Opinion

ಮಾಯಾಮೃಗ ಮಾಯಾಮೃಗ ಮುರಗ ವಧೆಯ (ಮರುವಾಸೆಯ) ಮಾಯಾಮೃಗ‌ | ಮಾಲಿನ್ಯ ರಹಿತ ಪರಿಸರ ಸ್ನೇಹಿ ಈ ಎತ್ತಿನ ಗಾಡಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಿನ್ನೆ ಕಾರ್ಯನಿಮಿತ್ತ ಮೃಗವಧೆಗೆ ಹೋಗಿದ್ದೆ.‌ ಮೃಗವಧೆಯ ರಾಜಬೀದಿಯಲ್ಲಿ ಎತ್ತಿನ ಗಾಡಿ(Bullock cart) ಹೋಗುತ್ತಿರುವುದನ್ನು ನೋಡಿ ಮೈ ರೋಮಾಂಚನವಾಯಿತು.‌ ಇದು ಕನಸೋ ನನಸೋ ಒಂದು ಕ್ಷಣ ಅರಿಯದಾಯಿತು. ಹೌದು ಇದು ನನಸು…. ಮಲೆನಾಡಿನ(Malenadu) ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಪ್ರತಿ ಜಮೀನ್ದಾರರ(Land lord) ಮನೆಯಲ್ಲೂ ಎತ್ತು, ಎತ್ತಿನ ಗಾಡಿ ಸ್ಥಾನ ಪಡೆದಿತ್ತು. ದೊಡ್ಡ ಎತ್ತಿನ ಜೋಡು ಮತ್ತು ಎತ್ತಿನ ಗಾಡಿ ಜಮೀನ್ದಾರರ ಪ್ರತಿಷ್ಠೆಯ(Status) ಸಂಕೇತವಾಗಿತ್ತು. ‌ ಜಮೀನ್ದಾರರ ಮನೆಯಲ್ಲಿ ಗಾಡಿ ಮತ್ತು ಎತ್ತಿನ ಜೋಡನ್ನ ಮೈಂಟೈನ್ ಮಾಡುವವ ಇವತ್ತಿನ ಕಂಪನಿಗಳ(Company) ನೌಕರರಲ್ಲಿ(Employee) ಸಿಇಒ ಕ್ಯಾಟಗರಿ ಸಂಬಳ ಸವಲತ್ತು ಗೌರವ ಪಡೆಯುತ್ತಿದ್ದ. ಗಾಡಿಯ ಆಕ್ಸಲ್ ಗೆ ಎಣ್ಣೆ ಹಾಕುವುದು‌. ಬಿರಿಕುಂಟೆ (Break) ನಿರ್ವಹಣೆ. ‌ನೊಗ, ನೊಗ ಎತ್ತಿನ ಭುಜಕ್ಕೆ ಏರಿಸಿ ಕೊರಳ ಪಟ್ಟಿ ಕೂಡಿಸೋದು. ಸದ್ದು ಮಾಡುತ್ತಾ ಎತ್ತಿನ ಗಾಡಿ ಚಲಿಸುವ ಪರಿ..

Advertisement

ಮಲೆನಾಡಿನಲ್ಲಿ ಬೈಕುಗಳು ಹೆಚ್ಚಾದ ಆರಂಭದಲ್ಲಿ ಮಲೆನಾಡಿನ ಮಣ್ಣು ರೋಡಿನಲ್ಲಿ ಎತ್ತಿನ ಗಾಡಿ ಚಕ್ರ ಹೋದ ಎಡ್ಜಿನಲ್ಲಿ ಬೈಕ್ ಸವಾರರು ಸರ್ಕಸ್ ನವರು ಹಗ್ಗದ ಮೇಲೆ ನಾಜೂಕಾಗಿ ನೆಡೆದಂತೆ ನೆಡೆಯಬೇಕಿತ್ತು. ಆಗ ಬೈಕ್ ಚಾಲನೆ ಮಾಡಿದವರಲ್ಲಿ ಮುಕ್ಕಾಲು ಪಾಲು ಬೈಕ್ ಸವಾರರು ಈ ಗಾಡಿ ರಸ್ತೆಯ ಓಣಿ ಎಡ್ಜ್ ನಲ್ಲಿ ಬ್ಯಾಲೆನ್ಸ್ ಮಾಡಲು ಹೋಗಿ ಬಿದ್ದಿರುತ್ತಾರೆ..!!

