ಭಟ್ಟರು ಬೆಳಗಿನ ಜಾವಕ್ಕೆ ನಾಲ್ಕು ಗಂಟೆಗೆ ಅಲರಾಂ ಸದ್ದಿಗೆ ಎದ್ದು ಅಂಗೈ ನೋಡಿಕೊಂಡು “ಕರಾಗ್ರೆ ವಸತೆ ” ಶ್ಲೋಕ ಹೇಳಿ ಪ್ರಾಥಕಾರ್ಯ ಮುಗಿಸಿ ಒಂದು ಲೋಟ “ಕಾಪಿ” ಕುಡುದವರೇ ಬರ ಬರ ಛತ್ರಿ ಹಿಡಕೊಂಡು ಬ್ಯಾಟರಿ ಬಿಟ್ಟುಕೊಂಡು “ಅವರ ಮನೆಗೆ ” ಹೊರಟರು. ತಾನೇ ಎಲ್ಲದರಲ್ಲೂ ಮುಂದೆ .. ಎಲ್ಲದರಲ್ಲೂ ಮೊದಲು ಎಂಬ ಹಮ್ಮಿನ ಭಟ್ಟರಿಗೆ “ಈ ವಿಚಾರದಲ್ಲೂ ತಾನೇ ಮೊದಲು” ಆಗಬೇಕು ಎಂಬ ಗುರಿ…!
ಆ ಮನೆ ಸಮೀಪಿಸುತ್ತಿದ್ದಂತೆ ಆ ಮನೆಯ ಬೇಲಿ ಸಾಲಿನಲ್ಲಿ ಒಂದರ ಹಿಂದೆ ಒಂದರಂತೆ ಡಸ್ಟರ್ , ಸಿಫ್ಟ್ ಡಿಸೈರು, ಇಟೀಯೋಸು, ಥಾರು, ಸ್ಕಾರ್ಪಿಯೋ, ಐ ಟ್ವೆಂಟಿ , ಬೆಲೆನೋ ಕಾರುಗಳ ಸಾಲು ಎದುರಾಗಿ ಭಟ್ಟರ ಎದೆ ದಸಕ್ಕೆಂದಿತು. ಅವರ ಮನೆಯ ಉಣಗೋಲು ಸರಸಿ “ಆ ಮನೆಯ ಅಂಗಳಕ್ಕೆ ” ಕಾಲಿಟ್ಟರು. ಅಂಗಳದ ಕಡಿಮಾಡಿನಲ್ಲಿ ಹತ್ತು ಹನ್ನೆರಡು ಜನ ಟವಲ್ ಹೊದ್ದುಕೊಂಡು, ಶಾಲು ಹೊದ್ದುಕೊಂಡು ಕೂತಿದಾರೆ.
ಭಟ್ಟರು – ಹೋ ರಾಮ ರಾಮ …. (ಕರೆಗೆ ಒಳಗಿನಿಂದ ಸ್ಪಂದನೆಯಿಲ್ಲ)
ಕಡೀಕೆ ಭಟ್ಟರು – ಹೋ ರಾಮಣ್ಣ ರಾಮಣ್ಣ… (ಅಂತ ಗೌರವಯುತವಾಗಿ ಕರೆದರು)
ಒಳಗಿನಿಂದ ರಾಮ ನ ಹೆಂಡತಿ ಜಲಜ ಹೊರ ಬಂದಲು.
ಭಟ್ಟರೆ ಈ ಟೋಕನ್ ತಗಳಿ. ನಿಮ್ಮ ಟೋಕನ್ ನಂ ಹನ್ನೆರಡು. ಇವರನ್ನ ಎದ್ದಿಲ್ಲ. ಎಂಟು ಗಂಟೆಗೆ ಹೆರ್ಗೆ ಬಂದು ಟೋಕನ್ ಪ್ರಕಾರ ನೋಡ್ತಾರೆ…” ಅಂದು ಭಟ್ಟರಿಗೆ ಟೊಕನ್ ಕೊಟ್ಟಳು.
ಭಟ್ಟರು ಆಶ್ಚರ್ಯ ಚಿಕಿತರಾಗಿ ಟೋಕನ್ ನೋಡ್ತಾ ಬಾಯಿ ಬಿಟ್ಟಾಗ ಜಲಜ ಭಟ್ಟರಿಗೆ – “ಭಟ್ಟರೆ ಇಲ್ಲಿ ಅಂಗಳದಲ್ಲಿ ಕೂತಿದಾರಲ್ಲಾ ಅವರೆಲ್ಲ ರಾತ್ರಿನೇ ಬಂದು ಟೋಕನ್ ತಗೊಂಡು ” ಇವರ ಹತ್ತಿರ ಔಷಧ ಡೇಟ್ ತಗಣಕ್ಕೆ ಟೋಕನ್ ತಂಗಡ್ ಕಾಯ್ತದರೆ.. ನೀವು ಬಂದದ್ದು ತಡ ಆತು.. ಟೋಕನ್ ಬಗ್ಗೆ ಮಾಹಿತಿ ಬೇಕಾರೆ ಈ ಗ್ಯಾಡೆಲಿರೋ ಬೋರ್ಡು ಓದಿ. ” ಅಂತ ಹೇಳಿ ಮನೆಯೊಳಗೆ ಹೋಗಿ ಬಾಗಿಲು ಹಾಕಿ ಕೊಂಡಳು. ಭಟ್ಟರು ಆ ಬೋರ್ಡ್ ಓದಲು ಶುರು ಮಾಡಿದರು.
“” ಶ್ರೀ ಪಂಜುರ್ಲಿಯೇ ನಮಃ””
ಆತ್ಮೀಯ ಅಡಿಕೆ ತೋಟದ ಮಾಲಿಕರಿಗೆ…..
ಸಹಕಾರವಿರಲಿ…
ವಂದನೆಗಳು
ರಾಮಣ್ಣ..
ಕೊನೆಗಾರರು.
ಕೊಳೆತೋಟ ಗ್ರಾಮ.
ಅಡಿಕೆಹಿತ್ತಲು (ವಿ)
ತೀರ್ಥಹಳ್ಳಿ ತಾಲ್ಲೂಕು.
ಸಮಾಪ್ತಿ
ಭಟ್ಟರು ಕುಸುದ್ ಅಂಗಳದಲ್ಲಿ ಹಾಕಿದ್ದ ಕೂತ್ರು. ಹಂಗೂ ಹಿಂಗೂ ಬೆಳಿಗ್ಗೆ ಎಂಟು ಗಂಟೆ ಆತು. ಶ್ರೀಮಾನ್ ರಾಮಣ್ಣನವರು ಒಂದು ಡೈರಿ ಬುಕ್ ಹಿಡಕೊಂಡು ಮನೆಯೊಳಗಿನಿಂದ ಹೊರಗೆ ಬಂದರು. ಅಂಗಳದಲ್ಲಿ ಖುರ್ಚಿ ಮೇಲೆ ಕೂತಿದ್ದ ಎರಡು ಎಕರೆ , ನಾಲ್ಕು ಎಕರೆ, ಎಂಟು ಎಕರೆ, ಹತ್ತು ಎಕರೆ ಅಡಿಕೆ ತೋಟದ ಮಾಲೀಕರೆಲ್ಲರೂ ಥಟ್ ನೆ ಎದ್ದು ನಿಂತರು. ರಾಮಣ್ಣ ಎಲ್ಲ ಅಡಿಕೆ ತೋಟದವರಿಗೆ ಕೂರಲು ಕೈ ಸನ್ನೆ ಮಾಡಿದರು. ಎಲ್ರೂ ವಿನಮ್ರತೆಯಿಂದ ಕೂತರು.
