Advertisement
MIRROR FOCUS

ಶಿಕ್ಷಣ ಸಚಿವರ ತವರಲ್ಲೇ ಸರ್ಕಾರಿ ಶಾಲೆಗಿಲ್ಲ ಸರಿಯಾದ ಕಟ್ಟಡ | ಮರದ ಕೆಳಗೆ, ಅಡುಗೆ ಕೋಣೆಯೇ ಇಲ್ಲಿ ತರಗತಿ |

Share

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯ ಶಾಲೆಯ ಕರುಣಾಜನಕ  ಕಥೆ ಇದು. ಸ್ವಾತಂತ್ರ್ಯ ಬಂದು 76 ವರ್ಷ ಕಳೆಯುತ್ತಾ ಬಂದರೂ ಇಂದಿಗೂ ಎಷ್ಟೋ ಸರಕಾರಿ ಶಾಲೆಗಳಿಗೆ ಸರಿಯಾದ ಕಟ್ಟಡ ಇಲ್ಲ. ಮರದ ಕೆಳಗೆ, ಸಮುದಾಯ ಭವನದ ಅಡುಗೆ ಕೋಣೆಯಲ್ಲಿ ಮಕ್ಕಳು ಪಾಠ ಕೇಳುವಂತಾಗಿದೆ. ಅಷ್ಟಕ್ಕೂ ಇದು ಯಾವುದೋ ಹಳ್ಳಿಯ ಮೂಲೆಯಲ್ಲಿರುವ ಶಾಲೆಯಲ್ಲ, ಬದಲಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆ.

Advertisement
Advertisement

ಶಿವಮೊಗ್ಗ ಸ್ಮಾರ್ಟ್ ಸಿಟಿ ನಗರದ ವ್ಯಾಪ್ತಿಯಲ್ಲಿ ಹಳೇ ಮಂಡ್ಲಿಯ ಪಂಪ್ ಹೌಸ್ ಪಕ್ಕದಲ್ಲಿರುವ ಮರಳಯ್ಯನ ಮಠ ಇದೆ. ಈ ಮಠದ ಸಮೂದಾಯ ಭವನ ಮತ್ತು ಆವರಣದಲ್ಲಿ ಸರ್ಕಾರಿ ಶಾಲೆ ನಡೆಸಲಾಗುತ್ತಿದೆ. ಈ ಮಠದ ಪಕ್ಕದಲ್ಲೇ ವೀರಶೈವ ಲಿಂಗಾಯತ ಸಮಾಜದ ಸ್ಮಶಾನ. ಇದರ ಪಕ್ಕದಲ್ಲೇ ಮಠದ ಆವರಣದಲ್ಲಿ ನ್ಯೂ ಮಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ತರಗತಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

Advertisement

ಕೇವಲ ಒಂದೇ ಒಂದು ಸಮೂದಾಯ ಭವನ. ತಿಂಗಳಿಗೆ ಆರು ಸಾವಿರ ಬಾಡಿಗೆ ಶಿಕ್ಷಣ ಇಲಾಖೆ ನೀಡುತ್ತದೆ. 4, 5 ಮತ್ತು 6 ಮೂರು ಕ್ಲಾಸ್ ಗಳು ಇಲ್ಲಿಯೇ ನಡೆಯುತ್ತಿವೆ. ಬಡ ಸರಕಾರಿ ಶಾಲೆಯ ಮಕ್ಕಳು ಅಂದರೆ ಯಾರು ತಾನೇ ಗಮನ ಹರಿಸುತ್ತಾರೆ. 4 ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಕೊಠಡಿ ಮರದ ಕೆಳಗೆ, 5ನೇ ಕ್ಲಾಸ್ ಸಮುದಾಯ ಭವನದ ಅಡುಗೆ ಕೋಣೆಯ ತಗಡಿನ ಶೆಡ್ ನಲ್ಲಿ, 6ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಸಮುದಾಯ ಭವನದಲ್ಲಿ ಹೀಗೆ ಮೂರು ಕ್ಲಾಸ್ ನ ತರಗತಿಗಳ ಪಾಠ ಇಲ್ಲಿ ನಡೆಯುತ್ತಿದೆ. ನಿತ್ಯ ಸ್ಮಶಾನ ಪಕ್ಕದಲ್ಲೇ ಮತ್ತು ಮರ ಮತ್ತು ತಗಡಿನ ಶೆಡ್ ಕೆಳಗೆ ಮಕ್ಕಳು ಅಪಾಯದಲ್ಲಿ ಮಕ್ಕಳು ನಿತ್ಯ ಪಾಠ ಕೇಳಬೇಕು. ಕಳೆದ ಎರಡು ವರ್ಷಗಳಿಂದ ಕೊಠಡಿ ಇಲ್ಲದೇ ಮೂರು ತರಗತಿ ಮಕ್ಕಳು ನಿತ್ಯ ಪರದಾಡುತ್ತಿದ್ದಾರೆ.

