MIRROR FOCUS

ಹಾರ್ವರ್ಡ್ ಅಧ್ಯಯನಕ್ಕೆ ಬೆಚ್ಚಿ ಬಿದ್ದ ಜಗತ್ತು, ಭೂಮಿ ಮೇಲೆ ಮನುಷ್ಯನ ವೇಷದಲ್ಲಿದೆ ಅನ್ಯಗ್ರಹ ಜೀವಿ…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅನ್ಯಗ್ರಹ ಜೀವಿ(alien) ಇನ್ಯಾವುದೋ ಗ್ರಹದಲ್ಲಿಲ್ಲ. ಇದೇ ಭೂಮಿ ಮೇಲೆ ನಮ್ಮ ಜೊತೆಗೆ ಇದೆ. ಆದರೆ ಮನುಷ್ಯ ವೇಷ ಧರಿಸಿರುವ ಈ ಅನ್ಯಗ್ರಹ ಜೀವಿ ಭೂಮಿಯಲ್ಲೇ ಇದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನ ವರದಿ ಹೇಳುತ್ತಿದೆ.  ಅನ್ಯಗ್ರಹ ಜೀವಿ ಕುರಿತು ಹಲವು ಸಂಶೋಧನೆಗಳು ನಡೆದಿದೆ. ಇನ್ನು ಈ ಕುರಿತು ಕೆಲ ವಿಡಿಯೋಗಳು ಹರಿದಾಡಿದೆ. ಆದರೆ ಇದ್ಯಾವುದಕ್ಕೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಇದೀಗ ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.

Advertisement
Advertisement

ಅನ್ಯಗ್ರಹ ಜೀವಿಗಳಿಗೆ ಚಂದ್ರನ ಮೇಲೆ, ಇತರ ಗ್ರಹದ ಮೇಲೆ ಹುಡುಕುವ ಅಗತ್ಯವಿಲ್ಲ. ಇದೇ ಭೂಮಿ ಮೇಲಿದೆ. ಮುಷ್ಯರ ಜೊತೆಗೆ ವಾಸಿಸುತ್ತಿದೆ. ಮನುಷ್ಯನ ವೇಷ ಧರಿಸಿ ಅನ್ಯಗ್ರಹ ಜೀವಿಗಳು ಇಲ್ಲೇ ಇದೆ ಎಂದು ಈ ಅಧ್ಯಯನ ವರದಿ ಹೇಳುತ್ತಿದೆ. ಭೂಮಿ ಮೇಲೆ ಅನ್ಯಗ್ರಹ ಜೀವಿಗಳು ರಹಸ್ಯವಾಗಿ ಬದುಕುತ್ತಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಸಂಶೋಧನೆ ಹೇಳುತ್ತಿದೆ. ಹ್ಯೂಮನ್ ಫ್ಲೋರಿಶಿಂಗ್ ಪ್ರೋಗ್ರಾಮ್ ಸಂಶೋಧಕರ ತಂಡ ಈ ಮಹತ್ವದ ಅಧ್ಯಯನ ನಡೆಸಿ ವರದಿ ನೀಡಿದೆ. ಭೂಮಿಯಲ್ಲಿ ಮುಷ್ಯರ ನಡುವೆ ರಹಸ್ಯವಾಗಿ ಬದುಕುತ್ತಿರುವ ಅನ್ಯಗ್ರಹ ಜೀವಿಗಳು ಇತರ ಗ್ರಹದಲ್ಲಿರುವ ಅನ್ಯಗ್ರಹ ಜೀವಿಗಳ ಕುಟುಂಬ, ಸ್ನೇಹಿತರನ್ನು ಭೇಟಿಯಾಗಲು ಅಂತರಿಕ್ಷ ನೌಕೆಗಳನ್ನು ಬಳಸುತ್ತಿರುವ ಸಾಧ್ಯತೆಯನ್ನೂ ಈ ಸಂಶೋಧನೆ ಬೆಳಕು ಚೆಲ್ಲುತ್ತಿದೆ. ಇದೇ ಅಂತರಿಕ್ಷ ನೌಕೆಗಳು ಅಲ್ಲೊಂದು ಇಲ್ಲೊಂದು ಪ್ರತ್ಯಕ್ಷವಾಗಿ ಅನ್ಯಗ್ರಹ ಜೀವಿ ಭೂಮಿಗೆ ಬಂದಿದೆ ಅನ್ನೋ ಆತಂಕ ಸೃಷ್ಟಿಯಾಗಿರುವ ಸಾಧ್ಯತೆಗಳಿವೆ ಎಂದು ಅಧ್ಯಯನ ಹೇಳುತ್ತಿದೆ.

ಏಲಿಯನ್ ಸುಳಿವು ಪತ್ತೆ, 124 ಬೆಳಕಿನ ವರ್ಷ ದೂರದಲ್ಲಿನ ಈ ಪ್ಲಾನೆಟ್ ಕುರಿತು ಸಂಶೋಧನೆ ಆರಂಭ!: ಈ ಅಧ್ಯಯನ ವರದಿ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದೆ. ಇದರಲ್ಲಿ ಮಾನವನ ಅಸ್ಥಿತ್ವ, ಪ್ರಾಚಿನತೆ, ನಾಗರೀಕತಗಳ ಕುರಿತು ವಿವರಿಸಲಾಗಿದೆ. ಈ ಅಧ್ಯಯನ ವರದಿಯ ಕೆಲ ಪ್ರಮುಖ ಅಂಶಗಳು ಇಲ್ಲಿವೆ. ಹ್ಯೂಮನ್ ಕ್ರಿಪ್ಟೋಟೆರೆಸ್ಟ್ರಿಯಲ್ ಪ್ರಾಚೀನ ಮಾನವನ ನಾಗರೀಕತೆ ನಶಿಸಿಹೋಗಿದೆ. ಆಧುನಿಕತೆ, ತಾಂತ್ರಿಕತೆ ಅಭಿವೃದ್ಧಿಯಲ್ಲಿ ಈ ಪ್ರಾಚೀನತೆ ನಾಶವಾಗಿದೆ. ಆದರೆ ಅದರ ಕರುಹುಗಳು ಅವಶೇಷ ರೂಪದಲ್ಲಿ ಅಸ್ತಿತ್ವದಲ್ಲಿದೆ ಎಂದು ಈ ಅಧ್ಯಯನ ವರದಿ ಹೇಳುತ್ತದೆ.

ಈ ಪೈಕಿ ಹೋಮಿನಿಡ್ ಅಥವಾ ಥೆರೋಪಾಡ್ ಕ್ರಿಪ್ಟೋಟೆರೆಸ್ಟ್ರಿಯಲ್‌ ಭೂಮಿಯಲ್ಲಿರುವ ಪ್ರಾಣಿ ಸಂಕುಲದಿಂದ ಸೃಷ್ಟಿಯಾಗಿರುವ ಅಥವಾ ಅಭಿವೃದ್ಧಿಯಾಗಿರುವ ಸಂಕುಲವಾಗಿದೆ. ಅಂದರೆ ಮಂಗನಿಂದ ಮಾನವ ಅನ್ನೋ ರೀತಿ ಹೋಮಿನಿಡ್ ಸಂತತಿಯಾಗಿರಬಹುದು ಅಥವಾ ಡೈನೋಸಾರ್‌ನಂತಹ ಸಂತತಿಯಿಂದ ಟಿಸಿಲೊಡೆದ ವಂಶಸ್ಥರಾಗಿರಬಹುದು ಎಂದು ಈ ಅಧ್ಯಯನ ಹೇಳುತ್ತಿದೆ. ಆದರೆ ಇದರ ನಡುವೆ ಬೇರೆ ಗ್ರಹಗಳಿಂದ ಅನ್ಯಗ್ರಹ ಜೀವಿಗಳು ಭೂಮಿಗೆ ಆಗಮಿಸಬಹುದು. ಈ ಜೀವಿಗಳು ವಾಸಿಸಲು ಯೋಗ್ಯವಿರುವ ಗ್ರಹಗಳಲ್ಲಿ ಮರೆ ಮಾಚಿಕೊಂಡು ಜೀವಿಸಬಹುದು ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನ ಹೇಳುತ್ತಿದೆ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ಬದಲಾವಣೆ | ತಾಪಮಾನವು ಬೆಳೆಗಳ ಉತ್ಪಾದಕತೆಯ ಮೇಲೆ ಪರಿಣಾಮ ಸಾಧ್ಯತೆ | ಅಡಿಕೆ ಬೆಳೆಗಾರರೂ ಗಮನಿಸಬೇಕಾದ ಅಂಶ ಇದು |

ಹವಾಮಾನ ಬದಲಾವಣೆಯು 2050 ರ ದಶಕದಲ್ಲಿ ಮಳೆಯಾಶ್ರಿತ ಅಕ್ಕಿ ಇಳುವರಿಯನ್ನು 20% ಮತ್ತು…

4 hours ago

ದೈವ ಶಾಪ ದೋಷ | ಗತ ಜನ್ಮದ ಕರ್ಮದ ಪ್ರಭಾವವನ್ನು ಜಯಿಸುವ ಮಾರ್ಗ

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ದೈವ ಶಾಪ ದೋಷ ಎಂಬುದು ಗತ ಜನ್ಮದ ಕರ್ಮದಿಂದ…

4 hours ago

ರಾಜ್ಯದ ವಿವಿಧೆಡೆ ಮಳೆ –  ಬಹುತೇಕ ಜಲಾಶಯಗಳು ಭರ್ತಿ

ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ.  ಕೊಡಗಿನ…

14 hours ago

ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ | ವಿಶ್ವ ದಾಖಲೆ ಸಾಧನೆ ಮಾಡಿದ ಮಂಗಳೂರಿನ ರೆಮೋನಾ ಪಿರೇರಾ

ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಮಂಗಳೂರಿನ ರೆಮೋನಾ ಪಿರೇರಾ,…

15 hours ago

ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆ | ಲೋಕಸಭೆಯಲ್ಲಿ ಕೇಂದ್ರ ಕೃಷಿ  ಸಚಿವರ  ಹೇಳಿಕೆ

ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ…

15 hours ago

ಬಿಎಸ್ ಎನ್ ಎಲ್  ಪರಿಶೀಲನಾ ಸಭೆ | ʻಬಿಎಸ್ಎನ್ಎಲ್‌ʼ ಸೇವೆಗಳ ಸುಧಾರಣೆಗೆ ಕ್ರಮ

ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ-…

15 hours ago