Opinion

ಇದು ಟೂಥ್‌ಪೇಸ್ಟ್‌ ಮಾತ್ರ ಅಲ್ಲ… ರೋಗಗಳೂ ಉಚಿತ ಕೊಡುಗೆ…!

Share

ಭಾರತಕ್ಕೆ ಬಂದ ಒಂದು ಮಲ್ಟಿ ನ್ಯಾಷನಲ್(Multi National) ಟೂತ್ಪೇಸ್ಟ್ ಕಂಪನಿಯು(Toothpaste company) ಉಪ್ಪು ಮತ್ತು ಇದ್ದಿಲುಗಳನ್ನು(salt and Charcoal) ಬಳಸಿ ಹಲ್ಲುಜ್ಜಿದರೆ ಅದರಿಂದ ವಸಡು ಮತ್ತು ಹಲ್ಲುಗಳು ಹಾಳಾಗುತ್ತವೆ ಎಂದು ಸುಳ್ಳನ್ನು ಪಸರಿಸಿತು. ಅದೇ ಕಂಪನಿ 2016ರಲ್ಲಿ ನಮ್ಮ ಪೇಸ್ಟ್ ನಲ್ಲಿ ಉಪ್ಪು ಇದೆ, ಇದ್ದಿಲು ಇದೆ ಎಂದು ಹೇಳುತ್ತಿದೆ..!. ಹಾಗಿದ್ದರೆ ಜನರಿಗೆ ಯಾವುದು ಬೇಕಾದ್ದು…?

Advertisement

ವಿದೇಶಗಳಲ್ಲಿ ಈ ಕಂಪನಿಗೆ “ಒಂದೇ ದೇಶದಲ್ಲಿ ಈ ರೀತಿ ವಿರುದ್ಧಗಳನ್ನು ತಿಳಿಸುತ್ತಿರುವುದಕ್ಕೆ ಅಲ್ಲಿನ ಜನ ರೊಚ್ಚಿಗೆದ್ದು ನಿಮ್ಮನ್ನೇಕೆ ದೇಶದಿಂದ ಹೊರ ಹಾಕುತ್ತಿಲ್ಲ, ಈಗಲೂ ಕೂಡ ನಿಮ್ಮ ಬ್ರಾಂಡ್ ಆ ದೇಶದ ನಂಬರ 1 ಆಗಿ ಹೇಗೆ ಉಳಿದಿದೆ” ಎಂದು ಪ್ರಶ್ನಿಸಿದಾಗ, ಆ ಕಂಪನಿ ಹೇಳುತ್ತದೆ “ಅಲ್ಲಿನ ಜನರಿಗೆ ಮೆದುಳಿಲ್ಲ, ಹೀಗಾಗಿ ಯಾವ ವಕೀಲರು, ರಾಜಕಾರಣಿಗಳು, ವಿದ್ಯಾವಂತರು, ನಮ್ಮ ವಿರುದ್ಧ ಅಲ್ಲಿ ಮಾತನಾಡುವುದಿಲ್ಲ. ಕೋರ್ಟಿಗೆ ಹೋಗುವುದಂತೂ ದೂರದ ಮಾತು. ಹೋದರೂ ನ್ಯಾಯ ಸಿಗಲು ದಶಕಗಳವರೆಗೆ ಕಾಯಬೇಕು!”

ಈ ಮೋಸ ಇಷ್ಟಕ್ಕೇ ನಿಲ್ಲುವುದಿಲ್ಲ..!? ಮುಂದುವರೆದ ರಾಷ್ಟ್ರ‍ಗಳಲ್ಲಿ ಟೂತ್ ಪೇಸ್ಟ್ ಮೇಲೆ ” ವಾರ್ನಿಂಗ್ : ಆರು ವರ್ಷದೊಳಗಿನ ಮಕ್ಕಳಿಗೆ ಕೊಡಬೇಡಿ, ಆಕಸ್ಮಾತ ಸಿಹಿಯೆಂದು ನುಂಗಿದರೆ ತಕ್ಷಣ ವಿಷ ಪರಿಣಿತ ಕೇಂದ್ರಕ್ಕೆ ಕರೆದೊಯ್ಯಿರಿ” ಎಂದು ಬರೆದಿರುತ್ತದೆ.

