ಮೈಸೂರು ದಸರಾ (Mysuru Dasara) ಅಂದ್ರೆ ಅದು ನಮ್ಮ ನಾಡಿನ ಹೆಮ್ಮೆ. ಒಂಭತ್ತು ದಿನಗಳ ಕಾಲ ನಮ್ಮ ರಾಜ್ಯದ ಸಾಂಸ್ಕೃತಿಕ ಲೋಕವೇ ಅನಾವರಣಗೊಳ್ಳುತ್ತದೆ. ದೇಶ ವಿದೇಶಗಳಿಂದ ಜಂಬೂ ಸವಾರಿ ನೋಡಲು ಬರುತ್ತಾರೆ. ಆದರೆ ಈ ಬಾರಿ ಜಂಬೂ ಸವಾರಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸರ್ಕಾರ ಶಾಕ್ ನೀಡಿದೆ. ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು ವೀಕ್ಷಣೆಗೆ ಇಂದಿನಿಂದ ಟಿಕೆಟ್ (Tickets) ಮಾರಾಟ ಪ್ರಾರಂಭವಾಗಲಿದೆ. ಆದರೆ ಉಚಿತ ಗ್ಯಾರಂಟಿಗಳ ಅಬ್ಬರದಲ್ಲಿ ಮೈಸೂರು ದಸರಾ ಟಿಕೇಟ್ ದುಬಾರಿಯಾಗಿದೆ.
ಇಂದು 10 ಗಂಟೆ ನಂತರ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಮಾರಾಟವಾಗಲಿದೆ. www.mysoredasara.gov.in ಮೂಲಕ ಟಿಕೆಟ್ ಖರೀದಿ ಮಾಡಬಹುದು. ಆನ್‌ಲೈನ್ ಹೊರತುಪಡಿಸಿ ಬೇರೆ ಕಡೆ ಟಿಕೆಟ್ ಮಾರಾಟ ಇಲ್ಲ. ಒಬ್ಬರಿಗೆ 2 ಗೋಲ್ಡ್ ಕಾರ್ಡ್ ಹಾಗೂ ಒಬ್ಬರಿಗೆ 2 ಪಾಸ್ ಖರೀದಿಗೆ ಅವಕಾಶವಿದೆ. ಗ್ಯಾರಂಟಿ ಸ್ಕೀಂ ಸರ್ಕಾರದಲ್ಲಿ ಅರಮನೆ ಒಳಗೆ ದಸರಾ ಜಂಬೂ ಸವಾರಿ ವೀಕ್ಷಣೆ ದುಬಾರಿ ಎನಿಸಿಕೊಂಡಿದೆ. ಅರಮನೆ ಆವರಣದಲ್ಲಿ ದಸರಾ ವೀಕ್ಷಣೆಗೆ 3 ಹಾಗೂ 2 ಸಾವಿರ ರೂ. ದರ ನಿಗದಿಯಾಗಿದೆ. ಆನ್ ಲೈನ್ ಮೂಲಕ ಟಿಕೆಟ್ ಖರೀದಿಗೆ ಅವಕಾಶವಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಟಿಕೆಟ್ ಖರೀದಿಸಬಹುದು. ಮೈಸೂರುದಸರಾ.ಗವ್.ಇನ್ ವೆಬ್ ಸೈಟ್ ಮೂಲಕ ಟಿಕೆಟ್ ಖರೀದಿ ಮಾಡಬಹುದು.
ಯಾವ ಟಿಕೆಟ್‌ಗೆ ಎಷ್ಟು ಬೆಲೆ?
ಗೋಲ್ಡ್ ಕಾರ್ಡ್ – 6,000 ರೂ.
ಅರಮನೆ ಎ – 3,000 ರೂ.
ಅರಮನೆ ಬಿ – 2,000 ರೂ.
ಪಂಜಿನ ಕವಾಯತು – 500 ರೂ.
ಈ ಹಿಂದೆ 1,000 ರೂ. ಇದ್ದ ಟಿಕೆಟ್ ಬೆಲೆ ಇದೀಗ ಏಕಾಏಕಿ 2-3 ಸಾವಿರ ರೂ.ಗೆ ಏರಿಕೆಯಾಗಿದೆ. ಗೋಲ್ಡ್ ಕಾರ್ಡ್‌ಗೆ 6,000 ರೂ. ದರ ನಿಗದಿಯಾಗಿದ್ದು, ಪಂಜಿನ ಕವಾಯತು ವೀಕ್ಷಣೆಗೆ 500 ರೂ. ದರ ನಿಗದಿಪಡಿಸಲಾಗಿದೆ.
Tickets and gold cards will be sold after 10 am today. Tickets can be purchased through www.mysoredasara.gov.in. Tickets are not available anywhere other than online. One can buy 2 gold cards and 2 passes per person. Dussehra Jambu ride viewing inside the palace has become expensive under the guarantee scheme Govt.
- ಅಂತರ್ಜಾಲ ಮಾಹಿತಿ
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…