Advertisement
ಸುದ್ದಿಗಳು

ಪ್ಲಾಸ್ಟಿಕ್‌ ಮೇಲೆ ಮೇಲೆ ಸಿಟ್ಟು ಬೇಡ- ಐಡಿಯಾ ಮಾಡಿ…! | ಇಲ್ಲೊಂದು ಹೊಸ ಪ್ರಯೋಗ ಮಾಡಿದ್ದಾರೆ… | ಪ್ಲಾಸ್ಟಿಕ್ ತ್ಯಾಜ್ಯದಿಂದ ಟೈಲ್ಸ್…! |

Share

ನಮ್ಮ ಪರಿಸರಕ್ಕೆ ಬಹುದೊಡ್ಡ ತಲೆ ನೋವಾಗಿ ಕಾಡ್ತಿರೋದು ಕರಗಿಸಲಾಗ ಪ್ಲಾಸ್ಟಿಕ್ ಗಳು. ಎಷ್ಟೆ ಕಡಿವಾಣ ಹಾಕಿದರೂ ರಕ್ತ ಬೀಜಾಸುರನಂತೆ ಮತ್ತೆ ಹುಟ್ಟಿಕೊಳ್ಳುತ್ತೆ. ಹಾಗೆ ಜನ ಕೂಡ ಪ್ಲಾಸ್ಟಿಕ್‌ ಇಲ್ಲದಿದ್ದರೆ ನಾವು ಬದುಕೋದು ಕಷ್ಟ ಅನ್ನುವಷ್ಟರ ಮಟ್ಟಿಗೆ ಕ್ಲೋಸ್ ಆಗ್ಬಿಟ್ಟಿದ್ದಾರೆ. ಏನೆ ಆದ್ರೂ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಮುಕ್ತಿ ಹಾಡಲೇ ಬೇಕಾಗಿದೆ. ಬೇಡದ ಪ್ಲಾಸ್ಟಿಕ್ ಗಳನ್ನು ಎಷ್ಟುಂತ ಗುಡ್ಡೆ ಹಾಕಬಹುದು…?

ಅದಕ್ಕೆ ಈಗ ಉತ್ತರ ಕನ್ನಡ ಜಿಲ್ಲೆಯ  ಕಾರವಾರದ ನಗರ ಸಭೆ ಹೊಸ ಐಡಿಯಾವೊಂದನ್ನು ಮಾಡಿದೆ. ಸದ್ಯ ಕಾರವಾರ ನಗರಸಭೆ ವ್ಯಾಪ್ತಿಯ ಕಲಿಕಾ ಕೇಂದ್ರದ ಫ್ಲೋರಿಂಗ್​ಗೆ ಪ್ಲಾಸ್ಟಿಕ್​ ವೇಸ್ಟ್​ಗಳನ್ನು ಬಳಸಲಾಗಿದೆ. ಥೇಟ್ ಕಾಂಕ್ರೀಟ್ ಅಥವಾ ಸಿಮೆಂಟ್ ಇಂಟರ್​ಲಾಕ್​ಗಳಂತೆಯೇ ಕಾಣೋ ಪಕ್ಕಾ ಪ್ಲಾಸ್ಟಿಕ್​ನಿಂದ ತಯಾರಿಸಿದ ಟೈಲ್ಸ್ ಗಳನ್ನು ಅಳವಡಿಸಿದೆ.

ನೋಡಲು ಗಟ್ಟಿಮುಟ್ಟಾಗಿ ಕಾಣುವ ಈ ಟೈಲ್ಸ್​ಗಳು ಆಕರ್ಷಕವಾಗಿಯೂ ಇವೆ. ಮೇಲಾಗಿ ಉಳಿದ ಟೈಲ್ಸ್​ನಂತೆ ಇವು ಒಡೆದು ಹೋಗೋದಿಲ್ಲ. ಸಾಮಾನ್ಯವಾಗಿ ನಡೆದಾಡಿಕೊಂಡು ಹೋಗೋರೆಲ್ಲ ಇದೇನೋ ಸಾಮಾನ್ಯ ಸಿಮೆಂಟ್ ಇಂಟರ್​ಲಾಕ್​ಗಳು ಅಂದ್ಕೊಳ್ತಾರೆ. ಆದ್ರೆ ಈ ಇಂಟರ್​ಲಾಕ್ ಅಥವಾ ಟೈಲ್ಸ್​ಗಳು ತಯಾರಿಸಿರೋದು ಪ್ಲಾಸ್ಟಿಕ್ ವೇಸ್ಟೇಜ್​ನಿಂದ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಪ್ಲಾಸ್ಟಿಕ್​ನಿಂದ ಟೈಲ್ಸ್ ಮಾಡುವ ಕಂಪೆನಿಯೊಂದಿದೆ. ಈ ಬಗ್ಗೆ ವಿಷಯ ತಿಳಿದುಕೊಂಡು ಕಾರವಾರ ನಗರಸಭೆಯು ಅಂತಹದ್ದೇ ಪ್ಲಾಂಟ್​ನ್ನ ಕಾರವಾರದಲ್ಲೂ ತಯಾರಿಸಲು ನಿರ್ಧರಿಸಿದೆ. ಈ ಮಧ್ಯೆ ಬೆಳ್ತಂಗಡಿಯಿಂದಲೇ ಟೈಲ್ಸ್ ತರಿಸಿಕೊಂಡು ಕಲಿಕಾಕೇಂದ್ರದ ಫ್ಲೋರಿಂಗ್ ತಯಾರಿಸಲಾಗಿದೆ. ಇನ್ನೇನು ಇದೇ ರೀತಿಯ ಟೈಲ್ಸ್ ತಯಾರಿಕಾ ಘಟಕ ಕಾರವಾರದಲ್ಲೂ ತಲೆ ಎತ್ತಲಿದೆ.

ಹೀಗೆ ಆದಲ್ಲಿ ಕಾರವಾರದಲ್ಲಿ ಪ್ರತಿದಿನ ಸಂಗ್ರಹಿಸುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಮುಕ್ತಿ ಸಿಕ್ಕಂತಾಗುವುದಲ್ಲದೇ, ಪರಿಸರ ಸ್ನೇಹಿ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಕೇವಲ ಕಾರವಾರದಲ್ಲಿ ಮಾತ್ರವಲ್ಲದೆ ಪ್ರತೀ ನಗರ ಸಭೆ, ವಾರ್ಡ್ಗಳಲ್ಲಿ ಇಂಥ ಘಟಕಗಳನ್ನು ಅಳವಡಿಸಿದ್ರೆ ಅತೀ ಶೀಘ್ರ ಹಾಗೂ ಪರಿಣಾಮಕಾರಿಯಾಗಿ ಪ್ಲಾಸ್ಟಿಕ್ ಎಂಬ ಪೆಡಂಭೂತಕ್ಕೆ ಅಂತ್ಯ ಹಾಡಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

21 hours ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

1 day ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

1 day ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

2 days ago

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?

ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…

2 days ago

ಮಂಗಳೂರು ಅಡಿಕೆ ಮಾರುಕಟ್ಟೆ | ಐದು ವರ್ಷದ ಧಾರಣೆ ಹೇಳುವ ಏರುಪೇರುಗಳ ಕಥೆ..!

ಐದು ವರ್ಷದ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿರುವುದನ್ನು ತೋರಿಸಿದೆ.…

2 days ago