ಪೋಷಕರು ಸ್ಮಶಾನ ಪಕ್ಕದಲ್ಲಿ ಮಕ್ಕಳನ್ನು ಕಳುಹಿಸಲು ಭಯಪಡುತ್ತಿದ್ದಾರೆ. ಈಗಾಗಲೇ 50ಕ್ಕೂ ಹೆಚ್ಚು ಮಕ್ಕಳ ಟಿಸಿಯನ್ನು ಪಡೆದುಕೊಂಡು ಬೇರೆ ಶಾಲೆಗೆ ಪೋಷಕರು ಸೇರಿದ್ದಾರೆ. ಸರಕಾರಿ ಶಾಲೆ ಉಳಿಸಬೇಕು. ಮಕ್ಕಳಿಗೆ ಉತ್ತಮ ಸೌಲಭ್ಯ ನೀಡಬೇಕೆಂದು ಸಿಎಂ ನಿಂದ ಹಿಡಿದು ಶಿಕ್ಷಣ ಸಚಿವರು ಸೇರಿದಂತೆ ಎಲ್ಲರೂ ಹೇಳುತ್ತಾರೆ. ಅವರ ಮಾತಿನಲ್ಲಿರುವ ಕಾಳಜಿಯು ಅವರ ಕೃತಿಯಲ್ಲಿ ಕಂಡು ಬರುವುದಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಈ ಬಡ ದಲಿತ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸದೇ ಇರುವುದು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೇಸರ ಮೂಡಿಸಿದೆ.

Advertisement

ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ 175 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದರು. ಶಾಲೆಯಲ್ಲಿ 8 ಶಿಕ್ಷಕರು ವರ್ಗವಿದೆ. ಆದರೆ ಸಮಸ್ಯೆ ಇರೋದು ಕಟ್ಟಡದ್ದು. ಕಳೆದ 3 ವರ್ಷಗಳ‌ ಹಿಂದೆ ಸುರಿದ ಅತಿಯಾದ ಮಳೆಗೆ ಕೊಠಡಿಗಳು ಬಿದ್ದು ಹೋಗಿದೆ. ಬಿದ್ದು ಹೋಗಿರುವ ಕೊಠಡಿ ಬದಲಿಗೆ ಹೊಸ ಕೊಠಡಿಗಳ ಭಾಗ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ 8 ಹೊಸ ಕೊಠಡಿ ಕಾಮಗಾರಿ ನಡೆಯುತ್ತಿದೆ. ಆದರೆ ಒಂದೂವರೆ ವರ್ಷದಿಂದ ಅದು ಇನ್ನೂ ಪೂರ್ಣಗೊಂಡಿಲ್ಲ. ಸರಕಾರ ಬದಲಾಗುತ್ತಿದ್ದಂತೆ ಅನುದಾನ ಕುಂಠಿತಗೊಂಡಿದೆ. ಗುತ್ತಿಗೆದಾರ ಅನುದಾನ ಬಿಡುಗಡೆಯಾಗದ ಹಿನ್ನಲೆಯಲ್ಲಿ ಕೊಠಡಿ ಕಾಮಗಾರಿ ಕೆಲಸ ನಿಲ್ಲಿಸಿದ್ದಾರೆ. ನಿತ್ಯ ಮೂಲ ಶಾಲೆಯಿಂದ ತಾತ್ಕಾಲಿಕ ದೇವಸ್ಥಾನದ ಆವರಣದ ತಾತ್ಕಾಲಿಕ ಕೊಠಡಿಗಳಿಗೆ ಮೂರು ತರಗತಿಯ ಮಕ್ಕಳು ಓಡಾಡಬೇಕಿದೆ.

ಮದ್ಯಾಹ್ನ ಬಿಸಿಯೂಟಕ್ಕೆ ಮೂಲ ಶಾಲೆಗೆ ಬಂದು ಊಟ ಮಾಡಿಕೊಂಡು ಮತ್ತೆ ತಾತ್ಕಾಲಿಕ ಕೊಠಡಿಗಳಿಗೆ ಮಕ್ಕಳು ತೆರಳಬೇಕು. ಶಿವವಮೊಗ್ಗ ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಇರುವುದರಿಂದ ಮಕ್ಕಳು ನಿತ್ಯ ಅಪಾಯದಲ್ಲೇ ಅಂದಾಜು 1 ಕಿ.ಮೀ ನಡೆದುಕೊಂಡು ಹೋಗಿ ವಾಪಸ್ ಬರುತ್ತಿದ್ದಾರೆ. ಶಾಲಾ ಮಕ್ಕಳಿಗೆ ಹೆಚ್ಚು ಕಮ್ಮಿ ಆದರೆ ಯಾರು ಹೊಣೆ ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಈ ಸರಕಾರಿ ಶಾಲೆಯಲ್ಲಿ ಹೆಚ್ಚಾಗಿ ಬಡವರು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ದುಬಾರಿ ದುನಿಯಾದಲ್ಲಿ ಬಡವರು, ದಲಿತ ಕೂಲಿ ಕಾರ್ಮಿಕರ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಓದುವ ಸಾಮರ್ಥ್ಯ ಇಲ್ಲ. ಹೀಗಾಗಿ ಇರುವ ವ್ಯವಸ್ಥೆಯಲ್ಲೇ ವಿಧಿಯಿಲ್ಲದೇ ವಿದ್ಯಾಭ್ಯಾಸ ಮುಂದುವರಿಸಿದ್ಧಾರೆ.

Advertisement

ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲೇ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಶಾಲಾ ಕೊಠಡಿ ಸಮಸ್ಯೆಗೆ ಪರಿಹಾರ ಸಿಕಿಲ್ಲ. ಮಕ್ಕಳು ನಿತ್ಯ ಅಂಗೈಯಲ್ಲಿ ಜೀವ ಹಿಡಿದುಕೊಂಡೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸರಕಾರಿ ಬಡ ಮಕ್ಕಳ ನೋವು ಕೂಗು ಯಾರಿಗೆ ಕೇಳಿಸದೇ ಇರುವುದು ಮಾತ್ರ ವಿಪರ್ಯಾಸ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

10 hours ago

ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.

11 hours ago

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

19 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

19 hours ago