Advertisement
Opinion

ಆಧುನಿಕ ಅಡುಗೆ ಮನೆಗಳು ತರುವ ಮೂರು ಕಾಯಿಲೆಗಳು!? | ನಿಂತು ಅಡುಗೆ ಮಾಡಿದ್ರೆ ಮಹಿಳೆಯರಿಗೆ ಕಾಡಲಿದೆ ಈ ಕಾಯಿಲೆಗಳು..

Share

ಹಳೆಯ ಕಾಲದ ಆರೋಗ್ಯಕರ(Health) ಅಡುಗೆ ಮನೆಗಳು(Kitchen) ಈಗ ಮೂಲೆ ಸೇರಿವೆ. ನಿಂತು ಕೊಂಡೇ ಅಡುಗೆ ಮಾಡುವ ಪದ್ಧತಿ ಈಗ ಹಳ್ಳಿಗಳಲ್ಲೂ(Village) ಜಾರಿಯಲ್ಲಿದೆ. ಹೊಸ ಮನೆ ಕಟ್ಟಿಸುವವರು ಅದೇ ರೀತಿಯ ಅಡುಗೆ ಮನೆಯನ್ನು ಹೊಂದುತ್ತಿದ್ದಾರೆ. ಮಹಿಳೆಯರ ಆರೋಗ್ಯಕ್ಕೆ ನಿಂತುಕೊಂಡು ಅಡುಗೆ ಮಾಡುವುದು ಅಥವಾ ಕುಳಿತು ಅಡುಗೆ(Cooking) ಮಾಡುವುದು ಯಾವುದು ಒಳ್ಳೆಯದು ಎಂಬ ಪರಿಕಲ್ಪನೆ ಯಾರಿಗೂ ಇಲ್ಲ!

Advertisement
Advertisement
Advertisement

ನಮ್ಮ ಹಿರಿಯರು ಸೊಂಟದ ಭಾಗದ ಆರೋಗ್ಯಕ್ಕೆ ಅತ್ಯಂತ ಮಹತ್ವ ಕೊಟ್ಟಿದ್ದರು. ಏಕೆಂದರೆ ಅಲ್ಲಿ ಸಂತಾನ ಸೃಷ್ಟಿಯ ಅಂಗಾಂಗಗಳಿವೆ. ಕುಳಿತು ಅಡುಗೆ ಮಾಡುವಾಗ ಹಲವಾರು ಬಾರಿ ಅಡುಗೆಗೆ ಬೇಕಾಗಿರುವ ವಸ್ತುಗಳನ್ನು ತೆಗೆದುಕೊಳ್ಳಲು ಅವಳು ಎದ್ದು ಕುಳಿತುಕೊಳ್ಳಬೇಕಾಗುತ್ತದೆ. ಹೀಗೆ ಮಾಡುವುದರಿಂದ ಗೊತ್ತಿಲ್ಲದೆಯೇ ಅವಳು ವ್ಯಾಯಾಮ(Exercise) ಮಾಡಿರುತ್ತಾಳೆ! ಅವಳ ಗರ್ಭಕೋಶ(Womb) ಅತ್ಯಂತ ಬಲಿಷ್ಠವಾಗುತ್ತದೆ. ಬಲಿಷ್ಠ ಮಕ್ಕಳು ಜನಿಸುತ್ತಾರೆ! ಕಾರಣ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಮೊಬೈಲ್ ಬಿಡಿಸಿ, ಅಡುಗೆ ಕೆಲಸ ಹಚ್ಚಿ!. ಈ ಕೆಳಗೆ ತಿಳಿಸಿದ ಅಡುಗೆ ಮನೆಯಿಂದ ಬರುವ ಇತರ ಕಾಯಿಲೆಗಳಿಂದಲೂ ಅವರು ತಪ್ಪಿಸಿಕೊಳ್ಳುತ್ತಾರೆ.

Advertisement

ನಿಂತು ಅಡುಗೆ ಮಾಡುವ ಮಹಿಳೆಯರಿಗೆ ಈ ಅದೃಷ್ಟವಿಲ್ಲ! ಹೀಗಾಗಿ ಅವರ ಗರ್ಭಕೋಶ ಪ್ರತಿನಿತ್ಯ ಅಶಕ್ತವಾಗುತ್ತಾ ಹೋಗುತ್ತದೆ. ಗರ್ಭಕೋಶವನ್ನು ಹಿಡಿದಿರುವ ಮಾಂಸ ಖಂಡಗಳು ಅಶಕ್ತವಾದಾಗ, ಅದನ್ನು ಹಿಡಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಇಂದಿನ ಮಹಿಳೆಯರಲ್ಲಿ ಗರ್ಭಕೋಶ 50ರ ವಯಸ್ಸಿನ ಸುಮಾರಿಗೆ ಜಾರಿ ಬೀಳುತ್ತದೆ!.

