ಕಬ್ಬಿನ ಬೆಳೆಯಲ್ಲಿ ಕಣ್ಣುಗಳು ಚಿಗುರದೇ ಇರುವುದಕ್ಕೆ ಹಲವಾರು ಕಾರಣಗಳು | ನಾಟಿ ಹಾಗೂ ಕಳೆ ನಿರ್ವಹಣೆ ಕ್ರಮಗಳನ್ನು ವೈಜ್ಞಾನಿಕವಾಗಿ ಅನುಸರಿಸಿ

August 9, 2024
2:48 PM

ಕಬ್ಬು.. ನಮ್ಮ ರಾಜ್ಯದ ವಾಣಿಜ್ಯ ಬೆಳೆ. ಬೆಳೆಗಾರರಿಗೆ ಮಾರಟ ಕುರಿತು ನೂರಾರು ಸಮಸ್ಯೆ ಇದ್ದರು.. ಕಬ್ಬು ಬೆಳೆ ಬೆಳೆಯುವುದನ್ನು ಮಾತ್ರ ಬಿಟ್ಟಿಲ್ಲ. ಕೇವಲ ಅದೊಂದೇ ಸಮಸ್ಯೆಯಾದರೆ ತೊಂದರೆ ಇಲ್ಲ. ಅದಕ್ಕೆ ತಗಲುವ ರೋಗಗಳು ನೂರಾರು.  ಅದರಲ್ಲಿ ಕಬ್ಬಿನ ಬೆಳೆಯಲ್ಲಿ ಕಣ್ಣುಗಳು ಚಿಗುರದೇ ಇರೋದು. ಇದಕ್ಕೆ ಪ್ರಮುಖವಾಗಿ ಅಹವು ಕಾರಣಗಳಿವೆ. ಅದರಲ್ಲಿ ಮೊದಲನೆಯದಾಗಿ ಕೀಟಗಳ ಬಾದೆಯಿಂದ ಅದರಲ್ಲೂ ಮುಖ್ಯವಾಗಿ ಗಣಿಕೆ ಕೊರಕ ಹುಳುವಿನಿಂದ, ಎರಡನೆಯದಾಗಿ ಮಧ್ಯಾಂತರ ಬರದಿಂದ ಮತ್ತು ನಂತರ ರಾಸಾಯನಿಕ ಗೊಬ್ಬರ ಪೂರೈಕೆ, ಮೂರನೆಯದಾಗಿ ಸಮಯಕ್ಕ ಸರಿಯಾಗಿ ಹಾಗೂ ಸಿಪಾರಸ್ಸಿನ ಪ್ರಕಾರ ಬೆಳೆ ಪ್ರಚೋದಕಗಳ ಬಳಕೆ ಮಾಡದೇ ಇರುವಂತಹ ಸಮಯದಲ್ಲಿ ಸಾಮಾನ್ಯವಾಗಿ ಕಬ್ಬಿನ ಮೇಲಿನ ಕಣ್ಣುಗಳು ಚಿಗುರುತ್ತವೆ.

Advertisement
Advertisement
Advertisement

ಇತ್ತಿಚಿನ ವರ್ಷಗಳಲ್ಲಿ ಕಬ್ಬಿನ ಬೆಳೆಯಲ್ಲಿ ರೈತರು ಬೆಳೆ ಪ್ರಚೋದಕಗಳನ್ನು ಬಳಕೆ ಮಾಡುವುದು ವೈಜ್ಞಾನಿಕವಾಗಿ ಸಿಪಾರಸಿನಂತೆ ಮತ್ತು ಸಮಯಕ್ಕೆ ಸರಿಯಾಗಿ ಉಪಯೋಗಿಸಿದರೆ ಉತ್ತಮ, ಇದರಿಂದ ಯಾವುದೇ ದುಷ್ಪರಿಣಾಮವಿಲ್ಲದೆ , ಉತ್ತಮ ಇಳುವರಿ ಪಡೆಯಬಹುದು. ಕಾರಣ ಕಬ್ಬಿನಲ್ಲಿ ನಾಟಿ ಅವಧಿಯಿಂದ ನಾಲ್ಕು ತಿಂಗಳವರೆಗೆ ಪ್ರಚೋದಕಗಳನ್ನು ಸಿಂಪರಣೆ ಮಾಡುವುದು ಉತ್ತಮ, ಏಕೆಂದರೆ ಕಬ್ಬು ಮೊಳಕೆ ಬರುವುದು ಹಾಗೂ ಮರಿ ಸಂಖ್ಯೆ ಬರುವುದು ಹೆಚ್ಚಾಗಿ ಇರುತ್ತದೆ. ಜಮೀನಿನ ಮೇಲೆ ಹೆಚ್ಚಾಗಿ ಗಣಿಕೆಗಳು ಅಭಿವೃದ್ಧಿ ಇರುವುದಿಲ್ಲ, ಈ ಅವಧಿಯಲ್ಲಿ ಇತರೆ ಬೇಸಾಯ ಕ್ರಮಗಳನ್ನು ಸರಿಯಾದ ಸಮಯಕ್ಕೆ ಮತ್ತೆ ಸರಿಯಾದ ರೀತಿಯಲ್ಲಿ ಅನುಸರಿಸಿ, ಬೆಳೆ ಪ್ರಚೋದಕಗಳನ್ನು ಸಿಂಪರಣೆ ಮಾಡುವುದರಿಂದ ಕಬ್ಬಿನ ಬೆಳೆಯಲ್ಲಿ ತ್ವರಿತಗತಿಯಲ್ಲಿ ಸಂಖ್ಯಾಭಿವೃದ್ದಿ ಹಾಗೂ ಬೆಳವಣಿಗೆ ಪ್ರಗತಿಯಾಗುವುದು, ವೈಜ್ಞಾನಿಕ ಪದ್ಧತಿ, ಇದರಿಂದ ಮುಂದಿನ ದಿನಗಳಲ್ಲಿ ಗಣಿಕಗಳ ಗಾತ್ರ ಮತ್ತು ಬೆಳವಣಿಗೆ ಹೆಚ್ಚಿಸಬಹುದು. ಆದರೆ ತಡವಾಗಿ ಸಿಂಪರಣೆ ಮಾಡುವುದರಿಂದ ಗಣಿಕೆ ಜೊತಗೆ ಕಣ್ಣುಗಳು ಅಭಿವೃದ್ಧಿ ಆಗುವುದರಿಂದ ಸಿಂಪರಣೆ ಕೈಗೊಂಡಾಗ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಬೆಳೆಯುವ ಬೆಳೆಯಲ್ಲಿ ಕಬ್ಬಿನ ಕಣ್ಣುಗಳು ಮೊಳಕೆ ಬರುವ ಸಾಧ್ಯತೆ ಹೆಚ್ಚು ಇರುತ್ತದೆ.

