ಇವತ್ತು ರೈತರ ದಿನಾಚರಣೆ(Farmers day) ಅಂತೆ. ಕೃಷಿ ಗುಂಪುಗಳಲ್ಲಿ ಇತರೆ ಜಾಲತಾಣದಲ್ಲಿ(Social Media)”ರೆಡಿಮೇಡ್”(Ready-made) ಶುಭಾಶಯಗಳ(greetings) ಹಂಚಿಕೆಯಾಗುತ್ತಿದೆ. ದುರಂತ(tragedy) ಎಂದರೆ ಬೇರೆಲ್ಲಾ ದಿನಾಚರಣೆಗಳನ್ನು ಆಚರಿಸಲು(celebration ) ಸಮಾಜಕ್ಕೆ(Social) ಮತ್ತು ನಮ್ಮ ರಾಜಕೀಯ ವ್ಯವಸ್ಥೆಗಿರುವ(Political system) ಖುಷಿ “ರೈತ ದಿನಾಚರಣೆ” ಆಚರಣೆಗಿಲ್ಲ..!? ನಾವು ರೈತರು(Farmers) ನಮಗೆ “ನಾವೇ” ಶುಭಾಶಯಗಳನ್ನ” ಕೋರಿಕೊಳ್ಳಬೇಕಾಗಿದೆ”…
ಬದಲಾದ ಋತುಮಾನ, ಯಾವುದೇ ಔಷಧಕ್ಕೂ ಬಗ್ಗದ ಕೃಷಿ ರೋಗಗಳು, ಉತ್ಪಾದನಾ ವೆಚ್ಚಕ್ಕೂ ಮಾರುಕಟ್ಟೆ ಬೆಲೆಗೂ ತಾಳೆಯಾಗದ ಕೃಷಿ ಉತ್ಪನ್ನದ ಬೆಲೆಗಳೂ, ಕೃಷಿ ಬದುಕನ್ನ ಮಾಡಲು ಬರದ ಮೂರು ನಾಲ್ಕನೇ ತಲೆಮಾರಿನ ಪೀಳಿಗೆ… ಕೃಷಿಯಲ್ಲೀಗ ವೃದ್ದ ಕೃಷಿಕರು ಮತ್ತು ಕೂಲಿ ಕಾರ್ಮಿಕರು… ಸರ್ಕಸ್ ಕಂಪೆನಿಯವರು ಊರ ಬಯಲಿನಲ್ಲಿ ಪ್ರದರ್ಶನ ಹಾಕಿ ಒಂದು ದಿನ ಪ್ರದರ್ಶನ ಮುಗಿಸಿ ಟೆಂಟು ಕಿತ್ತು ತಮ್ಮ ಸಾಮಾನು ಸರಂಜಾಮಿನ ಸಹಿತ ಇನ್ನೊಂದು ಊರಿಗೆ ಹೋಗುವಂತೆ ಕೃಷಿ ಬದುಕೂ ಟೆಂಟ್ ಕಿತ್ತು ಇನ್ನೊಂದು ಬದುಕಿನತ್ತ ಹೋಗುವ ಬದಲಾವಣೆ ಆಗುವ “ಆಟ” ದಂತೆ ಎನಿಸುತ್ತಿದೆ.
ಈ ಅಸ್ಥಿರ ಅಭದ್ರ ಯಾರಿಗೂ ಬೇಡವಾದ ಅನ್ನ ಆಹಾರ ಕೊಡುವ ರಂಗದ ” ಕಿಸಾನ”ರಿಗೆ ಶುಭಾಶಯ ಹೇಳುವುದೋ “ಶುಭ ವಿದಾಯ” ಹೇಳುವುದೋ ಅರಿವಾಗದಾಗಿದೆ...!! ಸದ್ಯಕ್ಕೆ ನಮಗೆ ನಾವೇ ಜಯ್ ಎನ್ನೋಣ…. “ಜಯ್ ಕಿಸಾನ್ “… ರೈತ ಬಂಧುಗಳೇ ಪರಸ್ಪರ ಶುಭಾಶಯಗಳು…
Today is Farmers Day. “Ready-made” greetings are being shared among farming groups and other websites. The tragedy is that there is no celebration of “Farmer’s Day” for the society and our political system to celebrate all the other days..!? We farmers have to “wish” for “ourselves”…
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…