಅಲ್ಲಿ ಇಲ್ಲಿ ನಿಧಾನಕ್ಕೆ ಓಡಾಡುವ ಹಿರಿ ಜೀವಗಳು ಮಾತ್ರ. ಊರು ಕೇರಿ ಗಲಾಟೆ ಎಬ್ಬಿಸುತ್ತಾ ಓಡಾಡುವ ಮಕ್ಕಳು, ಅದು ಇದು ಕೆಲಸದಲ್ಲಿ ನಿರತಾರಾಗಿರುವ ಮಹಿಳೆಯರು, ರಸ್ತೆಯಲ್ಲಿ ಅಡ್ಡಾಡುವ ಪುರುಷರು ಯಾರೂ ಇಲ್ಲಿ ಕಾಣ ಸಿಗುವುದಿಲ್ಲ. ಹೆಚ್ಚಿನ ಮನೆಗಳಿಗೆ ಬೀಗ ಜಡಿಯಲಾಗಿದೆ. ಇದು ಮುಂಗಾರು #Mansoon ಬಾರದ ಹಿನ್ನೆಲೆ ಆವರಿಸಿಕೊಂಡ ಬರ #Drought ದ ಛಾಯೆಯ ಚಿತ್ರಣ
ಬರಪೀಡಿತ ಜಿಲ್ಲೆ ಅಂತಾನೇ ಹಣೆಪಟ್ಟಿ ಕಟ್ಟಿಕೊಂಡಿರೋ ಜಿಲ್ಲೆಗಳ್ಲಿ ಬಾಗಕೋಟೆ ಕೂಡ. ಈ ಜಿಲ್ಲೆಯಾದ್ಯಂತ ಬಿರು ಬಿಸಿಲಿಗೆ ಒಣಗಿ ಬಾಯಿಬಟ್ಟಿರೋ ಹೊಲ, ಕೆರೆಗಳು.. ಉದ್ಯೋಗ ಅರಿಸಿ ಗುಳೆಹೋಗಿ ಖಾಲಿ ಹೊಡೆಯುತ್ತಿರೋ ತಾಂಡಾಗಳು. ರಣ ರಣ ಬಿಸಿಲಿನಲ್ಲಿ ಬದುಕನ್ನರಿಸಿ ಹೊರ ಹೋಗಲಾಗದೆ ಆಕಾದತ್ತ ಮುಖ ಮಾಡಿ ಮಳೆಗಾಗಿ ಕಾಯುತ್ತಿರುವ ಹಿರಿ ಜೀವಗಳು..
ಕಿತ್ತೂರು ಕರ್ನಾಟಕ ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಇದರಿಂದ ಕೂಲಿ ಕೆಲಸ ಸಿಗದ ಕಾರಣ ಇಡೀ ಊರಿಗೆ ಊರೇ ಗುಳೆ ಹೋಗಿದೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮ ಖಾಲಿ ಖಾಲಿ ಹೊಡೆಯುತ್ತಿದೆ. ಲಿಂಗಾಪುರದ ಬೋರ್ವೆಲ್ಗಳಲ್ಲಿ ಇದ್ದ ಅಲ್ಪಸ್ವಲ್ಪ ನೀರು ಬತ್ತಿ ಹೋಗುತ್ತಿವೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಹತ್ತಿರ ಯಾವುದೇ ಕೈಗಾರಿಕೆಗಳು ಸಹ ಇಲ್ಲ. ನರೇಗಾ ಕೆಲಸ ಸರಿಯಾಗಿ ಸಿಗುತ್ತಿಲ್ಲ. ಸಿಕ್ಕರೂ ಸರಿಯಾದ ಸಮಯಕ್ಕೆ ಕೂಲಿ ಕೈಸೇರಲ್ಲ. ಇದರಿಂದ ಗ್ರಾಮದ ಶೇಕಡಾ 80ರಷ್ಟು ಮನೆಗಳಿಗೆ ಬೀಗಮುದ್ರೆ ಬಿದ್ದಿದೆ.
ಲಿಂಗಾಪುರ ಗ್ರಾಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಮನೆಗಳಿವೆ. ಶೇಕಡಾ 80 ರಷ್ಟು ಕುಟುಂಬಗಳು ಮನೆಗಳಿಗೆ ಬೀಗ ಹಾಕಿ ಕೂಲಿ ಕೆಲಸಕ್ಕಾಗಿ ಮಂಗಳೂರು, ಗೋವಾಕೆ ಹೋಗಿವೆ. ನೀವೇನಾದ್ರೂ ಈ ಗ್ರಾಮದಲ್ಲಿ ಹೋದ್ರೆ ಕೇವಲ ವಯಸ್ಸಾದ ವೃದ್ಧರು ಮಾತ್ರ ಇರುವ ಮ್ಯೂಸಿಯಂಗೆ ಹೋದಂತೆ ಭಾಸವಾಗುತ್ತೆ. ಇನ್ನಾದ್ರೂ ಬೇಗ ಮಳೆ ಬರಲಿ, ಕೆರೆ-ಬಾವಿಗಳು ತುಂಬಲಿ, ಜನರು ಊರಿಗೆ ಮರಳಲಿ..
ಕರ್ನಾಟಕದಲ್ಲಿ ಏಪ್ರಿಲ್ 18ರಿಂದ ಹಂತ ಹಂತವಾಗಿ ಮಳೆಯ ಚಟುವಟಿಕೆ ಆರಂಭವಾಗುವ ಸಾಧ್ಯತೆ ಇದೆ.…
ವಿಷು ಹಬ್ಬವು ಸೂರ್ಯನ ಮೇಷ ಸಂಕ್ರಮಣದೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಹಬ್ಬವಾಗಿದೆ. ವಿಷು ಕಣಿ…
ಈ ವರ್ಷ ಬೇಸಿಗೆ ಬಿತ್ತನೆ 64 ಲಕ್ಷ ಹೆಕ್ಟೇರ್ ದಾಟಿದ್ದು, ಕಳೆದ ವರ್ಷಕ್ಕಿಂತ…
ಮುಂದಿನ ಐದು ದಿನಗಳಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಲಿದೆ…
ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಮುಂದುವರಿದಿದ್ದು, ಏಪ್ರಿಲ್ 18ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ.…
ಇರಾನ್-ಇಸ್ರೇಲ್ ಯುದ್ಧದಿಂದ ಮಾವಿನ ರಫ್ತು ಕುಸಿತಗೊಂಡು ಬೆಲೆ ತೀವ್ರವಾಗಿ ಇಳಿಕೆಯಾಗಿದೆ. ರೈತರು ನಷ್ಟದಲ್ಲಿ…