ನಮ್ಮ ಅಜ್ಜಿಯ ಕಾಲದಲ್ಲಿ ಈ ಕಾಯಿಲೆ ಯಾರಿಗೂ ಇರಲಿಲ್ಲ. ತಾಯಿಯ ಕಾಲದಲ್ಲಿ ಕೆಲವರಲ್ಲಿ ಪ್ರಾರಂಭವಾಗಿದ್ದು, ಇತ್ತೀಚೆಗೇ ವ್ಯಾಪಕವಾಗಿದೆ! ಆಗ ಅತಿಯಾದ ರಕ್ತಸ್ರಾವವಾಗುತ್ತದೆ. ಅದನ್ನು ನಿಯಂತ್ರಿಸಲು ಅಲೋಪತಿ ವೈದ್ಯರ ಬಳಿ ಔಷಧಿಗಳಿಲ್ಲ ಅವರು ಈಗಾಗಲೇ ಮಕ್ಕಳಾಗಿವೆ, ಗರ್ಭಕೋಶಕ್ಕೆ ಏನು ಕೆಲಸ? ಎಂದು ಅದನ್ನು ಕತ್ತರಿಸಿ ಬಿಸಾಕುತ್ತಾರೆ! ಈ ಆಪರೇಷನ್ ಗೆ ಹಿಷ್ಟರಕ್ತಮಿ ಎಂದು ಕರೆಯುತ್ತಾರೆ. ಗರ್ಭಕೋಶ ತೆಗೆದ ನಂತರ ಆಗುವ ದುಷ್ಪರಿಣಾಮಗಳನ್ನು ಆ ವೈದ್ಯರು ತಿಳಿಸುವುದಿಲ್ಲ.

Advertisement

ತನ್ನ ಗರ್ಭಕೋಶವನ್ನು ಉಳಿಸಿಕೊಳ್ಳಬೇಕೆಂಬ ಮಹಿಳೆಯರು ಉತ್ತಮ ಯೋಗ ಮತ್ತು ನಿಸರ್ಗ ಚಿಕಿತ್ಸಾ ವೈದ್ಯರನ್ನು ಕಂಡರೆ, ಅವರು ಆಪರೇಷನ್ ಅವಶ್ಯಕತೆ ಇಲ್ಲದೆಯೇ ಆ ರಕ್ತಸ್ರಾವವನ್ನು ಖಂಡಿತವಾಗಿಯೂ ನಿಲ್ಲಿಸಿ, ಚಿಕಿತ್ಸೆ ನೀಡುತ್ತಾರೆ. ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ. ಉತ್ತಮ ಆಯುರ್ವೇದ ಆಸ್ಪತ್ರೆಗಳನ್ನು ಕೂಡ ಸಂಪರ್ಕಿಸಬಹುದು. ಇದು ಉತ್ತಮ ದಾರಿ.

ಇದುವರೆಗೂ ನಿಂತು ಕೊಂಡೆ ಅಡುಗೆ ಮಾಡಿದ ನಿಮಗೆ ಇನ್ನೂ ಗರ್ಭಕೋಶ ಜಾರಿಲ್ಲ. ಜಾರುವುದು ಬೇಡ, ಎಂದರೆ ಈಗಿನಿಂದಲೇ ಕುಳಿತುಕೊಂಡು ಅಡುಗೆ ಮಾಡಿ. ಗ್ಯಾಸ್ ಸಿಲಿಂಡರ್ ಅನ್ನು ಅಡುಗೆ ಮನೆಯಲ್ಲಿ ತಗ್ಗು ಮಾಡಿ ಅದರಲ್ಲಿಡಿ. ಅಡುಗೆ ಮನೆಯ ಕಟ್ಟೆ ಕಟ್ಟಿಸಿಬಿಟ್ಟಿದ್ದೇವೆ, ಅದನ್ನು ಒಡೆಯುವುದು ಹೇಗೆ? ಬಾಡಿಗೆ ಮನೆ? ಎಂದು ಚಿಂತಿಸುತ್ತಿದ್ದೀರಾ, ಹಾಗಿದ್ದರೆ ಪ್ರತಿನಿತ್ಯ ಯೋಗ ಮಾಡಿ.