ಎತ್ತಿನ ಗಾಡಿ ಆಫ್ ರೋಡ್ ವೈಕಲ್.. ಕಾನು ಕೊರಕಲು ಎಲ್ಲೆಂದರಲ್ಲಿ ಎತ್ತಿನ ಗಾಡಿ ಸಾಗುತ್ತಿತ್ತು. ಈ ಅಗ್ಗಕ್ಕೆ ಮೂರು ಚಕ್ರದ ಗೂಡ್ಸ್ ಆಪೆ ರಿಕ್ಷಾ (ಪಿಯಾಜ್ಯೋ) ಬಂದ ಮೇಲೆ ಎತ್ತಿನ ಗಾಡಿ ಮೂಲೆಗೆ ಸರಿಯಲಾರಂಭಿಸಿತು. ಈಗ ನನಗೆ ತಿಳದ ಮಟ್ಟಿಗೆ ಇಡೀ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಚಾಲ್ತಿಯಲ್ಲಿರುವ ಸುಸ್ಥಿತಿಯ ಎತ್ತಿನ ಗಾಡಿ ಎಂದರೆ ಬಹುಶಃ ಇದೊಂದೇ ಯೇನೋ..? ಎತ್ತಿನ ಗಾಡಿ ಉಳಿದಿದ್ದರೆ ಒಂದಷ್ಟು ಹಳ್ಳಿ ಕಾರ್ ದೇವಣಿ ಅಮೃತ್ ಮಹಲ್ ಹೋರಿ ಗಳು ಉಳಿಯುತ್ತಿದ್ದವು.. ಎತ್ತಿನ ಗಾಡಿ ಉಳಿದಿದ್ದರೆ ವಿಶ್ವ ಕರ್ಮರ ಕುಲಮೆ ಉಳಿಯುತ್ತಿತ್ತು. ಎತ್ತಿನ ಗಾಡಿಯ ಹಳಿ ಪಟ್ಟಿ ಜೋಡಿಸುವುದು ಅತ್ಯಂತ ಕೌಶಲದ ಕಲೆ. ಈಗ ಈ ಕಲೆ ಗೊತ್ತಿರುವವರು ಮಲೆನಾಡಿನಲ್ಲಿ ಬೆರಳೆಣಿಕೆಯ ಮಂದಿ ಇರಬಹುದು. ‌ ಎತ್ತಿನ ಗಾಡಿ ಈ 2000ನೇ ಇಸವಿ ಈಚೆ ಹುಟ್ಟಿದ ಜನರೇಷನ್ ಗಳಿಗೆ ಗೊತ್ತೇ ಇಲ್ಲ.

ನಮ್ಮ ಸಮಾಜ ಸರ್ಕಾರದ ಕೃಷಿ ಇಲಾಖೆ ಎತ್ತಿನ ಗಾಡಿ ಮತ್ತು ಎತ್ತಿನ ಗಾಡಿ ಉದ್ಯಮವನ್ನು ಉಳಿಸವ ಯೋಚನೆ ಮಾಡಬೇಕು. ಮಾಲಿನ್ಯ ರಹಿತ ಪರಿಸರ ಸ್ನೇಹಿ ಈ ಎತ್ತಿನ ಗಾಡಿ ಮಲೆನಾಡಿನ‌ ಅಂಟು ಮಣ್ಣಿಗೆ ಹೇಳಿ ಮಾಡಿಸಿದ ವಾಹನ.. ಯಾವುದಾದರೂ ಟ್ರಸ್ಟ್, ರೆಸಾರ್ಟ್, ಹೋಮ್ ಸ್ಟೇ ಯವರು ಈ ಎತ್ತಿನ ಗಾಡಿಗಳ ಸವಾರಿಯನ್ನು ಪ್ರವಾಸಿಗರಿಗೆ ಆಯೋಜನೆ ಪಡಿಸಿದರೆ ಮುಂದಿನ ಪೀಳಿಗೆಗೆ ಎತ್ತಿನ ಗಾಡಿ ಉಳಿಯಲು ಸಾಧ್ಯ.

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್

ದರ್ಶಿತ್‌ ಕೆ ಎಸ್‌, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌, ಬೆಳ್ಳಾರೆದರ್ಶಿತ್‌…

5 hours ago

ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…

7 hours ago

ಮೆಕ್ಕೆಜೋಳ ಸಮಾವೇಶ | ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಹಿತರಕ್ಷಣೆ

ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳ ಮತ್ತು ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕನಿಷ್ಠ…

7 hours ago

ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಪ್ರದೇಶ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಷೇಧ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳ ಘಾಟಿ ಕ್ಷೇತ್ರದ…

8 hours ago

ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು | ವಾಹನ ಸವಾರರಿಗೆ ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚನೆ

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಮಳೆ ಹಾಗು ದಟ್ಟ ಮಂಜು ಆವರಿಸಿದ…

8 hours ago

ತಾಳಮದ್ದಳೆ ಸಪ್ತಾಹ ಸಮಾರೋಪ | ಕುರಿಯ ಪ್ರಶಸ್ತಿ ಪ್ರದಾನ ಪ್ರಶಸ್ತಿ ಪಡೆವ ಕಲಾವಿದನ ಬದುಕು ಆದರ್ಶವಾಗಿರಬೇಕು

ಓರ್ವ ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ್ ದಿ.ಪೆರುವಡಿ ನಾರಾಯಣ ಭಟ್ಟರು…

8 hours ago