ಮಕ್ಕಳು ಪೇಸ್ಟ್ ನುಂಗಿದಾಗ ಡಾಕ್ಟರ್ ಬಳಿ ಹೋದರೆ ಉಪಯೋಗವಿಲ್ಲ. ವಿಷ ಪರಿಣಿತ ಕೇಂದ್ರಕ್ಕೇ ಹೋಗಬೇಕು. ಅಷ್ಟು ಕೆಟ್ಟ ವಿಷಗಳಿರುತ್ತವೆಯೆಂದು ತಯಾರಕರೇ ಒಪ್ಪಿಕೊಂಡಿದ್ದಾರೆ. ಆದರೆ ಅವೇ ವಸ್ತುಗಳನ್ನು ಹಾಕಿದ್ದರೂ, ಈ ವಾರ್ನಿಂಗ್ ಭಾರತದಲ್ಲಿ ಕಡ್ಡಾಯವಾಗಿಲ್ಲ! ಅವೇ ಕಂಪನಿಗಳು ಭಾರತದಲ್ಲಿ ಕೇವಲ ಒಂದು ಹಲ್ಲು ಬಂದೊಡನೆ ಟೂತ್ಪೇಸ್ಟ್ ಬಳಸಲು ಪ್ರಾರಂಭಿಸಿ ಎಂದು ಪ್ರಚಾರ ಮಾಡುತ್ತವೆ! ನಮ್ಮ ಮಕ್ಕಳು ಮಕ್ಕಳೇ ಅಲ್ಲವೇ? ಅವೂ ಬದುಕ ಬೇಡವೇ? ಸರ್ಕಾರಕ್ಕೆ ಅವರು ಮಕ್ಕಳಲ್ಲವಾಗಿರಬಹುದು, ನಮಗೆ? ಅವರಿಗೇನಾಗಬೇಕು? ಹಣ ಲೂಟಿ ಒಂದೇ ಉದ್ದೇಶ. ಅಲ್ಲ! ಖಂಡಿತವಾಗಿಯೂ ಇದೊಂದೇ ಉದ್ದೇಶವಲ್ಲ! 100ಕ್ಕೂ ಹೆಚ್ಚು ಬಗೆಯ ವಿಷ ವಸ್ತುಗಳನ್ನು ಟೂತ್ಪೇಸ್ಟ್ ಗಳಲ್ಲಿ ಇಂದು ಹಾಕಲಾಗುತ್ತಿದೆ. ‌

ಅವುಗಳಲ್ಲಿ ಇಲಿ ಪಾಷಾಣ ಫ್ಲೋರೈಡ್, ಕೀಟನಾಶಕ ಟ್ರೈಕ್ಲೋಸಾನ್, ಆಸ್ಪರ್ಟೆಮ, ಟೈಟಾನಿಯಂ ಡೈ ಆಕ್ಸೈಡ್, ಪಾಲಿ ಇಥಲಿನ್, ಡೈ ಇತನಾಲ್ ಅಮೈನ್, ಮುಂತಾದ ಕ್ಯಾನ್ಸರ್ ಕಾರಕ, ಥೈರಾಯಿಡ್, ಸಕ್ಕರೆ ಕಾಯಿಲೆ, ಬೊಜ್ಜು, ನರರೋಗಗಳು, ಲಿವರ್ ಮತ್ತು ಕಿಡ್ನಿ ತೊಂದರೆ ತರುವ ರಾಸಾಯನಿಕಗಳು ಪ್ರಮುಖವಾಗಿ ಇರುತ್ತವೆ.

ಒಂದು ಗ್ರಾಮ್ ಫ್ಲೋರೈಡ್ (ಇಲಿ ಪಾಶಾಣ) ಒಂದು ಮಗುವನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುತ್ತದೆ! ಈ ಕಂಪನಿಗಳು ಇಂಥ ಕೆಟ್ಟ ವಿಷಯಗಳನ್ನು ಏಕೆ ಟೂತ್ಪೇಸ್ಟ ಗಳಲ್ಲಿ ಹಾಕುತ್ತವೆ? ಎಂಬುದು ಬಹಳಷ್ಟು ಜನರ ಪ್ರಶ್ನೆ. ಇವೇ ಕಂಪನಿಗಳು ಮತ್ತೊಂದು ಹೆಸರಿನಲ್ಲಿ ತಯಾರಿಸುವ ಔಷಧಿಗಳಿಗೆ ವ್ಯಾಪಾರ ಬೇಕಲ್ಲ. ಕಾಯಿಲೆಗಳೇ ಇರದಿದ್ದರೆ ಅವರೇ ತಯಾರಿಸುವ ವೈದ್ಯಕೀಯ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತವೆ! ಯೋಚಿಸಿ. ಟೆಕ್ನಾಲಜಿ, ಆಧುನಿಕತೆ, ಇವುಗಳ ಗುಂಗಿನಲ್ಲಿ ನಮಗೇ ಗೊತ್ತಿಲ್ಲದೇ ನಾವು ಕಾಯಿಲೆಗೆ ತುತ್ತಾಗುತ್ತಿದ್ದೇವೆ.