Advertisement

ನಿಂತು ಕೊಂಡೇ ಅಡುಗೆ ಮಾಡುವ ಮಹಿಳೆಯರಿಗೆ ಸಾಮಾನ್ಯವಾಗಿ ಬರುವ ಮತ್ತೊಂದು ಕಾಯಿಲೆ ವೆರಿಕೋಸ್ ವೇನ್. ಕಾಲಿನಿಂದ ರಕ್ತ ಹೃದಯಕ್ಕೆ ಹರಿಯಲು ನಿಂತುಕೊಂಡಾಗ ಸುಲಭವಾಗಿರುವುದಿಲ್ಲ. ಹೀಗಾಗಿ ಅದು ಅಲ್ಲಿ ಹೆಪ್ಪುಗಟ್ಟುತ್ತದೆ. ವಿಪರೀತ ನೋವು, ಹೃದಯದ ಕಾಯಿಲೆಗಳಿಗೂ ಇದು ಕಾರಣವಾಗುತ್ತದೆ! ಈ ಕಾಯಿಲೆಯೂ ನಿಮಗೆ ಇನ್ನೂ ಬಂದಿಲ್ಲವಾದರೆ, ಪ್ರತಿನಿತ್ಯ ಯೋಗ ಮಾಡಿ, ಈ ಕಾಯಿಲೆಯಿಂದ ದೂರವಿರಿ. ಈ ಕಾಯಿಲೆಯಲ್ಲಿ ನಿಸರ್ಗ ಚಿಕಿತ್ಸೆ , ಯೋಗ ಮತ್ತು ಆಯುರ್ವೇದ ವೈದ್ಯರಿಂದ ಆಪರೇಷನ್ ಇಲ್ಲದೆಯೇ ಪರಿಹಾರ ಪಡೆಯಿರಿ,

ನಿಮ್ಮ ಅಡುಗೆ ಮನೆಯ ಗ್ಯಾಸ್ ಒಲೆ, ಕಟ್ಟೆ ಮೇಲಿದ್ದರೂ ಕೂಡ, ನೀವು ಹೆಚ್ಚುವುದು, ಮುಂತಾದ ಕೆಲಸಗಳನ್ನು ಕುಳಿತೇ ಮಾಡಿ. ನಂತರ ನಿಂತು ಅಡುಗೆ ಮಾಡಿ, ಸ್ವಲ್ಪವಾದರೂ ಅನುಕೂಲವಾಗುತ್ತದೆ. ಅಡುಗೆ ಮನೆಯಲ್ಲಿ ಕಾಳು, ಎಣ್ಣೆ, ದಿನಸಿ, ಉಪ್ಪಿನಕಾಯಿ, ಚಟ್ನಿಪುಡಿ, ಎಲ್ಲವನ್ನೂ ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬಿಡುವ ಪದ್ಧತಿ ಸಾಮಾನ್ಯವಾಗಿದೆ. ಈ ಪ್ಲಾಸ್ಟಿಕ್ ಎಲ್ಲಾ ಆಹಾರ ವಸ್ತುಗಳಲ್ಲಿಯೂ ಬೆರೆಯುತ್ತದೆ! ಅದನ್ನು ಹೊರತೆಗೆಯಲು ಉಪಾಯಗಳಿಲ್ಲ! ಈ ಆಹಾರಗಳನ್ನು ಪ್ರತಿನಿತ್ಯ ತಿಂದಾಗ ಕ್ಯಾನ್ಸರ್, ಸಂತಾನ ಹೀನತೆ, ಹೃದಯದ ಕಾಯಿಲೆಗಳು, ಸಕ್ಕರೆ ಕಾಯಿಲೆ, ಬೊಜ್ಜು, ನರರೋಗಗಳು, ಅಲ್ಸರ್, ಮುಂತಾದ ಕಾಯಿಲೆಗಳು ಬರುತ್ತವೆ!

Advertisement

ಅಡುಗೆ ಮನೆಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಹೊಂದಿದ ಮನೆಗಳನ್ನು ವಿಜ್ಞಾನಿಗಳು ಕ್ಯಾನ್ಸರ್ ಮನೆ ಎಂದು ಕರೆಯುತ್ತಾರೆ! ಅಂತಹ ಮನೆಗಳಿಂದ ಗಂಡು – ಹೆಣ್ಣು ತರುವುದು ಕೂಡ ಅಪಾಯಕಾರಿ. ವಿಚಿತ್ರವೆಂದರೆ, ನಮ್ಮ ಅಡುಗೆಮನೆಯಿಂದಲೇ ಹೆಚ್ಚು ಕಾಯಿಲೆಗಳು ಹರಡುತ್ತವೆ. ಅವು ನಮಗಷ್ಟೇ ಅಲ್ಲ *ನಮ್ಮ ಮುಂದಿನ ಪೀಳಿಗೆಗಳನ್ನು ಪೀಡಿಸುತ್ತವೆ ಇದನ್ನು ತಡೆಯುವ ಅವಶ್ಯಕತೆ ಇಂದು ಬಹಳಷ್ಟು ಇದೆ. ಈ ಕುರಿತ ನಮ್ಮ ಇತರ ವಿಡಿಯೋಗಳನ್ನು ನೋಡಿ ವಿವರ ಪಡೆಯಿರಿ.

ಕಾರಣ ನಿಮ್ಮ ಅಡುಗೆಮನೆಯನ್ನು ನೈಸರ್ಗಿಕವಾಗಿಸಿಕೊಳ್ಳಿ. ಪ್ಲಾಸ್ಟಿಕ್ ಬದಲಿಗೆ ಗಾಜು, ಸ್ಟೀಲ್, ಮಣ್ಣಿನ ಮಡಿಕೆಗಳು, ಹತ್ತಿ ಬಟ್ಟೆ, ಪೇಪರ್, ಪಿಂಗಾಣಿ, ಮುಂತಾದವುಗಳನ್ನು ಬಳಸಿ. ಪ್ಲಾಸ್ಟಿಕ್ ಚೀಲದ ಬದಲಿಗೆ ಬಟ್ಟೆ ಚೀಲ ಬಳಸಿ. ನಿಮ್ಮ ಮುಂದಿನ ಪೀಳಿಗೆಗಳನ್ನು ಉಳಿಸುವತ್ತ ನಿಮ್ಮ ಲಕ್ಷ್ಯ ಇರಲಿ.

Advertisement

ಕಾರಣ ಮಹಿಳೆಯರೇ ಎಚ್ಚರ..!  : ನೀವು ಅಡಿಗೆಗೆ ಬಳಸುವ ವಸ್ತುಗಳು, ನಿಮ್ಮ ಕುಟುಂಬವನ್ನು ಹೊರಗೆ ಕರೆದು ಕೊಂಡು ಹೋಗಿ ತಿನ್ನಿಸುವ ತಿಂಡಿ-ತಿನಿಸು- ಆಹಾರಗಳೇ ಕಾಯಿಲೆಗಳಿಗೆ ಮೂಲ. ಒಂದು ಅರ್ಥದಲ್ಲಿ ನೀವೇ ಸೃಷ್ಟಿಕರ್ತರು, ಏಕೆಂದರೇ ಹುಟ್ಟಿಸುವವರು ನೀವೇ, ನೀವಿಲ್ಲದೇ ಸೃಷ್ಟಿ ಇಲ್ಲ. ನಿಮ್ಮ ಕುಟುಂಬವನ್ನು ಉಳಿಸುವ – ಅಳಿಸುವ ಜವಾಬ್ದಾರಿಯನ್ನು ದೇವರು ನಿಮಗೇ ಬಿಟ್ಟಿದ್ದಾನೆ. ಮನೆಯಿಂದ ಹೊರಗಡೆ ತಿಂದಿ, ಊಟ, ಚಾಟ್, ಮಾಡುವುದನ್ನು ನಿಲ್ಲಿಸಿದರೆ ಸುಮಾರು 90 ಪ್ರತಿಶತ ಕಾಯಿಲೆಗಳನ್ನು ನೀವು ತಡೆಯಬಹುದು. ಅದನ್ನು ಮಾಡಿ. ಮನೆಯ ತಿಂಡಿಯ ಹೊರತು ಮಕ್ಕಳಿಗೆ ಹೊರಗಿನ ತಿಂಡಿ ಯಾವತ್ತೂ ತಿನ್ನಿಸಬೇಡಿ. ಅಡುಗೆಯ ಮನೆಗಳು ಕೂಡ ಕಾಯಿಲೆ ಮುಕ್ತವಾಗಲಿ.

ಬರಹ :
ಡಾ. ಶ್ರೀಶೈಲ ಬದಾಮಿ
M. Pharm, PhD. ಧಾರವಾಡ, 9480640182
Advertisement

Health kitchens of old are now a corner. The practice of standing cooking is now in effect in the villages as well. New home builders are having similar kitchens. No one has any concept of what is better for women’s health, cooking while standing or cooking while sitting!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

40 mins ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

4 hours ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

5 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

3 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

4 days ago