ಬರಗಾಲ(Drought) ಎಂಬುದು ನೂರಾರು ವರ್ಷಗಳಿಂದ ಹಿಂದೆ ಇತ್ತು. ಈಗಲೂ ಕೂಡ ಇದೆ ಬರಗಾಲ ಪರಿಸ್ಥಿತಿ ರೈತರಿಗೆ(farmer) ಹೊಸದಲ್ಲ. ಆದರೆ ಅಂದು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಅಥವಾ ಎದುರಿಸುವ ಶಕ್ತಿಯನ್ನು ರೈತರು ಹೊಂದಿದ್ದರು, ಇಂದು ರೈತರು ಹೆಚ್ಚು ಬೆಳೆ ಬೆಳೆಯುವ ಭರಾಟೆಯಲ್ಲಿ ರೈತ ಹವಾಮಾನ ವೈಪರೀತ್ಯ(Weather extremes) ಮತ್ತು ಮಾರುಕಟ್ಟೆ ಏರು ಪೇರುಗಳನ್ನು ಸಹಿಸಿಕೊಳ್ಳಲಾಗದೇ ರೈತ ಹತಾಶನಾಗಿ ಆತ್ಮಹತ್ಯೆಗೆ(suicide) ಶರಣಾಗುವ ಸ್ಥಿತಿಗೆ ಬಂದಿದ್ದಾನೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.
ಮಾದನಬಾವಿ ಗ್ರಾಮದಲ್ಲಿ ಶ್ರೀ ಗವಿಸಿದ್ದೇಶ್ವರ ಸೇವಾ ಸಮಿತಿ ಟ್ರಸ್ಟ್ ನ ಹಳ್ಳಿ ಕಟ್ಟೆಮನೆ ದೊಡ್ಡಕಲ್ಲುಕಟ್ಟೆ ಮಾದನಬಾವಿ ಹಮ್ಮಿಕೊಂಡಿದ್ದ ಪ್ರಕೃತಿ ವೈಫಲ್ಯದ ಸಮನ್ಯಯ ಸಾಂಗತ್ಯ ಕೃಷಿ ಎಂಬ ಶೀರ್ಷಿಕೆಯಡಿ ಅ. 25 ರಿಂದ 27ರವರೆಗೆ ಹಮ್ಮಿಕೊಂಡಿರುವ ರಾಜ್ಯ ದಸರಾ ಬನ್ನಿ ಕೃಷಿ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಅನೇಕ ವೈಜ್ಞಾನಿಕ ತಂತ್ರಗಳನ್ನು ಅಳವಡಿಸಿಕೊಂಡಿದ್ದರೂ, ಬರಗಾಲ ಬಂದಿದೆ. ಒಟ್ಟಾರೆಯಾಗಿ ದೇಶಕ್ಕೆ ಅನ್ನ ಕೊಡುವ ಧಾವಂತದಲ್ಲಿ ಹೆಚ್ಚು ಬೆಳೆದರೆ ಹಣವಂತರಾಗುತ್ತಾರೆ ಎಂಬ ಭ್ರಮೆಯಲ್ಲಿ ರೈತರು ಸಾಲಬಾಧೆಯ ಸುಳಿಗೆ ಸಿಲುಕಿ ಕಷ್ಟ ಅನುಭವಿಸುಂತಾಗಿದೆ.
ಹಿಂದಿನ ಕಾಲದಲ್ಲಿ ಬರಗಾಲದಲ್ಲೂ ಸಾವಯವ ಮತ್ತು ಸ್ವಾವಲಂಬಿ ಕೃಷಿ ಪದ್ದತಿಗಳ ಮೂಲಕ ರೈತರು ಸರ್ಕಾರದಿಂದ ಯಾವುದೇ ಸಹಾಯ ಬೇಡದೆ ಜೀವನ ನಡೆಸುತ್ತಿದ್ದರು ಆದರೆ ಇಂದಿನ ಬರಗಾಲ ಪ್ರತಿಯೊಂದಕ್ಕೂ ಸರ್ಕಾರದ ಸಹಾಯ ಬೇಡುವ ಪರಿಸ್ಥಿತಿಯಲ್ಲಿ ರೈತರಿದ್ದಾರೆ ಎಂದು ಹೇಳಿದರು.
ಇಂದಿನ ಬರಗಾಲ ಪರಿಸ್ಥಿತಿಗೆ ರೈತರು ಕಾರಣರೋ ಸರ್ಕಾರ ಮತ್ತು ಜನ ಕಾರಣರೋ ಎಂದು ಗಂಭೀರ ಚಿಂತನೆ ಮಾಡಬೇಕಿದೆ. ಅದಕ್ಕೆ ಕಾರಣ ಮನುಷ್ಯ ಅತೀ ದುರಾಸೆಗೆ ಬಲಿಯಾಗಿರುವುದು. ಅದಕ್ಕಾಗಿ ಜಲ ಸಂಪನ್ಮೂಲಗಳು, ಕೃಷಿ ಭೂಮಿ, ಪರಿಸರ ಕಾಡು ಎಲ್ಲವನ್ನೂ ಮನುಷ್ಯ ಹಾಳು ಮಾಡುತ್ತಿದ್ದಾನೆ ಇದರ ಪರಿಣಾಮ ಕೂಡ ಮನುಷ್ಯನೆ ಅನುಭವಿಸಬೇಕಾಗಿದೆ ಎಂದು ಹೇಳಿದರು.
Drought existed hundreds of years ago and still exists. Drought situation is not new to farmers but then farmers had the power to effectively handle or face the drought situation. Today, in the rush to grow more crops, farmers are unable to bear the extreme weather and market pressure. Karnataka State Farmers Union State President H.R. Basavarajappa said.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…