ಕೆಲವು ದಿನಗಳಿಂದ ತಾಪಮಾನದ ಏರಿಕೆಯ ಮೂಲಕ ಸುದ್ದಿಯಾಗಿದ್ದ ಕರಾವಳಿ ಜಿಲ್ಲೆಯಲ್ಲಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆಯಾಗಿದೆ. ಸಂಜೆ ಸುಳ್ಯ-ಪುತ್ತೂರು ಹಾಗೂ ಆಸುಪಾಸಿನ ತಾಲೂಕುಗಳಲ್ಲಿ ಮಳೆಯಾಗಿದ್ದರೆ ರಾತ್ರಿ ವೇಳೆ ಎರಡನೇ ಬಾರಿಗೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಸುಳ್ಯದ ವಿವಿದೆಡೆ ಮಳೆಯಾಗಿದೆ. ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲೂ ಮಳೆಯಾಗಿದೆ. ಕಕ್ಕಿಂಜೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ ಎಂದು ಕೃಷಿಕರು ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಕೊಡಗಿನ ಕೆಲವು ಕಡೆ, ಚಿಕ್ಕಮಗಳೂರು , ಮೂಡಿಗೆರೆ ಪ್ರದೇಶದ ಕೆಲವು ಕಡೆ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ತಾಪಮಾನ ಏರಿಕೆಯಿಂದ ಕರಾವಳಿ ಜಿಲ್ಲೆಯ ಜನರು ಆತಂಕಕ್ಕೂ ಒಳಗಾಗಿದ್ದರು. ಕೃಷಿ ನಷ್ಟವಾಗುವ ಆತಂಕ್ಕೆ ಒಳಗಾಗಿದ್ದರು. ಇದೀಗ ಮಳೆಯಾಗುವ ಮೂಲಕ ತಾಪಮಾನ ಇಳಿಕೆಯಾಗಿದೆ, ಆದರೆ ಅಡಿಕೆ ಬೆಳೆಯ ಮೇಲೆ ಪರಿಣಾಮ ಬೀರಬಹುದು ಎನ್ನುವ ಭೀತಿಯನ್ನು ಕೃಷಿಕರು ವ್ಯಕ್ತಪಡಿಸಿದ್ದಾರೆ.………ಮುಂದೆ ಓದಿ……..
ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…
ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್ಡಿಎಂ ಶಾಲೆ, ಮಂಗಳೂರು…
ಮುಂದಿನ 2 ರಿಂದ 3 ದಿನಗಳಲ್ಲಿ ದೇಶದ ಪೂರ್ವ, ಪಶ್ಚಿಮ, ಮಧ್ಯ ಮತ್ತು…
ರೈತರು ಹೊಲಗಳಲ್ಲಿ ಬಳಕೆ ಮಾಡುತ್ತಿರುವ ರಸಗೊಬ್ಬರಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ವೈಜ್ಞಾನಿಕ…
ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮತ್ತು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ದೂರಶಿಕ್ಷಣದ ಮೂಲಕ ತರಬೇತಿ…
ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490