ಕಳೆದ ಬಾರಿ ಮುಂಗಾರು(Mansoon) ಕೈಕೊಟ್ಟ ಹಿನ್ನೆಲೆ ರಾಜ್ಯಾದ್ಯಂತ ಭೀಕರ ಬರ(Drought) ತಲೆದೋರಿದೆ. ಕೆಲವು ಕಡೆ ಪೂರ್ವ ಮುಂಗಾರು ಮಳೆ(Pre Mansoon rain) ಸುರಿದ ಕಾರಣ ರೈತರು(Farmers) ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಕೆಲ ಜಿಲ್ಲೆಗಳಲ್ಲಿ ಮಳೆಯ(Rain) ಸುಳಿವೇ ಇಲ್ಲ. ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಅದರಲ್ಲೂ ರೈತರ ಪಾಡು ಹೇಳತೀರದು. ಹಾವೇರಿ ಜಿಲ್ಲೆಯಲ್ಲಿ ಅಡಿಕೆ ಬೆಳೆ(Areca crop) ನಂಬಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ತಲೆದೋರಿದೆ. ಕಳೆದ ವರ್ಷ ಬಂದಪ್ಪಳಿಸಿದ ಭೀಕರ ಬರಗಾಲದಿಂದ(Drought Effect) ಅಡಿಕೆ ತೋಟಗಳು ಒಣಗಿವೆ. ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾಗಿದೆ. ಇತ್ತ ಹಾವೇರಿ, ರಾಣೆಬೆನ್ನೂರು ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ.
ಹಾವೇರಿ ಕೃಷಿಕರಿಗೆ ಮೊದಲಿನಿಂದಲೂ ಅಡಿಕೆ ಬೆಳೆ ಬೆಳೆಯುವ ಆಸೆ. ಅದರಲ್ಲೂ ಶಿರಸಿ, ಬನವಾಸಿ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿನ ಅಡಿಕೆ ತೋಟಗಳನ್ನು ನೋಡುತ್ತಿದ್ದ ಅವರಿಗೆ ತಮ್ಮ ಜಿಲ್ಲೆಯಲ್ಲೂ ಅಡಿಕೆ ಬೆಳೆಯುವ ಹಂಬಲವಿತ್ತು. ಅದರಲ್ಲೂ ಅಡಿಕೆಗೆ ಚಿನ್ನದ ಬೆಲೆ ಬಂದ ಮೇಲಂತೂ ಹಾವೇರಿಯ ರೈತರು ಅಡಿಕೆ ಗಿಡಗಳನ್ನು ನೆಟ್ಟು ತೋಟ ಮಾಡಲಾರಂಭಿಸಿದರು. ಈ ಪ್ರಯತ್ನದಲ್ಲಿ ಸಾಕಷ್ಟು ಮಂದಿ ಯಶಸ್ವಿಯೂ ಆದರು. ತೋಟ ಮಾಡಿ ಆರು ವರ್ಷಕ್ಕೆ ಇಳುವರಿ ಪಡೆಯಲಾರಂಭಿಸಿದರು. 8,000 ಹೆಕ್ಟೇರ್ ಇದ್ದ ಅಡಿಕೆ ತೋಟಗಳ ವಿಸ್ತೀರ್ಣ ಮೂರು ವರ್ಷಗಳಲ್ಲೇ 14 ಸಾವಿರ ಹೆಕ್ಟೇರ್ ತಲುಪಿತ್ತು.
ರಾಜ್ಯ ಸರ್ಕಾರ ಮಲೆನಾಡು ಅಭಿವೃದ್ಧಿ ನಿಗಮಕ್ಕೆ ಬರುವ ಹಾವೇರಿ ಜಿಲ್ಲೆಯ ಹಿರೇಕೆರೂರು, ಶಿಗ್ಗಾಂವ್, ಸವಣೂರು, ಬ್ಯಾಡಗಿ ಮತ್ತು ಹಾನಗಲ್ ತಾಲೂಕುಗಳ ರೈತರಿಗೆ ನರೇಗಾ ಯೋಜನೆಯಲ್ಲಿ ಹಣ ನೀಡಿತು. ಆದರೆ ರಾಣೆಬೆನ್ನೂರು ತಾಲೂಕುಗಳ ಅಡಿಕೆ ರೈತರಿಗೆ ಬಯಲುಸೀಮೆ ಎಂಬ ಕಾರಣಕ್ಕೆ ಸಬ್ಸಿಡಿ ಸಿಗಲಿಲ್ಲ. ಹೀಗಿದ್ದರೂ ತಾಲೂಕಿನಲ್ಲಿ ಅಡಿಕೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಕೊಳವೆ ಬಾವಿ ನೀರಿನ ಲಭ್ಯತೆ ಮೇಲೆ ತಮಗಿರುವ ಜಮೀನಿನಲ್ಲಿ ಎಕರೆಗೆ 600-700 ಅಡಿಕೆ ಗಿಡ ನೆಟ್ಟು ಬೆಳೆಸಿ ಈ ವರ್ಷ ಕೈತುಂಬಾ ಫಸಲಿನ ಕನಸು ಕಂಡಿದ್ದರು.
ಆದರೆ, ಬರ ಬಂದಪ್ಪಳಿಸಿ ತೋಟಗಳು ಒಣಗಿವೆ. ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾಗಿದೆ. ಆರಂಭದಲ್ಲಿ ಅಕ್ಕಪಕ್ಕದ ಜಮೀನುಗಳ ರೈತರ ಕೊಳವೆಬಾವಿ ಸಹಾಯದಿಂದ ನೀರುಣಿಸುತ್ತಿದ್ದರು. ಇದೀಗ ನೀರು ನೀಡುತ್ತಿರುವ ರೈತರ ಕೊಳವೆಬಾವಿಗಳಲ್ಲೇ ನೀರಿಲ್ಲ. ಹಾಗಾಗಿ, ಅವರು ತಮ್ಮ ಅಡಿಕೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…