Advertisement

ರೈತಬಾಂಧವರು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೇಸಾಯ ಕ್ರಮಗಳನ್ನು ಕೈಗೊಂಡರೆ ಉತ್ತಮ ಇಳುವರಿ ಪಡೆಯಬಹುದು.

  • ಉತ್ತಮ ಗುಣಮಟ್ಟದ ಭೂಮಿ ತಯಾರಿ
  • ಉತ್ತಮ ಗುಣಮಟ್ಟದ ಹಾಗೂ 7-8 ತಿಂಗಳ ಅವಧಿಯ ನಾಟಿ ಕಬ್ಬಿನಿಂದ ಆಯ್ಕೆ ಮಾಡಿದ ಬೀಜ /ತಯಾರಿಸಿದ ಸಸಿ ಉಪಯೋಗ
  • ಬೀಜೋಪಚಾರ ಮಾಡುವುದು
  •  ಹವಾಮಾನ ಬದಲಾವಣೆ ತಕ್ಕಂತೆ ನೀರು ನಿರ್ವಹಣೆ
  • ವೈಜ್ಞಾನಿಕವಾಗಿ ಹಾಗೂ ಸಿಪಾರಸ್ಸಿನ ಪ್ರಕಾರ ಸಮಯಕ್ಕೆ ಸರಿಯಾಗಿ ಪೋಷಕಾಂಶಗಳ ನಿರ್ವಹಣೆ.
  • ಸಮಯಾನುಸಾರವಾಗಿ ಕಳೆ ನಿರ್ವಹಣೆ
  • ಸಮಯಾನುಸಾರವಾಗಿ ಕೀಟ ಮತ್ತು ರೋಗಗಳ ನಿಯಂತ್ರಣ, ಬೆಳೆ ಪ್ರಚೋದಕಗಳ ಹಾಗೂ ಪೋಷಕಾಂಶಗಳ ಸಿಂಪರಣೆ.\
  • ಸಾವಯವ ಗೊಬ್ಬರ ಬಳಕೆ
  • ಕಬ್ಬಿನ ತಳಿಗಳ ಅವಧಿ ಅನುಸಾರ ಕಟಾವು ನಿರ್ವಹಣೆ.
  • ಭೂಮಿ ಫಲವತ್ತತೆ ಹೆಚ್ಚಿಸುವುದು
  • ಬೆಳೆ ಪರಿವರ್ತನೆ
  • ಜೈವಿಕ ಗೊಬ್ಬರ ಬಳಕೆ
  • ಅಂತರ ಬೆಳೆಗಳನ್ನು ಬೆಳೆದು ಆದಾಯ ಪ್ರಮಾಣ ಹೆಚ್ಚು ಮಾಡುವುದು
  • ಕ್ಷೇತ್ರವಾರು ಸಿಪಾರಸ್ಸಿನಂತೆ ವಾತಾವರಣ ಹೊಂದಿಕೊಳ್ಳುವ ಕಬ್ಬಿನ ತಳಿಗಳ ಉಪಯೋಗ
    ನಾಟಿ ಹಾಗೂ ಕಳೆ ನಿರ್ವಹಣೆ ಕ್ರಮಗಳನ್ನು ವೈಜ್ಞಾನಿಕವಾಗಿ ಅನುಸರಿಸಿ, ಹೆಚ್ಚು ಇಳುವರಿ ಮತ್ತು ಹೆಚ್ಚು ಆದಾಯ ಪಡೆಯಬಹುದು

ಮೂಲ: Social Media

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror