ಕರಾವಳಿ ಭಾಗದ ಎಲ್ಲಾ ಟೆಕ್ಸ್‌ಟೈಲ್ಸ್ ಅಂಗಡಿಗಳಲ್ಲಿ ಬಟ್ಟೆ ಕಳ್ಳತನ ಹಾಗೂ ಗ್ರಾಹಕರ ಬ್ಯಾಗ್‌ನಿಂದ ಮತ್ತು ಮೈಯಲ್ಲಿರುವ ಆಭರಣಗಳ ಕಳ್ಳತನ ಆಗಿರುವ ಹಿನ್ನಲೆಯಿಂದ ಕರಾವಳಿ ಟೆಕ್ಸ್‌ಟೈಲ್ಸ್, ರೆಡಿಮೇಡ್ಸ್ ಮತ್ತು ಫೂಟ್‌ವೇರ್ ಡೀಲರ್‍ಸ್ ಎಸೋಸಿಯೆಶನ್ ವತಿಯಿಂದ ಎಸೋಸಿಯೇಶನ್ ಅಧ್ಯಕ್ಷ , ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ನೇತೃತ್ವದಲ್ಲಿ ಮಂಗಳೂರು ಪೋಲಿಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಹಲವು ಟೆಕ್ಸ್‌ಟೈಲ್ಸ್ ಅಂಗಡಿಗಳಲ್ಲಿ ಕಳ್ಳತನ ನಡೆದಿರುವುದೆಲ್ಲವೂ ಸಿ.ಸಿ ಟಿ.ವಿ ಪೂಟೇಜ್‌ನಲ್ಲಿ ದಾಖಲಾಗಿದ್ದು, ಇದನ್ನು ಪ್ರತ್ಯೇಕ ಕಳ್ಳತನವೆಂದು ಭಾವಿಸಿದ್ದೆವು. ಈ ಬಗ್ಗೆ ಎಲ್ಲೆಡೆಯೂ ಕೂಲಂಕುಶವಾಗಿ ಪರಿಶೀಲನೆ ಮಾಡಿದಾಗ ಒಂದೇ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಮೂಡಿದೆ.ಸುಮಾರು 30 ವರ್ಷಗಳಿಂದ ಕಳ್ಳತನ ಮಾಡುವುದೇ ಇವರ ಚಟುವಟಿಕಯಾಗಿದೆ ಎಂಬುದೂ ಈಗ ಸಂದೇಹಕ್ಕೆ ಎಡೆಮಾಡಿದೆ. ಆದುದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಳ್ಳತನ ಮಾಡುವವರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಜರಗಿಸಬೇಕಾಗಿದೆ ಎಂದು ಕರಾವಳಿ ಭಾಗದ ಟೆಕ್ಸ್‌ಟೈಲ್ಸ್, ರೆಡಿಮೇಡ್ಸ್ ಮತ್ತು ಫೂಟ್‌ವೇರ್ ಡೀಲರ್‍ಸ್ ಎಸೋಸಿಯೆಶನ್ ಮಂಗಳೂರು ಪೋಲಿಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…