ಪ್ರತಿಯೊಬ್ಬರೂ ಅಯೋಡೀನ್ ಯುಕ್ತ ಉಪ್ಪು ಬಳಸುತ್ತಿದ್ದರೂ ಥೈರಾಯ್ಡ್ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ವಿಪರೀತವಾಗಿದೆ. ಕ್ಯಾನ್ಸರ್, ಪಿಸಿಓಡಿ, ಸಂತಾನ ಹೀನತೆ, ಇವುಗಳು ಕೂಡ. ಈ ಕಾಯಿಲೆಗಳಿಗೂ ನಾವು ಬಳಸುತ್ತಿರುವ ಟೂತ್ಪೇಸ್ಟ್ ಗು ನೇರ ಸಂಬಂಧವಿದೆ! ಹಲ್ಲು ತಿಕ್ಕಲು ಹಲ್ಲುಪುಡಿಯೇ ಶ್ರೇಷ್ಠ. ಕೈಯಿಂದ ಉಜ್ಜಿದಾಗ ಗೊತ್ತಿಲ್ಲದೇ ವಸಡು ಉಜ್ಜುತ್ತೇವೆ.

ಹೀಗಾಗಿ ವಸಡು ಗಟ್ಟಿಯಾಗಿ, ಜೊತೆಗೆ ಹಲ್ಲು ಕೂಡ ಗಟ್ಟಿಯಾಗುತ್ತದೆ. ಆ ಪುಡಿಯಿಂದ ನಾಲಿಗೆ ತಿಕ್ಕಿದಾಗ ಊಟ ರುಚಿಸುತ್ತದೆ. ಬಾಯಿಯ ಮೇಲ್ಭಾಗ ಉಜ್ಜುವುದರಿಂದ ದೃಷ್ಟಿ ಉತ್ತಮಗೊಳ್ಳುತ್ತದೆ. ನಮ್ಮ ಹಿರಿಯರು ದಡ್ಡರೇನಲ್ಲ. ಶ್ರೇಷ್ಠ ಗಿಡಮೂಲಿಕೆಗಳಿಂದ ಮಾಡಿದ ಹಲ್ಲು ಪುಡಿಗಳು ನಮ್ಮಲ್ಲಿ ರೂಡಿಯಲ್ಲಿದ್ದವು. ಪರಕೀಯರ ದಾಳಿ ನಮ್ಮ ಆರೋಗ್ಯವನ್ನೂ ಹಾಳು ಮಾಡಿದೆ. ಅದನ್ನು ಮರುಗಳಿಕೆಯ ಪ್ರಯತ್ನವಾಗಿ ಮತ್ತೇ ಹಲ್ಲು ಪುಡಿ ಬಳಸುವ ಸಂಪ್ರದಾಯವನ್ನು ಪ್ರಾರಂಭಿಸೋಣ. ಟೂತ್ಪೇಸ್ಟ್ ನಲ್ಲಿರುವ ಇಲಿ ಪಾಷಾಣದ ದುಷ್ಪರಿಣಾಮಗಳ ಬಗ್ಗೆ ಕಿರು ವಿಡಿಯೋ ಕೂಡ ಇದೆ. ನೋಡಿ, ಇತರರಿಗೂ ಹಂಚಿ. ರಾಸಾಯನಿಕ ಮುಕ್ತ ಭಾರತ ನಮ್ಮ ಗುರಿಯಾಗಲಿ.

ಬರಹ :
ಡಾ. ಶ್ರೀಶೈಲ ಬದಾಮಿ
, M. Pharm., PhD ಧಾರವಾಡ

When the British came to India, they found a very civilized people here and realized that there was no other way but to lie and wipe out the culture and make this country Christian. People here used to brush their teeth daily. Nowhere in the world have they seen this practice! A multinational toothpaste company that came to India in 1916 spread the lie that brushing with salt and charcoal would damage the gums and teeth. In 2016, the same company is saying that our paste contains salt and charcoal!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ |14.04.2025 | ಕರಾವಳಿ ಕೆಲವು ಕಡೆ ಗುಡುಗು ಸಹಿತ ಮಳೆ | ಎ.19ರ ನಂತರ ಮಳೆಯ ಪ್ರಮಾಣ ತೀರಾ ಕಡಿಮೆ |

15.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

2 hours ago

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ

ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…

7 hours ago

ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ

ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…

9 hours ago

ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ

ಇಂದು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಘಗಳು…

9 hours ago

ಈ 5 ವಸ್ತು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಶ್ರೀಮಂತರಾಗುವುದು ಗ್ಯಾರಂಟಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

9 hours ago

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, ಶಿವಮೊಗ್ಗ, ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ…

16 hours ago