ಕರ್ಮ ಸಿದ್ಧಾಂತ | ಮನುಷ್ಯ ಯಾವುದಕ್ಕೂ ಕರ್ತನಲ್ಲ | ಅವರವರ ಜನ್ಮಾಂತರ ಕರ್ಮಗಳೇ ಫಲಿತಗಳಿಗೆ ಕಾರಣ |

December 12, 2023
11:49 AM

ಧರ್ಮರಾಜನು ಭೀಷ್ಮನಿಗೆ ಹೇಳುತ್ತಾನೆ – ಎಷ್ಟೋ ಧರ್ಮ(Dharma) ಸೂಕ್ಮಗಳನ್ನು ನನಗೆ ತಿಳಿಸಿ ಕೊಟ್ಟಿದ್ದೀರಿ. ಆದರೆ ಬಂಧುಗಳನ್ನೆಲ್ಲಾ ಕೊಲ್ಲಿಸಿದ್ದರಿಂದ ನನ್ನ ಮನಸ್ಸು ಅಶಾಂತಿಯಿಂದ  ಇದೆ. ಈ ಎಲ್ಲಾ ಅನರ್ಥಗಳಿಗೂ ದುರ್ಯೋಧನನೇ(Dhuryodhana) ಕಾರಣನಾದನಲ್ಲ ತಾತಾ! . ಆಗ ಭೀಷ್ಮ(Bhishma) ಹೇಳುತ್ತಾರೆ :- ವತ್ಸಾ ಧರ್ಮನಂದನಾ, ಮನುಷ್ಯ(Human) ಯಾವುದಕ್ಕೂ ಕರ್ತನಲ್ಲ. ಅವರವರ ಜನ್ಮಾಂತರ ಕರ್ಮಗಳೇ ಫಲಿತಗಳಿಗೆ ಕಾರಣ. ಕಾರ್ಯ ಕಾರಣ ಸಂಬಂಧ ಸೂತ್ರವನ್ನು ಮರೆಯಬೇಡ. ಇದಕ್ಕೆ ನಿದರ್ಶನವಾಗಿ ಒಂದು ಕಥೆ ಹೇಳುತ್ತೇನೆ ಕೇಳು-

Advertisement
Advertisement
Advertisement

ಒಮ್ಮೆ ಒಬ್ಬ ಬ್ರಾಹ್ಮಣ ಬಾಲಕನು ಹಾವು ಕಚ್ಚಿ ಮೃತಪಟ್ಟನು. ಆ ಬಾಲಕನ ತಾಯಿ ಶವದ ಬಳಿ ಕುಳಿತು ವಿಲಪಿಸುತ್ತಿರುತ್ತಾಳೆ. ಆಗ ಒಬ್ಬ ಬೇಟೆಗಾರನು ಬಳಿ ಬಂದು, ವಿಷಯ ತಿಳಿದುಕೊಂಡು ಹೋಗಿ ಹಾವನ್ನು ಹುಡುಕಿ ಹಿಡಿದು ತಂದು ಆ ತಾಯಿಗೆ ಹೇಳುತ್ತಾನೆ, ಇದೇ ನಿನ್ನ ಮಗನನ್ನು ಕಚ್ಚಿಕೊಂದ ಸರ್ಪ. ನಿನ್ನ ಕೋಪ ತೀರುವವರೆಗೂ ಇದನ್ನು ಹೊಡೆದು ಕೊಲ್ಲು. ತಾಯಿ ಹೇಳುತ್ತಾಳೆ, ಅದನ್ನು ಕೊಂದರೇನು ಲಾಭ? ನನ್ನ ಮಗ ಬದುಕಿ ಬರುತ್ತಾನೆಯೇ?

Advertisement

ಬೇಟೆಗಾರ- ಸರಿ ಹಾಗಾದರೆ ನಾನೇ ಈ ಸರ್ಪವನ್ನು ಕೊಲ್ಲುತ್ತೇನೆ.

ಆಗ ಸರ್ಪ ಹೇಳುತ್ತದೆ, ನನಗೇನೂ ಬಾಲಕನ ಮೇಲೆ ದ್ವೇಷವಿಲ್ಲ, ರೋಷಾವೇಷಗಳಿಂದ ನಾನು ಕಚ್ಚಲಿಲ್ಲ, ಕಾಕತಾಳೀಯವಾಗಿ ನನ್ನ ಸ್ವಭಾವಕ್ಕನುಗುಣವಾಗಿ ಕಚ್ಚಿದೆ. ಅದೇ ನೆಪವಾಗಿ ಮೃತ್ಯುವು ಅವನನ್ನು ಕೊಂದಿತು. ಇದರಲ್ಲಿ ನನ್ನ ಪ್ರಸಕ್ತಿ ಏನೂ ಇಲ್ಲ. ನಾನು ನಿಮಿತ್ತ ಮಾತ್ರನು. ಯಜ್ಞ ಕುಂಡದಲ್ಲಿ ಉರಿಯುವ ನಿರ್ಜೀವವಾದ ಕಟ್ಟಿಗೆಗೆ ಹೇಗೆ ಯಜ್ಞ ಪುಣ್ಯವು ಬರುವುದಿಲ್ಲವೋ ಹಾಗೆಯೇ ನನಗೆ ಇದರ ಪಾಪವು ಅಂಟುವುದಿಲ್ಲ, ಇದರ ಪಾಪವು ಮೃತ್ಯುವಿನದು ಎನ್ನುತ್ತದೆ.

Advertisement

ಈ ರೀತಿ ಧರ್ಮದ ಬಗ್ಗೆ ಚರ್ಚೆ ಮಾಡುವಾಗ ಮೃತ್ಯುವು ಪ್ರತ್ಯಕ್ಷವಾಗಿ, ಅಮ್ಮಾ ನಾನು ಕಾಲನ ದಾಸ . ನಾನು ಕಾಲಕ್ಕನುಗುಣವಾಗಿ ಮಾಡಲೇಬೇಕಾದ ನನ್ನ ಕರ್ತವ್ಯವನ್ನು ಮಾಡಿದ್ದೇ‌ನಷ್ಟೇ. ಇದು ಪಾಪ ಹೇಗಾಗುತ್ತದೆ? ಹಾಗೇನಾದರೂ ಇದ್ದರೆ ಆ ಪಾಪವು ಕಾಲನದು ಎಂದು ಹೇಳಿತು.

ಇದನ್ನು ಕೇಳಿ ಕಾಲನು ಪ್ರತ್ಯಕ್ಷವಾಗಿ ಅಮ್ಮಾ! ಈ ಬಾಲಕನ ಮರಣಕ್ಕೆ ನಾನಾಗಲೀ, ಮೃತ್ಯುವಾಗಲೀ ಅಥವಾ ಹಾವಾಗಲೀ ಕಾರಣವಲ್ಲ. ನಾವು ಕೇವಲ ನಿಮಿತ್ತ ಮಾತ್ರರು. ಆಸಕ್ತಿ ರಹಿತವಾಗಿ ನಮ್ಮ ಕರ್ಮ ಮಾಡಿದ್ದೇವೆ. ಆಸಕ್ತಿ ರಹಿತ ಕರ್ಮವಾದ್ದರಿಂದ ನಮಗಾರಿಗೂ ಇದರ ಪಾಪ ಅನ್ವಯಿಸುವುದಿಲ್ಲ. ಸತ್ಯವಾದ ಕಾರಣ ನಿನ್ನ ಮತ್ತು ಆ ಬಾಲಕನ ಪೂರ್ವಾರ್ಜಿತ ಕರ್ಮ ಫಲ. ಆ ಕರ್ಮ ಫಲದ ಪ್ರಕಾರವೇ ಎಲ್ಲ ಘಟನೆಗಳು ನಡೆಯುತ್ತವೆ ಎಂದು ಹೇಳಿ ಕಾಲನು ಅದೃಶ್ಯವಾದನು.

Advertisement

ಈ ಕಥೆಯನ್ನು ಹೇಳಿದ ಭೀಷ್ಮನು, ಆದ್ದರಿಂದ ಧರ್ಮನಂದನಾ, ಎಲ್ಲದಕ್ಕೂ ನಾನೇ ಕಾರಣ, ದುರ್ಯೋಧನನೇ ಕಾರಣ ಎಂದುಕೊಳ್ಳ ಬೇಡ. ನಿಜವಾದ ಕಾರಣ ಅವರವರ ಪೂರ್ವ ಕರ್ಮ ಫಲಗಳೇ. ನೀನು ಕೇವಲ ನಿಮಿತ್ತ ಮಾತ್ರನು. ಅನಾಸಕ್ತಿ ಇಂದ ನಿನ್ನ ವಿದ್ಯುಕ್ತ ಕ್ಷಾತ್ರಧರ್ಮವನ್ನು ಮಾಡಿದೆ. ಅಷ್ಟೆ.

ಆದ್ದರಿಂದ ಈ ಕುರುಕ್ಷೇತ್ರ ಸಂಗ್ರಾಮದ ಯಾವುದೇ ಪಾಪ ಕರ್ಮಗಳು ನಿನಗೆ ಅನ್ವಯಿಸುವುದಿಲ್ಲ. ದುರ್ಯೋಧನನೂ ನಿಮಿತ್ತ ಮಾತ್ರವೇ ಆದರೂ ಹಲವಾರು ಕಾರ್ಯಗಳನ್ನು ಆಸಕ್ತಿಯಿಂದ ಇಚ್ಛಾಪೂರ್ವಕವಾಗಿ ಮಾಡಿರುವನಾದ್ದರಿಂದ ಅವನು ಆ ಕರ್ಮಗಳ ಪಾಪ ಫಲವನ್ನು ಮುಂದೆ ಜನ್ಮ ತಳೆದು ಅನುಭವಿಸಲೇ ಬೇಕಾಗುತ್ತದೆ. ಕಾರ್ಯ ಕಾರಣ ಸಿದ್ಧಾಂತವೇ ಕರ್ಮ ಸಿದ್ಧಾಂತವು. ಇದನ್ನು ತಿಳಿದು ಯಾವುದೇ ಕರ್ಮವನ್ನು, ಅನಾಸಕ್ತನಾಗಿ ಸಮರ್ಪಣಾ ಭಾವದಿಂದ ಮಾಡು ಮತ್ತು ಅನವರತವಾಗಿ ಆ ಭಗವಂತನ ನಾಮ ಸ್ಮರಣೆಯಿಂದ ಧನ್ಯನಾಗು. ಈ ರೀತಿ ನುಡಿದು, ಭೀಷ್ಮನು ಕಣ್ಣು ಮುಚ್ಚಿ ಧ್ಯಾನಾಸಕ್ತನಾದನು.

Advertisement

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror