Advertisement
MIRROR FOCUS

ಈಗ ಚಾಲಿ ಅಡಿಕೆಗೆ 500..!

Share

ಈಗ ಚಾಲಿ ಅಡಿಕೆ ಧಾರಣೆ ಅಧಿಕೃತವಾಗಿ 500 ರೂಪಾಯಿಗೆ ತಲುಪಿದೆ. ಕ್ವಿಂಟಾಲ್‌ಗೆ 50,000 ರೂಪಾಯಿ. ಡಬಲ್‌ ಚೋಲ್‌ ಅಡಿಕೆಗೆ ಕೆಜಿಗೆ 530 ರೂಪಾಯಿಗೆ ಖರೀದಿ ಆರಂಭವಾಗಿದೆ. ಕ್ಯಾಂಪ್ಕೊ ಹಾಗೂ ಇತರ ಸಹಕಾರಿ ಸಂಸ್ಥೆಗಳು ಅಡಿಕೆ ಧಾರಣೆಯನ್ನು ಏರಿಕೆ ಮಾಡಿವೆ. ಇದೇ ವೇಳೆ ಹೊಸ ಚಾಲಿ ಅಡಿಕೆ ಅಂದರೆ ಈ ವರ್ಷದ ಅಡಿಕೆಗೆ ಕೂಡಾ 10 ರೂಪಾಯಿ ಏರಿಕೆ ಕಂಡಿದ್ದು 360 ರೂಪಾಯಿಗೆ ಖರೀದಿ ಆರಂಭವಾಗಿದೆ. ಇದರ ಬೆನ್ನಲ್ಲೇ ಕರಿಗೋಟು, ಸಿಪ್ಪೆಗೋಟು ಧಾರಣೆ ಕೂಡಾ ಏರಿಕೆಯಾಗಿದೆ.

ಕಳೆದ ಕೆಲವು ದಿನಗಳಿಂದ 490-495 ರೂಪಾಯಿಯಲ್ಲಿ ಇದ್ದ ಅಡಿಕೆ ಧಾರಣೆ ಈಗ ಅಧಿಕೃತವಾಗಿ 500 ರೂಪಾಯಿಗೆ ತಲುಪಿದೆ.ಕ್ಯಾಂಪ್ಕೊ ಹಾಗೂ ಮಾಸ್‌ ಮತ್ತು ಇತರ ಸಹಕಾರಿ ಸಂಸ್ಥೆಗಳು 500 ರೂಪಾಯಿಗೆ ಖರೀದಿ ಆರಂಭ ಮಾಡಿದೆ. ಇದೇ ವೇಳೆ ಖಾಸಗಿ ಮಾರುಕಟ್ಟೆ 508-510 ರೂಪಾಯಿವರೆಗೆ ಖರೀದಿ ಮಾಡುತ್ತಿವೆ. ಡಬಲ್‌ ಚೋಲ್‌ ಅಡಿಕೆ 530 ರೂಪಾಯಿಗೆ ಖರೀದಿ ಮಾಡುತ್ತಿವೆ. ಹೀಗಾಗಿ ಹಳೆ ಅಡಿಕೆ ಮತ್ತು ಡಬಲ್‌ ಚೋಲ್‌ ಅಡಿಕೆಯ ನಡುವಿನ ವ್ಯತ್ಯಾಸ 20 ರೂಪಾಯಿಗೆ ಬಂದಿದೆ. ಈಗ ಹೊಸ ಅಡಿಕೆ ಕೂಡಾ ಏರಿಕೆ ಕಾಣಲು ಆರಂಭವಾಗಿದೆ. ಈ ವರ್ಷ ಕೊಳೆರೋಗದಿಂದ ಅಡಿಕೆ ಕೊರತೆಯಾಗಿದೆ. ಈಗಾಗಲೇ ಗ್ರಾಮೀಣ ಭಾಗದ ಅಡಿಕೆ ವರ್ತಕರು ಕೆಲವರು ದಿನಕ್ಕೆ ಕ್ವಿಂಟಾಲ್‌ ‌3-4 ಕ್ವಿಂಟಾಲ್ ಕರಿಗೋಟು ಅಂದರೆ ರೋಗದಿಂದ ಬಾಧಿತವಾಗಿ ಬಿದ್ದ ಅಡಿಕೆಯನ್ನು ಖರೀದಿ ಮಾಡುತ್ತಿದ್ದಾರೆ. ಒಂದೆರಡು ವಾರದ ಬಳಿಕ ಅಡಿಕೆಯು ಮಾರುಕಟ್ಟೆಗೆ ಬರುವ ವೇಳೆ ಹೊಸ ಅಡಿಕೆ ಧಾರಣೆಯೂ 375 ರೂಪಾಯಿವರೆಗೆ ಏರಿಕೆಯ ನಿರೀಕ್ಷೆ ಇದೆ. ಈ ವರ್ಷ ಅಡಿಕೆಯ ಕೊರತೆ ಇರುವುದು ಖಚಿತ. ಈ ಕಾರಣದಿಂದ ಅಡಿಕೆ ಮಾರುಕಟ್ಟೆ ಏರಿಕೆಯಾಗುವ ಸಾಧ್ಯತೆಯೇ ಹೆಚ್ಚಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ಪ್ರದೇಶದಲ್ಲಿ ಅಡಿಕೆ ಧಾರಣೆ 66,000 ರೂಪಾಯಿ ಸಮೀಪಕ್ಕೆ ತಲುಪಿದೆ. ಇದೇ ವರ್ಷದ ಆರಂಭದಲ್ಲಿ ಅಂದರೆ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಡೆ ಇದ್ದ ಕ್ವಿಂಟಾಲ್‌ ಅಡಿಕೆ ಧಾರಣೆ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತ ಏರಿಕೆ ಆಗುತ್ತಲಿತ್ತು.  ತೀರ್ಥಹಳ್ಳಿ, ಸೋರಬ ಮತ್ತು ಕೊಪ್ಪ ಅಡಿಕೆ ಮಾರುಕಟ್ಟೆಗಳಲ್ಲಿ ಹೊಸ ರಾಶಿ ಮತ್ತು ಹಳೆ ರಾಶಿ ಎರಡರ ದರಗಳಲ್ಲಿ ಸ್ಥಿರತೆ ಮತ್ತು ಸ್ವಲ್ಪ ಏರಿಕೆ ಕಂಡುಬಂದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಾಂಪೌಂಡ್ ರಬ್ಬರ್ ಆಮದು ಹೆಚ್ಚಳ : 10 ವರ್ಷಗಳ ವಿವರ ಲೋಕಸಭೆಯಲ್ಲಿ ಬಹಿರಂಗ

