ಇದು ಅಂದು-ಇಂದಿನ ಲೆಕ್ಕಾಚಾರ | ಗತಕಾಲದ ವೈಭವಕ್ಕೆ ಇಂದಿನ ಐಶಾರಾಮಿ ಜೀವನ ಎಂದೂ ಸಮ ಆಗಲ್ಲ ಯಾಕೆ..?

December 4, 2023
11:30 AM
ಅಂದು ಹಾಗೂ ಇಂದಿನ ಬದುಕಿನ ಬಗ್ಗೆ ಎಂ ಡಿ ಪ್ರಧಾನಿ ಅವರು ಬರೆದ ಬರಹವೊಂದು ಇಲ್ಲಿದೆ...

ಅದೊಂದು ಕಾಲ ಇತ್ತು. ಸಾವದಾನ, ಸಮಧಾನ, ಸರಳತೆಯ ಬದುಕು(Simple Life) ಇತ್ತು. ದಿನಕಳೆದಂತೆ ಬದುಕುವ ರೀತಿ ಬದಲಾಗುತ್ತಾ ಹೋಯ್ತ. ಒಂದೋಳ್ಳೆ ರೀತಿಯಾಗಿ ಸಾಗುತಿದ್ದ ಜೀವನಕ್ಕೆ ಆಧುನಿಕರಣದ(Modernization) ಟಚ್‌ ಸಿಗುತ್ತಾ ಹೋಯ್ತು. ಹಳೆ ನೀರು ಕೊಚ್ಚಿ ಹೋಗಿ ಹೊಸ ನೀರು ಬಂತು. ಆದರೆ ಬದುಕು ಅದೇ. ಜೀವನ ಶೈಲಿ(Life Style) ಬದಲಾಯ್ತು. ಆದರೆ ಜೀವನ ಅದೇ.. ತಲತಲಾಂತರದಿಂದ ಬಂದ ನಮ್ಮ ಆಚರಣೆ ಬಿಟ್ಟು ಕೆಲವೊಂದು ಬದಲಾವಣೆಗಳು ನಮ್ಮ ಜೀವನದಲ್ಲಿ ಆದ್ರೂ ಅದರಿಂದ ಪ್ರಯೋಜನ ಶೂನ್ಯ..

Advertisement
Advertisement

ಹಾಗಿದ್ದರೆ ಅಂದು ಹೇಗಿತ್ತು…?

Advertisement

– ಹಳ್ಳದಲ್ಲಿ ಹರಿವ ನೀರಿಗೆ ಬಾಯಾಕಿ ಕುಡಿದಾಗ ನೆಗಡಿಯಾಗಲಿಲ್ಲ, ಇಂದು ಬಿಸ್ಲೇರಿ ನೀರು ಕುಡಿದಾಗ ಯಾಕೋ ಕೆಮ್ಮು ಬರುತ್ತಿದೆಯಲ್ಲ.
– ಮೈಲಿಗಟ್ಟಲೆ ಬರಿಗಾಲಿನಲ್ಲಿ ನಡೆದಾಗ ಸುಸ್ತಾಗಲಿಲ್ಲ, ಇಂದು ಬಸ್ಸಿನಲ್ಲಿ ಪ್ರಯಾಣಿಸುವಾಗ ಏಕೋ ‌ದಣಿವಾಗುತ್ತಿದೆಯಲ್ಲ.
– ಹಸುಕರುಗಳೆಲ್ಲ ಹಿತ್ತಲಬಾಗಲಲ್ಲಿ ಹಾಲುಕರೆದು ಅಂಬಾ ಎನ್ನುತ್ತಿದ್ದವಲ್ಲ, ಇಂದು ಮಕ್ಕಳಿಗೆ ಹಸುಗಳ ಚಿತ್ರವನ್ನು ಪುಸ್ತಕದಲ್ಲಿ ತೋರಿಸುವ ಪರಿಸ್ಥಿತಿಯಲ್ಲ.
– ತಂಗಳು ಮಜ್ಜಿಗೆ ಜೊತೆಗೆ ಮುದ್ದೆ ಕಿವುಚಿ ತಿಂದಾಗ ಹಸಿವು ಓಡಿತಲ್ಲ, ಇಂದು ವೈಭವದ ಕೈರುಚಿ ದರ್ಶಿನಿಗಳ ತಿನಿಸುಗಳೆಲ್ಲ ರುಚಿಗಷ್ಟೆ ಇವೆಯಲ್ಲ.
– ಅಟ್ಲಾಸ್ ಸೈಕಲ್ ದಿನವಿಡೀ ತುಳಿವಾಗ ರೋಗ ಹೆದಿರಿತಲ್ಲ, ಇಂದು ಐಶಾರಾಮಿ ಕಾರುಗಳಲ್ಲಿ ಬರುವವರೆಲ್ಲರಿಗೂ ಬಿಪಿ ಶುಗರ್ ಇದೆಯಲ್ಲಾ.
– ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಕಲಿತವರು ಗಟ್ಟಿ ಜೀವನ ಕಟ್ಟಿಕೊಂಡರಲ್ಲ, ಇಂದು ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಲಕ್ಷಗಟ್ಟಲೆ ಹಣ ವ್ಯಯಿಸಿ ಕಲಿತರೂ ಕೆಲಸವಿಲ್ಲವಲ್ಲ.

– ಸಣ್ಣಪುಟ್ಟ ರೋಗಗಳು ಬರುತ್ತಿದ್ದರೂ ಹೋಬಳಿ ತಾಲ್ಲೂಕಿಗೊಬ್ಬ ವೈದ್ಯರಿದ್ದರಲ್ಲ, ಇಂದು ಹೆಸರು ತಿಳಿಯದ ಅದೆಷ್ಟೋ ರೋಗರುಜುನೆಗಳು ಬಂದು ಬಡಾವಣೆಗೊಂದು ನರ್ಸಿಂಗ್ ಹೋಮ್ ತಲೆಯೆತ್ತುತ್ತಿವೆಯಲ್ಲ.
– ಎಂಬತ್ತು ಪೈಸೆ ಕೊಟ್ಟು ನೋಡಿದ ಸಿನಿಮಾ ಜೀವನಕ್ಕೆ ದಾರಿ ದೀಪವಾಗಿತ್ತಲ್ಲ, ಇಂದು ಸಾವಿರ ನೀಡಿ ಐನಾಕ್ಸ್ ಪಿವಿಆರ್ ಗಳಲ್ಲಿ ನೋಡಿದ ಸಿನಿಮಾದಿಂದ ಬದುಕು ಕಳೆದೋಯಿತಲ್ಲ.
– ಬೆರಳುಗಳ ಸಹಾಯದಿಂದ ಕಲಿತ ಗಣಿತ ವ್ಯಾಪಾರಕ್ಕೆ ಸಹಾಯ ಮಾಡಿತಲ್ಲ, ಕ್ಯಾಲ್ಕುಲೇಟರ್, ಐಪಾಡ್ ಗಳ ಉಪಯೋಗದಿಂದ ಕಲಿತ ಲೆಕ್ಕ ವ್ಯವಹಾರಕ್ಕೆ ಉಪಯೋಗವಾಗಲಿಲ್ಲವಲ್ಲ.
– ನಂಜನಗೂಡು ಹಲ್ಲುಪುಡಿ, ಲೈಫ್ ಬಾಯ್ ಸೋಪಿಗೆ ಸೌಂದರ್ಯ ಬೆದರಿ ಹೆಚ್ಚಿತಲ್ಲ, ಇಂದು ಡವ್ ಸೋಪು, ಫೇರ್ ಅಂಡ್ ಲವ್ಲಿಗೆ ಚರ್ಮ ಸುಕ್ಕುಗಟ್ಟಿತಲ್ಲ.
– ಗೆಡ್ಡೆ ಗೆಣಸು ಅಗೆದು ತಿನ್ನುತ್ತಿರುವಾಗ ಬಡತನವಿರಲಿಲ್ಲ, ಇಂದು ಬಂಗಾರ ಅಗೆದು ಮಾರಿದರೂ ಶ್ರೀಮಂತಿಕೆ ನಿಲ್ಲುತ್ತಿಲ್ಲವಲ್ಲ.
– ಬದುಕು ಕಟ್ಟಿಕೊಳ್ಳಲು ಜನಗಳೆಲ್ಲ ಪೇಟೆಯ ಕಡೆ ಮುಖ ಮಾಡಿದರಲ್ಲ, ಇಂದು ಜೀವ ಉಳಿಸಿಕೊಳ್ಳಲು ಅದ್ಯಾಕೋ ಜನ ಹಳ್ಳಿಗೆ ಬರುವವರಿದ್ದಾರಲ್ಲ ……..

Advertisement
ಬರಹ :
 ಎಂ .ಡಿ.ಪ್ರಧಾನಿ
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |
May 1, 2024
5:22 PM
by: The Rural Mirror ಸುದ್ದಿಜಾಲ
ಸ್ವಚ್ಛತೆ ಬಗ್ಗೆ ಒಂದು ಅನಿಸಿಕೆ | ಎಲ್ಲಾ ಯಕ್ಷಗಾನ ಮೇಳದವರಿಗೆ ಒಂದು ವಿನಂತಿ | ಚುನಾವಣೆಯ ಡ್ಯೂಟಿಯವರಿಗೂ ಸ್ವಚ್ಛತೆ ಬಗ್ಗೆ ತರಬೇತಿ ನೀಡಿ |
May 1, 2024
4:55 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror