ಅಂಗನವಾಡಿ ಮಕ್ಕಳಿಗಾಗಿ ಬಾವಿ ತೋಡಿದ ನೀರೆ | ಸತತ ಶ್ರಮದ ಮೂಲಕ ಗಂಗೆಯನ್ನು ಒಲಿಸಿಕೊಂಡ ಗೌರಿ |

March 7, 2024
6:52 PM

ತಮ್ಮ ಜೀವನ ನಿರ್ವಹಣೆಗಾಗಿ ಛಲತೊಟ್ಟು ಕೆಲಸ ಮಾಡಿ ಸಾಧಿಸಿರುವ ಬಹಳ ಮಂಂದಿಯನ್ನು ನಾವು ನೋಡಿದ್ದೇವೆ. ಆದರೆ ಏಕಾಂಗಿಯಾಗಿ ಬೇರೆಯವರಿಗಾಗಿ ಜೀವನ ಸವೆಸಿದವರು ಕೇವಲ ಬೆರಳೆಣಿಕೆಯವರು ಮಾತ್ರ. ಅಂಥವರಲ್ಲಿ ಉತ್ತರ ಕನ್ನಡದ(Uttara Kannada) ಶಿರಸಿಯ(Sirsi) ಗೌರಿ ಪರಮೇಶ್ವರ್ ನಾಯ್ಕ್(Gowri Parameshwar Naik) ಅವರು ಕೂಡ ಒಬ್ಬರು. ಈಕೆ ಮಾಡಿದ ಸಾಧನೆ ಅಂತಿಂಥದ್ದಲ್ಲ. ಶಿರಸಿಯ ಗಣೇಶ ನಗರದ ಅಂಗನವಾಡಿ ಮಕ್ಕಳಿಗೆ(Anganavadi Children) ಗೌರಿ ಅವರು ಬಾವಿ(Well) ತೋಡಿದ್ದಾರೆ. ಇದೀಗ ತಮ್ಮ ಪ್ರಯತ್ನದ ಫಲವಾಗಿ ಬಾವಿಯಲ್ಲಿ ಗಂಗೆ ಕಂಡು ಗೌರಿ ಖುಷಿಯಿಂದ ಭಾವುಕರಾಗಿದ್ದಾರೆ. ಮಾಮೂಲಿ ಭೂಮಿಯಾಗಿದ್ದ ಜಾಗದಲ್ಲಿ ನಿರಂತರ ಒಂದು ತಿಂಂಗಳ ಗೌರಿ ಪರಮೇಶ್ವರ್ ನಾಯ್ಕ್ ಅವರ ಶ್ರಮದ ಫಲವಾಗಿ ಕುಡಿಯುವ ನೀರಿನ (Water) ಬಾವಿ ಕಾಣುತ್ತಿದೆ.

ನಿರಂತರವಾಗಿ ಬಾವಿ ತೋಡಿದ ಗೌರಿ : ಶಿರಸಿ ಗಣೇಶನಗರದಲ್ಲಿ ನೀರಿನ ಸಮಸ್ಯೆ ಇದೆ. ಅದರಲ್ಲೂ ಈಗ ದಿನ ಕಳೆದು ದಿನಕ್ಕೆ ಬಿಡುತ್ತಿರುವ ನೀರು ಸಣ್ಣ ಮಕ್ಕಳ ಆರೋಗ್ಯಕ್ಕೆ ಆಗಿ ಬರೋದಿಲ್ಲ. ಹೀಗಾಗಿ ಈ ಅಂಗನವಾಡಿಯ ಶಿಕ್ಷಕಿ ತಮ್ಮ ಅಂಗನವಾಡಿಯಿಂದ 100 ಮೀಟರ್ ದೂರದಲ್ಲಿ ಇರುವ ಗೋವಿಂದ ನಾಯ್ಕ್ ಅವರ ಮನೆಯ ಬಾವಿಯಿಂದ ಕ್ಯಾನ್‍ಗಳಲ್ಲಿ ನೀರು ತೆಗೆದುಕೊಂಡು ಬರುತ್ತಿದ್ದರು. ಇದನ್ನು ಕಂಡ ಗೌರಮ್ಮನವರು ಬಾವಿ ತೋಡುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಜನವರಿ 30 ರಿಂದ ನಿರಂತರವಾಗಿ ಬಾವಿ ತೋಡಿದ್ದಾರೆ. ಯಾವುದೇ ಅಡ್ಡಿ ಬಂದರೂ ಅದಕ್ಕೆ ತಲೆಕೆಡಿಸಿಕೊಂಡಿಲ್ಲ.

ಫೋಟೋ ಕೃಪೆ – ಶಿವಾನಂದ ಕಳವೆ

ನಿಸ್ವಾರ್ಥ ಸೇವೆ : 55 ವರ್ಷದ ಗೌರಿ ಅವರು ಛಲ ಬಿಡದೇ ಮಕ್ಕಳಿಗಾಗಿ 45 ಅಡಿ ಬಾವಿ ತೋಡಿ ನೀರು ತರಿಸಿದ್ದಾರೆ, ನೀರು ಬಂದಿದ್ದು ಕಂಡು ಭಾವುಕರಾಗಿದ್ದಾರೆ. ನಿಸ್ವಾರ್ಥ ಸೇವೆ ಮಾಡಿದ ಗೌರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಗೌರಿ ಪರಮೇಶ್ವರ್ ನಾಯ್ಕ್ ಅವರು ಈ ಹಿಂದೆ ಕೂಡ ಎರಡು ಬಾವಿಯನ್ನು ಏಕಾಂಗಿಯಾಗಿ ತೆಗೆದಿದ್ದರು. 55 ಅಡಿ ಹಾಗೂ 60 ಅಡಿ ಆಳದ ಬಾವಿಯನ್ನು ಇವರು ತಮ್ಮ ತೋಟದ ಬಳಕೆಗೆ ಹಾಗೂ ಸಾರ್ವಜನಿಕರ ಬಳಕೆಗಾಗಿ ತೆಗೆದಿದ್ದರು.

Source : ಅಂತರ್ಜಾಲ ಹಾಗೂ ಶಿವಾನಂದ ಕಳವೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ
October 15, 2026
10:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror