ಒಂದೇ ಕುಂಟುಂಬದಿಂದ ಹಲವೆಡೆ ಸರಣಿ ಕಳ್ಳತನ ಶಂಕೆ | ಕರಾವಳಿ ಟೆಕ್ಸ್‌ ಟೈಲ್‌ ಎಸೋಸಿಯೇಶನ್‌ನಿಂದ ಪೊಲೀಸರಿಗೆ ದೂರು |

Advertisement

ಕರಾವಳಿ ಭಾಗದ ಎಲ್ಲಾ ಟೆಕ್ಸ್‌ಟೈಲ್ಸ್ ಅಂಗಡಿಗಳಲ್ಲಿ ಬಟ್ಟೆ ಕಳ್ಳತನ ಹಾಗೂ ಗ್ರಾಹಕರ ಬ್ಯಾಗ್‌ನಿಂದ ಮತ್ತು ಮೈಯಲ್ಲಿರುವ ಆಭರಣಗಳ ಕಳ್ಳತನ ಆಗಿರುವ ಹಿನ್ನಲೆಯಿಂದ ಕರಾವಳಿ  ಟೆಕ್ಸ್‌ಟೈಲ್ಸ್, ರೆಡಿಮೇಡ್ಸ್ ಮತ್ತು ಫೂಟ್‌ವೇರ್ ಡೀಲರ್‍ಸ್ ಎಸೋಸಿಯೆಶನ್  ವತಿಯಿಂದ  ಎಸೋಸಿಯೇಶನ್‌ ಅಧ್ಯಕ್ಷ , ಆಮ್‌ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಸಂತೋಷ್‌ ಕಾಮತ್‌ ನೇತೃತ್ವದಲ್ಲಿ ಮಂಗಳೂರು ಪೋಲಿಸ್ ಆಯುಕ್ತರಿಗೆ ದೂರು ನೀಡಲಾಗಿದೆ.

Advertisement

Advertisement
Advertisement
Advertisement

ಹಲವು ಟೆಕ್ಸ್‌ಟೈಲ್ಸ್ ಅಂಗಡಿಗಳಲ್ಲಿ ಕಳ್ಳತನ ನಡೆದಿರುವುದೆಲ್ಲವೂ ಸಿ.ಸಿ ಟಿ.ವಿ ಪೂಟೇಜ್‌ನಲ್ಲಿ ದಾಖಲಾಗಿದ್ದು, ಇದನ್ನು ಪ್ರತ್ಯೇಕ ಕಳ್ಳತನವೆಂದು  ಭಾವಿಸಿದ್ದೆವು. ಈ ಬಗ್ಗೆ ಎಲ್ಲೆಡೆಯೂ ಕೂಲಂಕುಶವಾಗಿ ಪರಿಶೀಲನೆ ಮಾಡಿದಾಗ ಒಂದೇ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಮೂಡಿದೆ.ಸುಮಾರು 30 ವರ್ಷಗಳಿಂದ ಕಳ್ಳತನ ಮಾಡುವುದೇ ಇವರ ಚಟುವಟಿಕಯಾಗಿದೆ ಎಂಬುದೂ ಈಗ ಸಂದೇಹಕ್ಕೆ ಎಡೆಮಾಡಿದೆ. ಆದುದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಳ್ಳತನ ಮಾಡುವವರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಜರಗಿಸಬೇಕಾಗಿದೆ ಎಂದು ಕರಾವಳಿ ಭಾಗದ ಟೆಕ್ಸ್‌ಟೈಲ್ಸ್, ರೆಡಿಮೇಡ್ಸ್ ಮತ್ತು ಫೂಟ್‌ವೇರ್ ಡೀಲರ್‍ಸ್ ಎಸೋಸಿಯೆಶನ್  ಮಂಗಳೂರು ಪೋಲಿಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಒಂದೇ ಕುಂಟುಂಬದಿಂದ ಹಲವೆಡೆ ಸರಣಿ ಕಳ್ಳತನ ಶಂಕೆ | ಕರಾವಳಿ ಟೆಕ್ಸ್‌ ಟೈಲ್‌ ಎಸೋಸಿಯೇಶನ್‌ನಿಂದ ಪೊಲೀಸರಿಗೆ ದೂರು |"

Leave a comment

Your email address will not be published.


*