ಕಾಂಪೌಂಡ್ ರಬ್ಬರ್ ಆಮದು ಕುರಿತು ಕಳೆದ 10 ವರ್ಷಗಳ ಅಂಕಿಅಂಶಗಳನ್ನು ಕೇಂದ್ರ ಸರ್ಕಾರ…

8 hours ago

ದಾಖಲೆಯ ಆಹಾರಧಾನ್ಯ ಉತ್ಪಾದನೆ | 10 ವರ್ಷಗಳಲ್ಲಿ 357 ಮಿಲಿಯನ್ ಟನ್

ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 357 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದನೆಯಾಗಿ ಹೊಸ…

8 hours ago

ಒಂದೇ ತೋಟದಲ್ಲಿ ಹಲವು ಬೆಳೆ – ವರ್ಷಪೂರ್ತಿ ಆದಾಯ | ಗದಗದ ರೈತ ಸಹೋದರರ ಸಮಗ್ರ ಕೃಷಿ ಮಾದರಿ

ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಹೋದರರು ತಮ್ಮ 10 ಎಕರೆ ಜಮೀನಿನಲ್ಲಿ…

16 hours ago

ಅಡಿಕೆ ಇಳುವರಿ ಕುರಿತು “ದ ರೂರಲ್ ಮಿರರ್.ಕಾಂ” ಸಮೀಕ್ಷೆ | ಬಹುತೇಕ ತೋಟಗಳಲ್ಲಿಅಡಿಕೆ ಇಳುವರಿ ಕುಸಿತ

ಅಡಿಕೆ ಬೆಳೆಗಾರರ ವಾಸ್ತವ ಪರಿಸ್ಥಿತಿಯನ್ನು ಅರಿಯಲು ದ ರೂರಲ್ ಮಿರರ್.ಕಾಂ ನಡೆಸಿದ ಸಮೀಕ್ಷೆಯಲ್ಲಿ…

16 hours ago

ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ | ಮಾರ್ಚ್‌ ತಿಂಗಳ ಇಳಿಕೆಗೆ ಹಲವು ಕಾರಣ…

ಇತ್ತೀಚೆಗೆ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬರುತ್ತಿದೆ. ವ್ಯಾಪಾರಿಗಳ ನಿಧಾನ ಖರೀದಿ,…

1 day ago

ಪೂರ್ವ ಮುಂಗಾರು ಸಿಡಿಲು, ಗಾಳಿ ಮಳೆಗೆ ಮುನ್ನೆಚ್ಚರಿಕೆ ವಹಿಸಿ : ವಿಜಯನಗರ ಜಿಲ್ಲಾಧಿಕಾರಿ ಸೂಚನೆ

ಪೂರ್ವ ಮುಂಗಾರು ಅವಧಿಯಲ್ಲಿ ಗುಡುಗು-ಸಿಡಿಲು ಹಾಗೂ ಗಾಳಿ ಮಳೆಯ ಅಪಾಯ ಇರುವ ಹಿನ್ನೆಲೆಯಲ್ಲಿ…

1 day ago