ರಾಮಣ್ಣನ ಮುಖ ಗಜಗಾಂಭೀರ್ಯವಾಗಿತ್ತು. ಅಂಗಳದ ವಾತಾವರಣ "ಮೆಸೇಜ್ ಬೀಪ್ ಸೌಂಡ್ ಸೈಲೆನ್ಸ್'" ಆಗಿತ್ತು. ಟೋಕನ್ ಪ್ರಕಾರ ಒಬ್ಬೊಬ್ಬರೇ ರಾಮಣ್ಣನ ಡೈರಿಯಲ್ಲಿ ಔಷಧ ಸಿಂಪಡಣೆಯ ದಿನಾಂಕದ ಅಪಾಯ್ಮಂಟ್ ತೆಗದುಕೊಂಡು ಕೈಮುಗಿದು ಕೃತಾರ್ಥರಾಗಿ ಹೊರಗೆ ಹೊರಟರು. ಭಟ್ಟರ ಹನ್ನೆರಡನೇ ನಂ ಟೋಕನ್ ಬಂತು. ಭಟ್ಟರಿಗೆ ಆಗಷ್ಟ್ ಇಪ್ಪತ್ತನೇ ತಾರೀಖು ಔಷಧದ ದಿನಾಂಕ ಸಿಕ್ತು....!! ಭಟ್ಟರ ಬಾಯಿ ಚಪ್ಪೆ ಚಪ್ಪೆಯಾತು.. " ರಾಮಣ್ಣ... ಅಷ್ಟು ದಿನ ಬಾಳ ತಡಾ ಆಗುತ್ತದೆ.. ಅಷ್ಟೊತ್ತಿಗೆ ನಮ್ಮ ತ್ವಾಟದ ಅಡಿಕೆ ಕೊನೆಯಲ್ಲಿ ಕೊಳೆ ಬಂದ್ ಅಡಿಕೆ ಕೊನೆಯಲ್ಲಿ ಮೂರು ಮತ್ತೊಂದು ಕಾಯಿ ಉಳಿಯಬಹುದು ಅಷ್ಟೇ... " ಅಂತ ಕಣ್ಣೀರೇ ಹಾಕಿದರು. ರಾಮಣ್ಣ ನಿರ್ಲಿಪ್ತವಾಗಿ ನಿಷ್ಠೂರವಾಗಿ.. "ಭಟ್ಟರೆ ಅದಕ್ಕೆ ನಾನೇನೂ ಮಾಡೋಕೆ ಆಗೋಲ್ಲ... ಆಗ ಎಷ್ಟು ಕಾಯಿ ಉಳಿದಿರ್ತಾವೋ ಅಷ್ಟು ಕಾಯಿಗೆ ಔಷಧ ಸಿಂಪಡಣೆ ಮಾಡೋಣ..".. ಅಂದರು. ಭಟ್ಟರು ರಾಮಣ್ಣ ನ ಮಕ ನೋಡಿ ಆ ಗಾಂಭೀರ್ಯ ನೋಡಿ ಹೆಚ್ಚು ಮಾತನಾಡದೇ ರಾಮಣ್ಣ ನ ಮನೆಯಿಂದ ತಮ್ಮ ಮನೆಗೆ ನಿಧಾನವಾಗಿ ಹೊರಟರು. ಉಣುಗೋಲ್ ಮತ್ತೆ ಸರಿಸಿ ಮನೆಯ ಕಡೆ ಹೋಗುವಾಗ ಒಂದು ದೊಡ್ಡ ಮಳೆ ಬಂತು. ಛತ್ರಿ ಸಿಡಿಸಿ ಮನೆ ಕಡೆ ಹೋಗುವುದೇ ಮಾಡಿದರು. ಭಟ್ಟರು ಬುದ್ದಿವಂತ ಆಗಲಿಲ್ಲ... (ತಮಾಷೆ ಗಾಗಿ....)ಬರಹ :ಪ್ರಬಂಧ ಅಂಬುತೀರ್ಥ
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…